ಕಾಯ್ದಿರಿಸದ ಟಿಕೆಟ್ ಖರೀದಿಗೆ UTS ಆಪ್ ಬಳಕೆ ಮಾಡಲು ಬೆಂಗಳೂರು ರೈಲ್ವೆ ವಿಭಾಗದಿಂದ ಅಭಿಯಾನ

ಸಾಲು ಸಾಲು ರಜೆ ದಿನಗಳು ಹಾಗೂ ಹಬ್ಬದ ದಿನಗಳಲ್ಲಿ ರೈಲ್ವೆ ನಿಲ್ದಾಣಗಳಲ್ಲಿ ಪ್ರಯಾಣಿಕರು ಸರತಿ ಸಾಲಿನಲ್ಲಿ ನಿಲ್ಲುವುದನ್ನು ತಪ್ಪಿಸಲು ಕಾಯ್ದಿರಿಸದ ಟಿಕೆಟ್ ಖರೀದಿಗೆ ಆಪ್ ಬಳಕೆ ಮಾಡುವ ಅವಕಾಶವನ್ನು ರೈಲ್ವೆ ಇಲಾಖೆ ಕಲ್ಪಿಸಿದೆ.
ರೈಲ್ವೆ ಇಲಾಖೆಯಿಂದ ಅಭಿಯಾನ
ರೈಲ್ವೆ ಇಲಾಖೆಯಿಂದ ಅಭಿಯಾನ

ಬೆಂಗಳೂರು: ಸಾಲು ಸಾಲು ರಜೆ ದಿನಗಳು ಹಾಗೂ ಹಬ್ಬದ ದಿನಗಳಲ್ಲಿ ರೈಲ್ವೆ ನಿಲ್ದಾಣಗಳಲ್ಲಿ ಪ್ರಯಾಣಿಕರು ಸರತಿ ಸಾಲಿನಲ್ಲಿ ನಿಲ್ಲುವುದನ್ನು ತಪ್ಪಿಸಲು ಕಾಯ್ದಿರಿಸದ ಟಿಕೆಟ್ ಖರೀದಿಗೆ UTS ಆಪ್ ಬಳಕೆ ಮಾಡುವ ಅವಕಾಶವನ್ನು ರೈಲ್ವೆ ಇಲಾಖೆ ಕಲ್ಪಿಸಿದೆ.
 
ಪ್ರಯಾಣಿಕರಿಗೆ ಈ ಯುಟಿಎಸ್ ಮೊಬೈಲ್ ಅಪ್ಲಿಕೇಶನ್ ಕುರಿತ ಬಗ್ಗೆ ಜಾಗೃತಿ, ಅರಿವು ಮೂಡಿಸಲು ನೈಋತ್ಯ ರೈಲ್ವೆ ವಿಭಾಗದ ಬೆಂಗಳೂರು ವಿಭಾಗ ಒಂದು ತಿಂಗಳ ಕಾಲ ಅಭಿಯಾನ ಹಮ್ಮಿ ಕೊಂಡಿದೆ.
 
Unreserved Ticketing System (UTS) ಎಂಬುದು ಈ ಮೊಬೈಲ್ ಅಪ್ಲಿಕೇಷನ್ ಆಗಿದ್ದು, ಇದರ ಮೂಲಕ ಕಾಯ್ದಿರಿಸದ, ಸೀಸನ್ ಅಥವಾ ಪ್ಲಾಟ್ ಫಾರ್ಮ್ ಟಿಕೆಟ್ ಗಳನ್ನು ಖರೀದಿಸಬಹುದಾಗಿದ್ದು, ಆಪ್ ನ್ನು ಗೂಗಲ್ ಪ್ಲೇ ಮೂಲಕ ಡೌನ್ ಲೋಡ್ ಮಾಡಬಹುದಾಗಿದೆ.

ಇದನ್ನೂ ಓದಿ: ಬೆಂಗಳೂರು ರೈಲ್ವೆ ನಿಲ್ದಾಣದಲ್ಲಿ 4.8 ಲಕ್ಷ ರೂ. ಮೌಲ್ಯದ 100 ಗ್ರಾಂ ಚಿನ್ನವನ್ನು ಹಿಂದಿರುಗಿಸಿದ ಪ್ರಾಮಾಣಿಕ ಹಮಾಲಿ
 
ಈ ಆಪ್ ಬಳಕೆಯಿಂದ ಪ್ರಯಾಣಿಕರು ಸರತಿ ಸಾಲಿನಲ್ಲಿ ನಿಲ್ಲುವುದು ತಪ್ಪಲಿದೆ. ಡಿಜಿಟಲ್ ಮೂಲಕ ಪ್ರಯಾಣಿಸಬಹುದಾಗಿದೆ. ಇದರಿಂದ ಕ್ಯಾಶ್ ಲೆಸ್ ವಹಿವಾಟಿಗೂ ಅನುಕೂಲವಾಗಲಿದೆ ಎಂದು ರೈಲ್ವೆ ಇಲಾಖೆ ಹೇಳಿದೆ.

ಸಾರ್ವಜನಿಕರ ಸಲಹೆಗೆ ಆಹ್ವಾನ:
UTS ಅಪ್ಲಿಕೇಶನ್‌ ಬಳಕೆಯ ಕುರಿತು ಯಾವುದೇ ಸಲಹೆಗಳನ್ನು twitter ನಲ್ಲಿ  @SrDCM_BENGALURU ಗೆ / Whatsapp ನಲ್ಲಿ 8861309572 ಗೆ / dcmbengaluru@gmail.com ಮೇಲ್ ಗೆ ಕಳುಹಿಸಬಹುದು. ಮೌಲ್ಯಯುತವಾದ ಸಲಹೆ ನೀಡುವವರಿಗೆ ರೈಲ್ವೆ ವಿಭಾಗದಿಂದ ಪ್ರಮಾಣಪತ್ರಗಳನ್ನು ನೀಡಲಾಗುತ್ತದೆ. ಈ ಅಭಿಯಾನ ಜನವರಿ 11, 2023 ರವರೆಗೆ ಇರುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com