ಮಾರತ್ತಹಳ್ಳಿ ಕೆಳಸೇತುವೆ: ಗಡುವು ಮುಗಿದರೂ ಪೂರ್ಣಗೊಳ್ಳದ ಕಾಮಕಾರಿ ಕಾರ್ಯ!
ಡಿಸೆಂಬರ್ ಅಂತ್ಯದ ವೇಳೆಗೆ ಪೂರ್ಣಗೊಂಡು ಜನವರಿ 1 ಕ್ಕೆ ವಾಹನಗಳಿಗೆ ತೆರೆಯಬೇಕಿದ್ದ ಮಾರತ್ತಹಳ್ಳಿ ಕೆಳಸೇತುವೆ ಕಾಮಗಾರಿ ಕಾರ್ಯವು ಗಡುವು ಮೂಗಿದರೂ ಇನ್ನೂ ಪೂರ್ಣಗೊಂಡಿಲ್ಲ.
Published: 30th December 2022 11:23 AM | Last Updated: 30th December 2022 11:23 AM | A+A A-

ಮಾರತ್ತಹಳ್ಳಿ ಸೇತುವೆ ಮೇಲೆ ಸಂಚಾರ ದಟ್ಟಣೆ ಎದುರಾಗಿರುವುದು.
ಬೆಂಗಳೂರು: ಡಿಸೆಂಬರ್ ಅಂತ್ಯದ ವೇಳೆಗೆ ಪೂರ್ಣಗೊಂಡು ಜನವರಿ 1 ಕ್ಕೆ ವಾಹನಗಳಿಗೆ ತೆರೆಯಬೇಕಿದ್ದ ಮಾರತ್ತಹಳ್ಳಿ ಕೆಳಸೇತುವೆ ಕಾಮಗಾರಿ ಕಾರ್ಯವು ಗಡುವು ಮೂಗಿದರೂ ಇನ್ನೂ ಪೂರ್ಣಗೊಂಡಿಲ್ಲ.
ಕಾಮಗಾರಿ ಕಾರ್ಯ ಪೂರ್ಣಗೊಳ್ಳಲು ಇನ್ನೂ 10ರಿಂದ 15 ದಿನಗಳ ಕಾಲ ತೆಗೆದುಕೊಳ್ಳಲಿದೆ ಎಂದು ತಿಳಿದುಬಂದಿದೆ.
24-ಮೀ ಅಂಡರ್‌ಪಾಸ್ ಇದಾಗಿದ್ದು, ಈ ಅಂಡರ್ ಪಾಸ್ ತೆರೆದಿದ್ದೇ ಆದರೆ, ಮಾರತಹಳ್ಳಿ, ಮುನೆಕೊಳಾಳ, ಕುಂದಲಹಳ್ಳಿ ಮತ್ತು ಹಳೆ ವಿಮಾನ ನಿಲ್ದಾಣ ರಸ್ತೆ ಬಳಿ ಸಂಚಾರ ಸುಗಮಗೊಳ್ಳಲಿದೆ.
ಕೆಳಸೇತುವೆ ನಿರ್ಮಾಣಕ್ಕೆ ಆರಂಭದಲ್ಲಿ ಭೂ ಸಮಸ್ಯೆಗಳು ಎದುರಾಗಿತ್ತು. ಇದರಿಂದ ನಿರ್ಮಾಣ ಕಾರ್ಯ ತಡವಾಗಿತ್ತು. ಇದೀಗ ಕಾಮಗಾರಿ ಪೂರ್ಣಗೊಳ್ಳಲು ಇನ್ನೂ 10-15 ದಿನಗಳ ಸಮಯ ಬೇಕಾಗಬಹುದು ಎನ್ನಲಾಗಿದ್ದು, ಸಂಕ್ರಾಂತಿ ವೇಳೆಗೆ ಕೆಳಸೇತುವೆ ತೆರಯಲು ಬಿಬಿಎಂಪಿ ಚಿಂತನೆ ನಡೆಸಿದೆ ಎಂದು ತಿಳಿದುಬಂದಿದೆ.
ಮಹಾದೇವಪುರ ವಲಯದ ಬಿಬಿಎಂಪಿ, ರಸ್ತೆ ಮೂಲಸೌಕರ್ಯ ಕಾರ್ಯಪಾಲಕ ಎಂಜಿನಿಯರ್ ಜಯಶಂಕರರೆಡ್ಡಿ ಮಾತನಾಡಿ, ಟಿಡಿಆರ್‌ನಲ್ಲಿನ ಗೊಂದಲವೇ ವಿಳಂಬಕ್ಕೆ ಕಾರಣ. ''ಯೋಜನೆಯು ಶೇಕಡಾ 85 ರಷ್ಟು ಪೂರ್ಣಗೊಂಡಿದೆ. ಪುಶ್ ಬಾಕ್ಸ್‌ಗಳನ್ನು ಸ್ಥಾಪಿಸಲಾಗಿದೆ. ಇನ್ನುಳಿದ ಕಾಮಗಾರಿ ಪೂರ್ಣಗೊಳ್ಳಲು ಇನ್ನೂ 15 ದಿನಗಳ ಕಾಲಾವಕಾಶ ಬೇಕಾಗಬಹುದು. ಬಿಡಬ್ಲ್ಯೂಎಸ್‌ಎಸ್‌ಬಿ ತನ್ನ ಮುಖ್ಯ ನೀರಿನ ಪೈಪ್‌ನ ಕಾಮಗಾರಿಯನ್ನು ಸರ್ವಿಸ್ ರಸ್ತೆಯಲ್ಲಿ ಕೈಗೆತ್ತಿಕೊಳ್ಳಲಿದೆ. ಅದು ಪೂರ್ಣಗೊಂಡ ನಂತರ, ರಸ್ತೆಯನ್ನು ಟಾರ್ ಮತ್ತು ಸಮತಟ್ಟು ಮಾಡಲಾಗುವುದು. ನಂತರ ಬಿಬಿಎಂಪಿ ಅಧಿಕೃತವಾಗಿ ಅದನ್ನು ಪೂರ್ಣಗೊಳಿಸಲಿದೆ ಎಂದಿದ್ದಾರೆ.
ಶಾಸಕ ಅರವಿಂದ ಲಿಂಬಾವಳಿ ಭೂಮಾಲೀಕರು ಮತ್ತು ಪಾಲಿಕೆ ನಡುವೆ ಒಪ್ಪಂದ ಮಾಡಿಕೊಂಡಿದ್ದರೂ, ಕಾರ್ಯವಿಧಾನದ ವಿಳಂಬದಿಂದಾಗಿ ಟಿಡಿಆರ್ ಪ್ರಕ್ರಿಯೆಯು ಸಮಯ ತೆಗೆದುಕೊಳ್ಳುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
6 ಕೋಟಿ ವೆಚ್ಚದಲ್ಲಿ ಯೋಜನೆ ಅನುಷ್ಠಾನಗೊಳ್ಳುತ್ತಿದ್ದು. ಡಿಸೆಂಬರ್ 6 ರಿಂದ ಏಳು ದಿನಗಳ ಕಾಲ ಒಂದು ಬದಿಯ ಸಂಚಾರವನ್ನು ನಿರ್ಬಂಧಿಸಲಾಗಿತ್ತು. ಕಾಮಗಾರಿ ಪೂರ್ಣಗೊಂಡ ಬಳಿಕ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು. ಇದೀಗ ಸರ್ವಿಸ್ ರಸ್ತೆ ಕಾಮಗಾರಿ ವಿಳಂಬವಾಗುತ್ತಿರುವುದರಿಂದ ಮಾರತ್ತಹಳ್ಳಿ ಬಳಿಯ ಜಂಕ್ಷನ್ ನಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದೆ ಎಂದು ತಿಳಿದುಬಂದಿದೆ.