ಕಾಮರೂಪಿ ಖ್ಯಾತಿಯ ಹಿರಿಯ ಪತ್ರಕರ್ತ ಎಂ.ಎಸ್. ಪ್ರಭಾಕರ್ ವಿಧಿವಶ: ಗಣ್ಯರ ಸಂತಾಪ

ಕನ್ನಡ ಸಾಹಿತ್ಯ ವಲಯದಲ್ಲಿ ಕಾಮರೂಪಿ ಎಂದೇ ಖ್ಯಾತರಾದ ಸಾಹಿತಿ, ಪತ್ರಕರ್ತ ಎಂ.ಎಸ್. ಪ್ರಭಾಕರ್ ಗುರುವಾರ ವಿಧಿವಶರಾದರು. ವಯೋಸಹಜ ಕಾಯಿಲೆ, ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಕೋಲಾರದ ಕಠಾರಿ ಪಾಳ್ಯದಲ್ಲಿ ಕೊನೆಯುಸಿರೆಳೆದರು. ಅವರಿಗೆ 87 ವರ್ಷ ವಯಸ್ಸಾಗಿತ್ತು.
ಎಂ.ಎಸ್. ಪ್ರಭಾಕರ್
ಎಂ.ಎಸ್. ಪ್ರಭಾಕರ್

ಬೆಂಗಳೂರು: ಕನ್ನಡ ಸಾಹಿತ್ಯ ವಲಯದಲ್ಲಿ ಕಾಮರೂಪಿ ಎಂದೇ ಖ್ಯಾತರಾದ ಸಾಹಿತಿ, ಪತ್ರಕರ್ತ ಎಂ.ಎಸ್. ಪ್ರಭಾಕರ್ ಗುರುವಾರ ವಿಧಿವಶರಾದರು. ವಯೋಸಹಜ ಕಾಯಿಲೆ, ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಕೋಲಾರದ ಕಠಾರಿ ಪಾಳ್ಯದಲ್ಲಿ ಕೊನೆಯುಸಿರೆಳೆದರು. ಅವರಿಗೆ 87 ವರ್ಷ ವಯಸ್ಸಾಗಿತ್ತು.

1936 ರಲ್ಲಿ ಕೋಲಾರದಲ್ಲಿ ಜನಿಸಿದ ಪ್ರಭಾಕರ್ ಅವರು ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಇಂಗ್ಲಿಷ್ ಭಾಷೆ ಮತ್ತು ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿಯನ್ನು ಪೂರ್ಣಗೊಳಿಸಿದ್ದರು. ಲಂಕೇಶ್ ಸೇರಿದಂತೆ ಹಿರಿಯ ಪತ್ರಕರ್ತರೊಂದಿಗೆ ಉತ್ತಮ ಒಡನಾಟ ಹೊಂದಿದ್ದ ಪ್ರಭಾಕರ್ ಅವರು, ದಿ ಹಿಂದೂ ಪತ್ರಿಕೆ ಮೂಲಕ ನೆಲ್ಸನ್ ಮಂಡೇಲಾ ಅವರನ್ನ ಸಂದರ್ಶನ ಮಾಡಿದ ಏಕೈಕ ಕನ್ನಡ ಪತ್ರಕರ್ತ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು.

2021 ರಲ್ಲಿ ಕನ್ನಡ ರಾಜ್ಯೋತ್ಸವ  ಪ್ರಶಸ್ತಿ ಪಡೆದಿದ್ರು. ಅವರ ಇಚ್ಛೆಯಂತೆ ಎಂ.ಎಸ್. ರಾಮಯ್ಯ ಆಸ್ಪತ್ರೆಗೆ ಕುಟುಂಬಸ್ಥರು ದೇಹದಾನ ಮಾಡಿದ್ದಾರೆ.ಎಂ.ಎಸ್. ಪ್ರಭಾಕರ್ ಅವರ ನಿಧನಕ್ಕೆ ವಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿದಂತೆ ಹಲವು ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com