ಬೆಂಗಳೂರಿನಲ್ಲಿ ರಸ್ತೆ ಗುಂಡಿಗಳ ಹಾವಳಿ ಕುರಿತು ಕಿರಣ್ ಮಜುಂದಾರ್ ಶಾ: ‘ತಪ್ಪಿತಸ್ಥರಿಗೆ ಏಕೆ ದಂಡ ವಿಧಿಸುತ್ತಿಲ್ಲ...’
ಕರ್ನಾಟಕದ ರಾಜಧಾನಿಯಲ್ಲಿನ ರಸ್ತೆಗಳ ದುಃಸ್ಥಿತಿಯನ್ನು ತೋರಿಸುವ ಹಲವಾರು ವಿಡಿಯೋಗಳು ಕಾಲಾನಂತರದಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗಿವೆ. ಇದೀಗ ಅಂತದ್ದೇ ಒಂದು ಕ್ಲಿಪ್ ಅನ್ನು ಟ್ವಿಟರ್ ಬಳಕೆದಾರರೊಬ್ಬರು ಹಂಚಿಕೊಂಡಿದ್ದು, ಬಿಲಿಯನೇರ್-ಉದ್ಯಮಿ ಕಿರಣ್ ಮಜುಂದಾರ್ ಶಾ ಅವರ ಗಮನ ಸೆಳೆದಿದೆ.
Published: 18th December 2022 12:00 PM | Last Updated: 18th December 2022 12:06 PM | A+A A-

ಬೆಂಗಳೂರಿನ ರಸ್ತೆಗಳಲ್ಲಿ ಗುಂಡಿಗಳು
ಬೆಂಗಳೂರು: ಪ್ರಯಾಣಿಕರು ಹಲವು ಬಾರಿ ದೂರು ನೀಡಿದರೂ ಬೆಂಗಳೂರಿನಲ್ಲಿ ಗುಂಡಿಗಳ ಹಾವಳಿ ಮುಂದುವರಿದಿದೆ. ಕರ್ನಾಟಕದ ರಾಜಧಾನಿಯಲ್ಲಿನ ರಸ್ತೆಗಳ ದುಃಸ್ಥಿತಿಯನ್ನು ತೋರಿಸುವ ಹಲವಾರು ವಿಡಿಯೋಗಳು ಕಾಲಾನಂತರದಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗಿವೆ. ಇದೀಗ ಅಂತದ್ದೇ ಒಂದು ಕ್ಲಿಪ್ ಅನ್ನು ಟ್ವಿಟರ್ ಬಳಕೆದಾರರೊಬ್ಬರು ಹಂಚಿಕೊಂಡಿದ್ದು, ಬಿಲಿಯನೇರ್-ಉದ್ಯಮಿ ಕಿರಣ್ ಮಜುಂದಾರ್ ಶಾ ಅವರ ಗಮನ ಸೆಳೆದಿದೆ.
'ಇದು ಎಲ್ಲ ದೇಶಗಳಿಗೂ ಮಾದರಿಯಾಗಬೇಕು. ನಮ್ಮ ಸ್ಮಾರ್ಟ್ ಸಿಟಿ ಬೆಂಗಳೂರು ಮಾದರಿಯಾಗಿದೆ. ಅವರ ಬಿಬಿಎಂಪಿ ಎಂದಿಗೂ ಕೆಲಸ ಮಾಡುವುದಿಲ್ಲ ಮತ್ತು ಟ್ರಾಫಿಕ್ ಪೊಲೀಸರು ತಮ್ಮ ಕೆಲಸವನ್ನು ಮಾಡುತ್ತಾರೆ. ಟ್ರಾಫಿಕ್ ನಿಯಂತ್ರಣ ಕಠಿಣವಾಗಿರುವುದರಲ್ಲಿ ಆಶ್ಚರ್ಯವಿಲ್ಲ' ಎಂದು ಸಹನಾ ಹೆಸರಿನ ಬಳಕೆದಾರರೊಬ್ಬರು ಟ್ವೀಟ್ ಮಾಡಿದ್ದಾರೆ. ಪ್ರಧಾನಿ ಕಚೇರಿ, ಕೇಂದ್ರ ಸಚಿವ ನಿತಿನ್ ಗಡ್ಕರಿ, ಟೆಕ್ ಪ್ರವರ್ತಕರಾದ ಇನ್ಫೋಸಿಸ್‌ನ ನಾರಾಯಣ ಮೂರ್ತಿ, ಕಿರಣ್ ಮಜುಂದಾರ್ ಶಾ ಮತ್ತು ಇತರರನ್ನು ಟ್ಯಾಗ್ ಮಾಡಿದ್ದಾರೆ.
This should be the model operated by all countries. Our smart City Bangalore is exemplary. Their BBMP never works and traffic police do their jobs. No wonder traffic control is tough. @PMOIndia @nitin_gadkari @Infosys_nmurthy @kiranshaw @NandanNilekani @TVMohandasPai @wiprosoft https://t.co/FFzGMPaixS
— Sahana (@Sahanasatianaat) December 16, 2022
ರಸ್ತೆಗುಂಡಿಗಳಿಂದಾಗುವ ಅಪಘಾತಗಳಿಗೆ ಸಂಬಂಧಿಸಿದ ದೂರುಗಳ ಕುರಿತು ಎಫ್‌ಐಆರ್ ದಾಖಲಿಸುವಂತೆ ಕರ್ನಾಟಕ ಹೈಕೋರ್ಟ್ ರಾಜ್ಯ ಗೃಹ ಇಲಾಖೆಗೆ ನಿರ್ದೇಶನ ನೀಡಿದ ಒಂದು ದಿನದ ಬಳಿಕ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಇದಕ್ಕೂ ಮುನ್ನ ನವೆಂಬರ್‌ನಲ್ಲಿ, ಬಿಬಿಎಂಪಿ ಮತ್ತು ಅದರ ಗುತ್ತಿಗೆದಾರರು ಕೈಗೊಳ್ಳುತ್ತಿರುವ ಗುಂಡಿಗಳನ್ನು ತುಂಬುವ ಅಥವಾ ದುರಸ್ತಿ ಮಾಡುವ ಕೆಲಸದ ಗುಣಮಟ್ಟದ ಬಗ್ಗೆ ಪರಿಶೀಲನೆ ನಡೆಸುವಂತೆ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಹೈಕೋರ್ಟ್ ನಿರ್ದೇಶನ ನೀಡಿತ್ತು.
ಬಯೋಟೆಕ್ನಾಲಜಿ ಉದ್ಯಮದ ಹಿರಿಯರಾದ ಕಿರಣ್ ಮಜುಂದಾರ್ ಶಾ ಅವರು ಈ ಟ್ವೀಟ್ ಅನ್ನು ರೀಟ್ವೀಟ್ ಮಾಡಿದ್ದು, 'ಲೋಪಗಳಿಗೆ ಕಾರಣರಾದವರಿಗೆ ಏಕೆ ದಂಡ ವಿಧಿಸುತ್ತಿಲ್ಲ. ಇಂತಹ ಸ್ವೀಕಾರಾರ್ಹವಲ್ಲದ ಲೋಪಗಳಿಗೆ ಕಾರಣರಾದವರಿಗೆ ಬಿಬಿಎಂಪಿ ಕಮಿಷನರ್ ಏಕೆ ದಂಡ ವಿಧಿಸುತ್ತಿಲ್ಲ? ನಗರವು ನಿಜವಾಗಿಯೂ ನರಳುತ್ತಿದೆ' ಎಂದು ಬರೆದಿದ್ದಾರೆ.
Why is @bbmpcommr not penalising those responsible for such unacceptable lapses? City is really suffering https://t.co/3xzpumpQPd
— Kiran Mazumdar-Shaw (@kiranshaw) December 17, 2022
2021ರ ಅಕ್ಟೋಬರ್ ನಿಂದ ಬೆಂಗಳೂರಿನಲ್ಲಿ ರಸ್ತೆ ಅಪಘಾತಗಳಿಂದ ಕನಿಷ್ಠ ಒಂಬತ್ತು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಇತ್ತೀಚಿನ ಘಟನೆಯೊಂದರಲ್ಲಿ, 55 ವರ್ಷ ವಯಸ್ಸಿನ ಮಹಿಳೆಯೊಬ್ಬರು ನಗರದ ಗುಂಡಿಗಳಿಂದ ಕೂಡಿದ ರಸ್ತೆಗಳಿಗೆ ಬಲಿಪಶುವಾಗಿದ್ದಾರೆ. ಗುಂಡಿ ತಪ್ಪಿಸಲು ಪ್ರಯತ್ನಿಸಿದಾಗ ಟ್ರ್ಯಾಕ್ಟರ್ ಅವರ ಮೇಲೆ ಹರಿದ ನಂತರ ಅವರು ಮೃತಪಟ್ಟಿದ್ದರು.