ಹೊಸ ವರ್ಷಕ್ಕೆ ಕ್ಷಣಗಣನೆ ಆರಂಭ: ನಗರದ ಸುತ್ತಲೂ ಖಾಕಿ ಸರ್ಪಗಾವಲು, ಹೇಗಿರಲಿದೆ‌ ಟ್ರಾಫಿಕ್ ರೂಲ್ಸ್? ಇಲ್ಲಿದೆ ಮಾಹಿತಿ...

ಎರಡು ವರ್ಷಗಳ ಬಳಿಕ ಅತ್ಯಂತ ವಿಜೃಂಭಣೆ, ಮೋಜು-ಮಸ್ತಿಯೊಂದಿಗೆ ಹೊಸ ವರ್ಷವನ್ನು ಸ್ವಾಗತಿಸಲು ಸಿಲಿಕಾನ್ ಸಿಟಿ ಸಜ್ಜಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಎರಡು ವರ್ಷಗಳ ಬಳಿಕ ಅತ್ಯಂತ ವಿಜೃಂಭಣೆ, ಮೋಜು-ಮಸ್ತಿಯೊಂದಿಗೆ ಹೊಸ ವರ್ಷವನ್ನು ಸ್ವಾಗತಿಸಲು ಸಿಲಿಕಾನ್ ಸಿಟಿ ಸಜ್ಜಾಗಿದೆ.

ಕೊರೋನಾ ಸಾಂಕ್ರಾಮಿಕ ರೋಗದಿಂದಾಗಿ 2021 ಹಾಗೂ 2020ರ ಹೊಸ ವರ್ಷ ಸ್ವಾಗತ ಸಂಭ್ರಮಾಚರಣೆಗೆ ಪೂರ್ಣ ನಿರ್ಬಂಧ ಇತ್ತು. ಈ ಬಾರಿ ಮುಂಜಾಗ್ರತಾ ಕ್ರಮಗಳೊಂದಿಗೆ ಹೊಸವರ್ಷ ಕಾರ್ಯಕ್ರಮಗಳಿಗೆ ಅವಕಾಶ ನೀಡಲಾಗಿದೆ. ಹೀಗಾಗಿ ಶನಿವಾರ ಮಧ್ಯರಾತ್ರಿ 12ಕ್ಕೆ ಹೊಸ ವರ್ಷವನ್ನು ಸ್ವಾಗತಿಸಲು ಜನರು ತಮ್ಮ ಅಭಿರುಚಿಗೆ ತಕ್ಕಂತೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.

ಬೆಂಗಳೂರಿನ ಹೊಸವರ್ಷ ಆಚರಣೆಯ ಕೇಂದ್ರ ಬಿಂದುವಾದ ಎಂ.ಜಿ.ರಸ್ತೆ, ಬ್ರಿಗೇಡ್ ರಸ್ತೆ ಹಾಗೂ ಚರ್ಚ್ ಸ್ಟ್ರೀಟ್'ಗೆ ಸಾರ್ವಜನಿಕರಿಗೆ ಕಳೆದೆರಡು ವರ್ಷಗಳ್ಲಿ ಡಿ.31 ಮಧ್ಯರಾತ್ರಿ ನಿರ್ಬಂಧ ವಿಧಿಸಲಾಗಿತ್ತು. ಆದರೆ, ಈ ಬಾರಿ ಅನುಮತಿ ನೀಡಲಾಗಿದ್ದು, ತಯಾರಿ ಜೋರಾಗಿದೆ.

ಈ ನಡುವೆ ಹೊಸ ವರ್ಷಾಚರಣೆ ವೇಳೆ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸರು ಮುಂಜಾಗ್ರತಾ ಕ್ರಮಗಳ ಕೈಗೊಂಡಿದ್ದು, ಎಲ್ಲೆಡೆ ಬಿಗಿ ಭದ್ರತೆಯನ್ನು ನಿಯೋಜಿಸಿದ್ದಾರೆ.

ಸಾರ್ವಜನಿಕರ ಹಿತದೃಷ್ಟಿಯಿಂದ ಮತ್ತು ಸುರಕ್ಷಿತೆಯ ದೃಷ್ಟಿಯಿಂದ ಸಂಚಾರದಲ್ಲಿ ಬದಲಾವಣೆ ಮಾಡಲಾಗಿದೆ. ಎಲ್ಲೆಲ್ಲಿ ಸಂಚಾರಕ್ಕೆ ಅವಕಾಶ ನೀಡಲಾಗಿದೆ..?. ಎಲ್ಲೆಲ್ಲಿ ಇಲ್ಲ ಎಂಬುದರ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಬೆಂಗಳೂರು ಸಂಚಾರಿ ಪೊಲೀಸರು ಎಂಜಿ ರಸ್ತೆ ಸುತ್ತಮುತ್ತ ಸಂಚಾರಕ್ಕೆ ನಿರ್ಬಂಧ ಹೇರಿದ್ದಾರೆ.

ಶನಿವಾರ ಮತ್ತು ಭಾನುವಾರದ ಮಧ್ಯರಾತ್ರಿಯಲ್ಲಿ ಎಂಜಿ ರಸ್ತೆ, ಬ್ರಿಗೇಡ್ ರಸ್ತೆ, ಚರ್ಚ್ ಸ್ಟ್ರೀಟ್, ಸೇಂಟ್ ಮಾರ್ಕ್ಸ್ ರಸ್ತೆ, ರೆಸ್ಟ್ ಹೌಸ್ ರಸ್ತೆ ಮತ್ತು ರೆಸಿಡೆನ್ಸಿ ರಸ್ತೆಗಳಲ್ಲಿ ಕರ್ತವ್ಯದಲ್ಲಿರುವ ಪೊಲೀಸ್ ಮತ್ತು ಅಗತ್ಯ ಸೇವೆಗಳ ವಾಹನಗಳನ್ನು ಹೊರತುಪಡಿಸಿ, ಇತರೆ ವಾಹನಗಳ ಸಂಚಾರಕ್ಕೆ ಈ ರಸ್ತೆಯಲ್ಲಿ ನಿರ್ಬಂಧ ಹೇರಲಾಗಿದೆ.

ಈ ರಸ್ತೆಗಳಲ್ಲಿ ಶನಿವಾರ ರಾತ್ರಿ 8 ರಿಂದ ಭಾನುವಾರ ಮಧ್ಯರಾತ್ರಿ 1 ರವರೆಗೆ ಪ್ರವೇಶವನ್ನು ನಿರಾಕರಿಸಲಾಗಿದೆ. ಶನಿವಾರ ಮಧ್ಯಾಹ್ನ 2 ಗಂಟೆಯಿಂದ ಭಾನುವಾರ ಮುಂಜಾನೆ 3 ಗಂಟೆಯವರೆಗೆ ಈ ರಸ್ತೆಗಳಲ್ಲಿ ವಾಹನಗಳ ನಿಲುಗಡೆಯನ್ನೂ ನಿಷೇಧಿಸಲಾಗಿದೆ.

ಈ ರಸ್ತೆಗಳಲ್ಲಿ ಪ್ರವೇಶವಿಲ್ಲ...

  • ಎಂಜಿ ರಸ್ತೆ - ಅನಿಲ್ ಕುಂಬ್ಳೆ ವೃತ್ತದಿಂದ ಮೇಯೋ ಹಾಲ್ ಬಳಿ ರೆಸಿಡೆನ್ಸಿ ರಸ್ತೆವರೆಗೆ
  • ಬ್ರಿಗೇಡ್ ರಸ್ತೆ - ಕಾವೇರಿ ಎಂಪೋರಿಯಂ ಜಂಕ್ಷನ್‌ನಿಂದ ಒಪೇರಾ ಜಂಕ್ಷನ್‌ವರೆಗೆ
  • ಚರ್ಚ್ ಸ್ಟ್ರೀಟ್ - ಬ್ರಿಗೇಡ್ ರಸ್ತೆಯಿಂದ ಮ್ಯೂಸಿಯಂ ರಸ್ತೆಗೆ
  • ಮ್ಯೂಸಿಯಂ ರಸ್ತೆ - ಎಂಜಿ ರಸ್ತೆಯಿಂದ ಹಳೇ ಮದ್ರಾಸ್ ರಸ್ತೆ ಜಂಕ್ಷನ್‌ವರೆಗೆ
  • ರೆಸ್ಟ್ ಹೌಸ್ ರಸ್ತೆ - ಮ್ಯೂಸಿಯಂ ರಸ್ತೆಯಿಂದ ಬ್ರಿಗೇಡ್ ರಸ್ತೆವರೆಗೆ
  • ರೆಸಿಡೆನ್ಸಿ ಕ್ರಾಸ್ ರಸ್ತೆ - ರೆಸಿಡೆನ್ಸಿ ರಸ್ತೆಯಿಂದ ಎಂಜಿ ರಸ್ತೆ (ಶಂಕರ್ ನಾಗ್ ಥಿಯೇಟರ್)ವರೆಗೆ

ಈ ರಸ್ತೆಗಳಲ್ಲಿ ಪಾರ್ಕಿಂಗ್ ಇಲ್ಲ...

  • ಎಂಜಿ ರಸ್ತೆ - ಅನಿಲ್ ಕುಂಬ್ಳೆ ವೃತ್ತದಿಂದ ಟ್ರಿನಿಟಿ ವೃತ್ತದವರೆಗೆ
  • ಬ್ರಿಗೇಡ್ ರಸ್ತೆ - ಕಾವೇರಿ ಎಂಪೋರಿಯಂ ಜಂಕ್ಷನ್‌ನಿಂದ ಒಪೇರಾ ಜಂಕ್ಷನ್‌ವರೆಗೆ
  • ಚರ್ಚ್ ಸ್ಟ್ರೀಟ್ - ಬ್ರಿಗೇಡ್ ರಸ್ತೆಯಿಂದ ಸೇಂಟ್ ಮಾರ್ಕ್ಸ್ ರಸ್ತೆಯವರೆಗೆ
  • ರೆಸ್ಟ್ ಹೌಸ್ ರಸ್ತೆ - ಬ್ರಿಗೇಡ್ ರಸ್ತೆಯಿಂದ ಮ್ಯೂಸಿಯಂ ರಸ್ತೆವರೆಗೆ
  • ಮ್ಯೂಸಿಯಂ ರಸ್ತೆ - ಎಂಜಿ ರಸ್ತೆಯಿಂದ ಮದ್ರಾಸ್ ಬ್ಯಾಂಕ್ ರಸ್ತೆ ಜಂಕ್ಷನ್‌ವರೆಗೆ

ಬದಲಿ ಮಾರ್ಗ

  • ಡಿ. 31 ರಂದು ರಾತ್ರಿ ಎರಡು ಗಂಟೆಯ ನಂತರ ಎಂಜಿ ರಸ್ತೆಯಿಂದ ಹಲಸೂರು ಕಡೆ ಹೋಗುವವರು- ಅನಿಲ್ ಕುಂಬ್ಳೆ ರಸ್ತೆಯಲ್ಲಿ ಎಡಕ್ಕೆ ತಿರುಗಿ ಸೆಂಟ್ರಲ್ ಸ್ಟ್ರೀಟ್ - ಬಿ.ಆರ್.ವಿ ಜಂಕ್ಷನ್ ಬಲ‌ ತಿರುವು ಪಡೆದು ಕಬ್ಬನ್ ರಸ್ತೆಯ ಮೂಲಕವಾಗಿ ವೆಬ್ಸ್ ಜಂಕ್ಷನ್ ಬಳಿಯಿಂದ ಸಾಗಬೇಕು.
  • ಹಲಸೂರು ಕಡೆಯಿಂದ ಕಂಟೋನ್ ಮೆಂಟ್‌ ಕಡೆ ಸಾಗುವವರು. ಟ್ರಿನಿಟಿ ವೃತ್ತದಲ್ಲಿ ಬಲ‌ ತಿರುವು ಪಡೆದು- ಹಲಸೂರು ರಸ್ತ- ಡಿಕಂನ್ಸ್ ನ್ ರಸ್ತೆಯ ಮಾರ್ಗವಾಗಿ - ಕಬ್ಬನ್ ರಸ್ತೆ ಮೂಲಕ‌ ಸಂಚಾರ ಮಾಡಬೇಕು.
  • ಕಾಮರಾಜ‌ ರಸ್ತೆಯಲ್ಲಿ ಕಬ್ಬನ್ ರಸ್ತೆ ಜಂಕ್ಷನ್ ನಿಂದ ಕಮರ್ಷಿಯಲ್ ಸ್ಟ್ರೀಟ್ ಜಂಕ್ಷನ್ ವರೆಗೂ ವಾಹನಗಳ ನಿಲುಗಡೆಗೆ‌ ಅವಕಾಶ ಕಲ್ಪಿಸಲಾಗಿದೆ. ಸಾರ್ವಜನಿಕರು ಶಿವಾಜಿನಗರ ಬಿಎಂಟಿಸಿ ಶಾಪಿಂಗ್ ಕಾಂಪ್ಲೆಕ್ಸ್ ನಲ್ಲಿ ವಾಹನ ನಿಲುಗಡೆಗೆ ಅವಕಾಶ ನೀಡಲಾಗಿದೆ.
  • ಪಾದಚಾರಿಗಳು ಬ್ರಿಗೇಡ್‌ ರಸ್ತೆಯಲ್ಲಿ ಎಂಜಿ ರಸ್ತೆ ಜಂಕ್ಷನ್ ನಿಂದ - ಅಪೇರಾ ಜಂಕ್ಷನ್ ಕಡೆಗೆ ನಡೆದುಕೊಂಡು ಹೋಗಲು ಮಾತ್ರ ಅವಕಾಶ ನೀಡಲಾಗಿದೆ. ಈ ರಸ್ತೆಯಲ್ಲಿ ವಿರುದ್ಧ ದಿಕ್ಕಿನಲ್ಲಿ (ಒನ್ ವೇನಲ್ಲಿ) ನಡೆದುಕೊಂಡು ಹೋಗುವುದಕ್ಕೂ ಸಹ‌ ನಿಷೇಧ ಹೇರಲಾಗಿದೆ. ಪುನಃ ಎಂಜಿ‌ ರಸ್ತೆಗೆ ಬರಬೇಕಾದ್ರೆ ರೆಸಿಡೆನ್ಸಿ ರಸ್ತೆ ಕ್ರಾಸ್ ಮಾರ್ಗವಾಗಿ ಬರಲು ಅವಕಾಶ ಕಲ್ಪಿಸಲಾಗಿದೆ.
  • ಡಿ. 31 ರಂದು ರಾತ್ರಿ 9 ಗಂಟೆಯಿಂದ ಜ.1 ರ ಬೆಳಿಗ್ಗೆ 6 ಗಂಟೆಯ‌ವರೆಗೂ  ಫ್ಲೈ ಓವರ್ ಮೇಲೆ ವಾಹನಗಳ‌ ನಿಷೇಧ ವಿಧಿಸಲಾಗಿದೆ. ಕುಡಿದು ವಾಹನ ಚಲಾವಣೆ ಮಾಡಿದ್ರೆ‌ ಕೇಸ್‌ ಬೀಳಲಿದೆ. ವೀಲ್ಹಿಂಗ್ ಡ್ರ್ಯಾಗ್ ರೇಸ್ ನಲ್ಲಿ ಬಾಗಿಯಾದ್ರೆ ‌ಅಂತವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com