ಪುನೀತ್ ರಾಜ್ ಕುಮಾರ್ ಪಠ್ಯ
ಪುನೀತ್ ರಾಜ್ ಕುಮಾರ್ ಪಠ್ಯ

ವಿವಿ ಪಠ್ಯದಲ್ಲಿ ನಟ ಪುನೀತ್‌ ಜೀವನಗಾಥೆ: ಇದು ಸರ್ಕಾರ ಕಲಾವಿದರಿಗೆ ಕೊಡುವ ಗೌರವದ ಸಂಕೇತ ಎಂದ ಬಿಜೆಪಿ!

ಬೆಂಗಳೂರು ವಿಶ್ವವಿದ್ಯಾಲಯದ ಪಠ್ಯದಲ್ಲಿ ಕಳೆದ ವರ್ಷ ನಿಧನರಾದ ಕನ್ನಡ ಚಿತ್ರರಂಗದ ಹೆಸರಾಂತ ನಟ ಪುನೀತ್‌ ರಾಜಕುಮಾರ್ ಜೀವನಗಾಥೆಯನ್ನು ರಾಜ್ಯ ಸರ್ಕಾರ ಸರ್ಕಾರ ಸೇರಿಸಿದೆ.

ಬೆಂಗಳೂರು:  ಬೆಂಗಳೂರು ವಿಶ್ವವಿದ್ಯಾಲಯದ ಪಠ್ಯದಲ್ಲಿ ಕಳೆದ ವರ್ಷ ನಿಧನರಾದ ಕನ್ನಡ ಚಿತ್ರರಂಗದ ಹೆಸರಾಂತ ನಟ ಪುನೀತ್‌ ರಾಜಕುಮಾರ್ ಜೀವನಗಾಥೆಯನ್ನು ರಾಜ್ಯ ಸರ್ಕಾರ ಸರ್ಕಾರ ಸೇರಿಸಿದೆ.

 ಪತ್ರಕರ್ತ ಡಾ. ಶರಣು ಹುಲ್ಲೂರು ಬರೆದ ನೀನೇ ರಾಜಕುಮಾರ ಕೃತಿಯ ಒಂದು ಅದ್ಯಾಯವಾದ 'ಲೋಹಿತ ಎಂಬ ಮರಿಮುದ್ದ ಎಂಬ ಆಯ್ದ ಭಾಗವನ್ನು  ಬಿಕಾಂ 3ನೇ ಸೆಮಿಸ್ಟರ್‌ನಲ್ಲಿ ಪಠ್ಯವಾಗಿ ಸೇರ್ಪಡೆಗೊಳಿಸಲಾಗಿದೆ.  

ನಟನೆ ಜೊತೆಗೆ ಸರಳತೆ, ಸಮಾಜ ಮುಖಿ ಕಾರ್ಯಗಳಿಂದ ಹಲವರಿಗೆ ಸ್ಪೂರ್ತಿಯಾಗಿದ್ದ ಕರ್ನಾಟಕ ರತ್ನ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್, ಅವರ ಜೀವನಗಾಥೆಯನ್ನು ಪಠ್ಯದಲ್ಲಿ ಸೇರಿಸಬೇಕೆಂದು ಅಪ್ಪು ಅಭಿಮಾನಿಗಳು ಸರ್ಕಾರಕ್ಕೆ ಬೇಡಿಕೆ ಸಲ್ಲಿಸಿದ್ದರು. ಶಿಕ್ಷಣ ಸಚಿವರಿಗೂ ಮನವಿ ಪತ್ರ ಸಲ್ಲಿಸಿದ್ದರು. ಅದರಂತೆ ಇದೀಗ ಅವರ ಬೇಡಿಕೆ ಈಡೇರಿದ್ದು, ಪುನೀತ್ ಜೀವನಗಾಥೆಯನ್ನು ಪಠ್ಯ ಪುಸ್ತಕದಲ್ಲಿ ಸೇರ್ಪಡೆ ಮಾಡಲಾಗಿದೆ.

ಈ ಕುರಿತು ರಾಜ್ಯ ಬಿಜೆಪಿ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಮಾಹಿತಿ ಹಂಚಿಕೊಳ್ಳಲಾಗಿದ್ದು, ಇದು  ಸರ್ಕಾರ ಕಲಾವಿದರಿಗೆ ಕೊಡುವ ಗೌರವದ ಸಂಕೇತ ಎಂದು ಬಿಜೆಪಿ ಹೇಳಿಕೊಂಡಿದೆ.

Related Stories

No stories found.

Advertisement

X
Kannada Prabha
www.kannadaprabha.com