ಹಾಸನ: ಕಾಡಾನೆ ದಾಳಿಯಿಂದಾದ ಜೀವ, ಬೆಳೆ ಹಾನಿಗೆ ಪರಿಹಾರ ದ್ವಿಗುಣ- ಸಚಿವ ಕೆ. ಗೋಪಾಲಯ್ಯ

ರಾಜ್ಯಾದ್ಯಂತ ಕಾಡಾನೆ ದಾಳಿಯಿಂದ  ಉಂಟಾಗುತ್ತಿರುವ ಜೀವ ಹಾನಿ ,ಅಂಗ ವೈಕಲ್ಯತೆ , ಬೆಳೆಹಾನಿಗಳಿಗೆ ನೀಡುತ್ತಿರುವ ಪರಿಹಾರವನ್ನು ದ್ವಿಗುಣಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ ಎಂದು  ಅಬಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ ಗೋಪಾಲಯ್ಯ ತಿಳಿಸಿದ್ದಾರೆ.
ಗೋಪಾಲಯ್ಯ ಸಾಂದರ್ಭಿಕ ಚಿತ್ರ
ಗೋಪಾಲಯ್ಯ ಸಾಂದರ್ಭಿಕ ಚಿತ್ರ

ಹಾಸನ: ರಾಜ್ಯಾದ್ಯಂತ ಕಾಡಾನೆ ದಾಳಿಯಿಂದ ಉಂಟಾಗುತ್ತಿರುವ ಜೀವ ಹಾನಿ, ಅಂಗ ವೈಕಲ್ಯತೆ, ಬೆಳೆಹಾನಿಗಳಿಗೆ ನೀಡುತ್ತಿರುವ ಪರಿಹಾರವನ್ನು ದ್ವಿಗುಣಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ ಎಂದು ಅಬಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ ಗೋಪಾಲಯ್ಯ ತಿಳಿಸಿದ್ದಾರೆ.

ಅರಕಲಗೂಡು ತಾಲ್ಲೂಕಿನ ಹೊನ್ನೇನಹಳ್ಳಿಯಲ್ಲಿ 25 ಕೋಟಿ ರೂಪಾಯಿ ವೆಚ್ಚದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಇಂದಿರಾ ಗಾಂಧಿ ವಸತಿ ಶಾಲೆ ಕಟ್ಟಡ ಉದ್ಘಾಟಿಸಿ ಮಾತನಾಡಿದ ಅವರು, ಆನೆ ಹಾವಳಿ ತಡೆ ಕುರಿತು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಸಭೆ ಕರೆಯಲಾಗಿದೆ ಎಂದರು. 

ಜಿಲ್ಲೆಯ ಕಟ್ಟೆಪುರ ಹಾಗೂ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಗಳಲ್ಲಿ ಆನೆ ಕ್ಯಾಂಪ್ ತೆರೆಯಲು ಅನುಮತಿ ನೀಡಲಾಗಿದೆ. ಪುಂಡಾನೆಗಳಿಗೆ ರೆಡಿಯೋ‌ ಕಾಲರ್ ಅಳವಡಿಕೆ, ಸೌರ ಬೇಲಿ ನಿರ್ಮಾಣಕ್ಕೆ ಸಬ್ಸಿಡಿ ಶೇಕಡಾ 75 ರಷ್ಟು ಏರಿಕೆ ಸೇರಿದಂತೆ ಹಲವು  ನಿರ್ಣಯ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com