ಮೆಟ್ರೋ ಕ್ಯೂಆರ್‌ ಕೋಡ್‌ ಟಿಕೆಟ್‌ ವ್ಯವಸ್ಥೆಯಲ್ಲಿ ತಾಂತ್ರಿಕ ದೋಷ: ಕೆಲಕಾಲ ಪರದಾಡಿದ ಸಾರ್ವಜನಿಕರು!

ಬೆಂಗಳೂರು ಮೆಟ್ರೊ ರೈಲು ನಿಗಮ ನಿಯಮಿತ ಇತ್ತೀಚೆಗೆ ಆರಂಭಿಸಿರುವ ಕ್ವಿಕ್ ರೆಸ್ಪಾನ್ಸ್ (ಕ್ಯೂಆರ್) ಟಿಕೆಟಿಂಗ್ ವ್ಯವಸ್ಥೆಯಲ್ಲಿ ತಾಂತ್ರಿಕ ದೋಷ ಕಂಡು ಬಂದ ಹಿನ್ನೆಲೆಯಲ್ಲಿ ಕೆಲ ಕಾಲ ಸಾರ್ವಜನಿಕರು ಸಂಕಷ್ಟಕ್ಕೆ ಸಿಲುಕುವಂತಾಗಿತ್ತು.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಬೆಂಗಳೂರು ಮೆಟ್ರೊ ರೈಲು ನಿಗಮ ನಿಯಮಿತ ಇತ್ತೀಚೆಗೆ ಆರಂಭಿಸಿರುವ ಕ್ವಿಕ್ ರೆಸ್ಪಾನ್ಸ್ (ಕ್ಯೂಆರ್) ಟಿಕೆಟಿಂಗ್ ವ್ಯವಸ್ಥೆಯಲ್ಲಿ ತಾಂತ್ರಿಕ ದೋಷ ಕಂಡು ಬಂದ ಹಿನ್ನೆಲೆಯಲ್ಲಿ ಕೆಲ ಕಾಲ ಸಾರ್ವಜನಿಕರು ಸಂಕಷ್ಟಕ್ಕೆ ಸಿಲುಕುವಂತಾಗಿತ್ತು.

ಸೋಮವಾರ ಸಂಜೆ 4.30ರ ಸುಮಾರಿಗೆ ಕ್ಯೂಆರ್‌ ಕೋಡ್‌ ಟಿಕೆಟ್‌ ವ್ಯವಸ್ಥೆಯಲ್ಲಿ ತಾಂತ್ರಿಕ ದೋಷಗಳು ಕಂಡು ಬಂದಿತ್ತು. ಸರ್ವರ್ ಕ್ರ್ಯಾಶ್ ಆದ ಪರಿಣಾಮ ಸಾರ್ವಜನಿಕರು ಪರದಾಡುವಂತಾಗಿತ್ತು.

ಸರ್ವರ್ ನಲ್ಲಿ ತಾಂತ್ರಿಕ ದೋಷಗಳು ಕಂಡು ಬಂದಿದ್ದು, ದೋಷಗಳ ಸರಿಪಡಿಸುವ ಪ್ರಕ್ರಿಯೆ ನಡೆಯುತ್ತಿದೆ ಎಂದು ಉನ್ನತ ಮೆಟ್ರೋ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಬಿಎಂಆರ್'ಸಿಎಲ್ ಕ್ಯೂಆರ್‌ ಕೋಡ್‌ ಟಿಕೆಟ್‌ ವ್ಯವಸ್ಥೆಯನ್ನು ಸಾರ್ವಜನಿಕರಿಗೆ ಕರ್ನಾಟಕ ರಾಜ್ಯೋತ್ಸವದ ಉಡುಗೊರೆಯಾಗಿ ನವೆಂಬರ್ 1 ರಂದು ಪ್ರಾರಂಭಿಸಿತ್ತು. ಈ ವ್ಯವಸ್ಥೆಯಲ್ಲಿ ಮತ್ತಷ್ಟು ಅಭಿವೃದ್ಧಿ ತಂದ ಬಿಎಂಆರ್'ಸಿಎಲ್, ಡಿಸೆಂಬರ್ 8 ರಂದು ಪೇಟಿಎಂ ಮತ್ತು ಯಾತ್ರಾ ಮೂಲಕವೂ ಬುಕಿಂಗ್'ನ್ನು ವಿಸ್ತರಿಸಿತ್ತು. ಇದರೊಂದಿಗೆ ದಿನಕ್ಕೆ ಕನಿಷ್ಠ 10,000 ಟಿಕೆಟ್ ಗಳು ಬುಕ್ ಆಗುತ್ತಿದ್ದವು.

ಸೋಮವಾರ ಮಧ್ಯಾಹ್ನ ಕಾರ್ತಿಕ್ ಮಾಧವನ್ (ಹೆಸರು ಬದಲಾಯಿಸಲಾಗಿದೆ) ಬೈಯಪ್ಪನಹಳ್ಳಿಯಿಂದ ಸ್ವಾಮಿ ವಿವೇಕಾನಂದ ರಸ್ತೆಗೆ ಮೆಟ್ರೋ ಅಪ್ಲಿಕೇಶನ್ ಬಳಸಿ ಟಿಕೆಟ್ ಕಾಯ್ದಿರಿಸಲು ಪ್ರಯತ್ನಿಸಿಲು ಮುಂದಾಗಿದ್ದು, ಈ ವೇಳೆ ಪರದೆಯ ಮೇಲೆ ಏನೋ ತಪ್ಪಾಗಿದೆ. ದಯವಿಟ್ಟು ಪುನಃ ಪ್ರಯತ್ನಿಸಿ ಎಂಬ ಸಂದೇಶಗಳು ಪದೇ ಪದೇ ಕಾಣಿಸತೊಡಗಿತ್ತು. ಟಿಕೆಟ್ ಕಾಯ್ದಿರಿಸಲು ಪದೇ ಪದೇ ಮಾಡಿದ ಪ್ರಯತ್ನಗಳು ವ್ಯರ್ಥವಾಯಿತು. ಅನೇಕ ಪ್ರಯಾಣಿಕರು ಇದೇ ರೀತಿಯ ಸಂಕಷ್ಟಗಳನ್ನು ಎದುರಿಸಿದರು.

‘ವಿವಿಧ ಆ್ಯಪ್‌ಗಳ ಮೂಲಕ ಕ್ಯೂಆರ್‌ ಟಿಕೆಟ್‌ ಕಾಯ್ದಿರಿಸುವ ಬೇಡಿಕೆಗಳು ಹೆಚ್ಚಾದ ಹಿನ್ನೆಲೆಯಲ್ಲಿ ಸರ್ವರ್ ಕ್ರ್ಯಾಶ್ ಆಗಿದೆ. ಸಂಜೆ 4.30ರ ಸುಮಾರಿಗೆ ಸಮಸ್ಯೆಗಳು ಕಂಡು ಬಂದಿತ್ತು ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

ತಾಂತ್ರಿಕ ಸಮಸ್ಯೆ ಉಂಟಾಗಿದ್ದು, ಅದನ್ನು ಸರಿಪಡಿಸುವ ಕಾರ್ಯ ನಿರಂತರವಾಗಿ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.

ಬಿಎಂಆರ್‌ಸಿಎಲ್‌ನ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಬಿಎಲ್ ಯಸವಂತ ಚವ್ಹಾಣ ಮಾತನಾಡಿ, ರಾತ್ರಿ 8.35ಕ್ಕೆ ಸಮಸ್ಯೆ ಬಗೆಹರಿಸಲಾಗಿದೆ ಎಂದಿದ್ದಾರೆ.

ಡಿಜಿಟಲ್‌ ಮೂಲಕ ಟಿಕೆಟ್ ಬುಕ್ ಮಾಡುವಲ್ಲಿ ಈ ಹಿಂದೆ ಕೂಡ ನಾನು ಸಮಸ್ಯೆಗಳನ್ನು ಅನುಭವಿಸಿದ್ದೆ. ಗೂಗಲ್ ಪೇ ಮೂಲಕ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಟಿಕೆಟ್ ಖರೀದಿಸಲು ಸಮಸ್ಯೆಗಳು ಕಂಡು ಬಂದಿತ್ತು. ಇದು ಆಗಾಗ್ಗೆ ಆಗುತ್ತಲೇ ಇರುತ್ತದೆ. ಮೆಟ್ರೋ ಪ್ರಯಾಣಿಕರೊಬ್ಬರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com