ಚಿಕ್ಕಮಗಳೂರು: ಮಾನವ-ಆನೆ ಸಂಘರ್ಷ ತಪ್ಪಿಸಲು ವಿನೂತನ ಯೋಜನೆ ರೂಪಿಸಿದ ಅರಣ್ಯ ಇಲಾಖೆ; ತಂತ್ರಜ್ಞಾನದ ಸಹಾಯ

ಗ್ರಾಮಸ್ಥರು ಮತ್ತು ಆನೆಗಳ ನಡುವಿನ ಸಂಘರ್ಷ ತಪ್ಪಿಸಲು ಅರಣ್ಯ ಇಲಾಖೆಯ ಚಿಕ್ಕಮಗಳೂರು ವಿಭಾಗ ವಿನೂತನ ಯೋಜನೆ ರೂಪಿಸಿದೆ.
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ

ಚಿಕ್ಕಮಗಳೂರು: ಗ್ರಾಮಸ್ಥರು ಮತ್ತು ಆನೆಗಳ ನಡುವಿನ ಸಂಘರ್ಷ ತಪ್ಪಿಸಲು ಅರಣ್ಯ ಇಲಾಖೆಯ ಚಿಕ್ಕಮಗಳೂರು ವಿಭಾಗ ವಿನೂತನ ಯೋಜನೆ ರೂಪಿಸಿದೆ.

ಮೂಡಿಗೆರೆ ತಾಲೂಕಿನ ನಿವಾಸಿಗಳು ಮತ್ತು ಪ್ರವಾಸಿಗರಿಗೆ ಕಾಡಾನೆಗಳ ಚಲನವಲನದ ಬಗ್ಗೆ ಎಚ್ಚರಿಕೆ ನೀಡಲು ಡಿಜಿಟಲ್ ಡಿಸ್ಪ್ಲೇ ಬೋರ್ಡ್‌ಗಳನ್ನು ಅಳವಡಿಸಿ ಮತ್ತು ಎಸ್‌ಎಂಎಸ್ ಸೇವೆಯನ್ನು ಪ್ರಾರಂಭಿಸುವ ಮೂಲಕ ತಂತ್ರಜ್ಞಾನದ ಸಹಾಯವನ್ನು ಪಡೆಯಲು ನಿರ್ಧರಿಸಲಾಗಿದೆ.

ಮೂಡಿಗೆರೆಯನ್ನು ಕೇಂದ್ರವಾಗಿಟ್ಟುಕೊಂಡು ಡಿಸಿಎಫ್‌ಒ ಎನ್.ಇ. ಕ್ರಾಂತಿ ನೇತೃತ್ವದಲ್ಲಿ ಆನೆ ಕಾರ್ಯಪಡೆಯನ್ನು ಸ್ಥಾಪಿಸಲಾಗಿದೆ. ಮೂಡಿಗೆರೆ ಶಾಸಕ ಎಂ.ಪಿ. ಕುಮಾರಸ್ವಾಮಿ ಶನಿವಾರ ಈ ಸೇವೆಗೆ ಅಧಿಕೃತವಾಗಿ ಚಾಲನೆ ನೀಡಿದರು. ಮಾನವ-ಆನೆ ಸಂಘರ್ಷವನ್ನು ತಡೆಯಲು ಕಾರ್ಯಪಡೆ ತೆಗೆದುಕೊಳ್ಳುತ್ತಿರುವ ಕ್ರಮಗಳ ವಿವರಗಳನ್ನು ಒಳಗೊಂಡ ಜಾಹೀರಾತು ಫಲಕಗಳು ಮತ್ತು ಪೋಸ್ಟರ್‌ಗಳನ್ನು ಅವರು ಬಿಡುಗಡೆ ಮಾಡಿದರು.

ಇದನ್ನೂ ಓದಿ: ಚಿಕ್ಕಮಗಳೂರು: ಹಾಸನದಿಂದ ಕೆಲಸ ಅರಸಿ ಬಂದು ರಸ್ತೆಬದಿಯಲ್ಲಿ ಆಶ್ರಯ ಪಡೆದ ದಂಪತಿ ಮೇಲೆ ಕಾಡಾನೆ ದಾಳಿ

ಮೂಡಿಗೆರೆ ತಾಲ್ಲೂಕು ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಿಗೆ ಪ್ರವೇಶಿಸುವವರು ಟಾಸ್ಕ್ ಫೋರ್ಸ್ ಸಂಪರ್ಕ ಸಂಖ್ಯೆ 7204004261 ಅನ್ನು ಸಂಪರ್ಕಿಸಬಹುದು. ಇದು ಬೋರ್ಡ್‌ಗಳು ಮತ್ತು ಪೋಸ್ಟರ್‌ಗಳಲ್ಲಿ ಪ್ರದರ್ಶಿಸಲ್ಪಡುತ್ತದೆ. ನಂತರ, ಅವರು ಎಚ್ಚರಿಕೆಗಳನ್ನು ಸ್ವೀಕರಿಸಬಹುದು.

ಮೂಡಿಗೆರೆ ತಾಲೂಕಿನ ಆನೆ ಸಂಘರ್ಷ ಪೀಡಿತ ಸ್ಥಳಗಳಾದ ಹ್ಯಾಂಡ್‌ಪೋಸ್ಟ್, ಬೈದುವಳ್ಳಿ, ಭೈರಾಪುರ, ಗೌಡಹಳ್ಳಿ, ಮೇಕನಗದ್ದೆ, ಗುತ್ತಿ, ಚೇಗು, ಗೋಣಿಬೀಡು, ಕುಂದೂರು, ಗಬಗಲ್‌ನಲ್ಲಿ ಡಿಜಿಟಲ್ ಡಿಸ್‌ಪ್ಲೇ ಬೋರ್ಡ್‌ಗಳನ್ನು ಅಳವಡಿಸಲಾಗುವುದು.

ಈಮಧ್ಯೆ, ಭದ್ರಾ ವನ್ಯಜೀವಿ ಸಂರಕ್ಷಣಾ ಟ್ರಸ್ಟ್‌ನ ಸದಸ್ಯರಾದ ಡಿ.ವಿ. ಗಿರೀಶ್ ಮತ್ತು ಎಸ್. ಗಿರಿಜಾಶಂಕರ್ ಹೇಳಿಕೆಯಲ್ಲಿ, 'ಆಹಾರ ಅರಸಿ ವಲಸೆ ಹೋಗುವ ಆನೆಗಳ ಹಾದಿಗೆ ಅಡ್ಡಿಯುಂಟಾಗಿರುವುದರಿಂದ ಮನುಷ್ಯ-ಪ್ರಾಣಿ ಸಂಘರ್ಷ ಹೆಚ್ಚುತ್ತಿದೆ. ಮಲೆನಾಡು ಪ್ರದೇಶದ ದಟ್ಟಕಾಡಿನಲ್ಲಿ ಅಕ್ರಮ ಮದ್ಯದ ತಯಾರಿಕೆಯು ಆನೆಗಳನ್ನು ಜನವಸತಿಗೆ ಹತ್ತಿರವಾಗುವಂತೆ ಮಾಡುತ್ತಿದೆ' ಎಂದು ಅವರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com