ಪೂರ್ವಾನುಮತಿ ಪಡೆಯದೆ ರಸ್ತೆಗೆ ಹಾನಿ ಮಾಡಿದರೆ, ಕ್ರಿಮಿನಲ್ ಮೊಕದ್ದಮೆ: ಬಿಬಿಎಂಪಿ ಆಯುಕ್ತ ಗೌರವ್ ಗುಪ್ತ
'ಪೂರ್ವಾನುಮತಿ ಪಡೆಯದೆ ರಸ್ತೆ ಕತ್ತರಿಸಿದರೆ, ಅಂತಹವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುತ್ತದೆ' ಎಂದು ಬಿಬಿಎಂಪಿಯ ಮುಖ್ಯ ಆಯುಕ್ತ ಗೌರವ್ ಗುಪ್ತ ಎಚ್ಚರಿಕೆ ನೀಡಿದ್ದಾರೆ.
Published: 03rd February 2022 01:11 PM | Last Updated: 03rd February 2022 01:45 PM | A+A A-

ಗೌರವ್ ಗುಪ್ತಾ
ಬೆಂಗಳೂರು: 'ಪೂರ್ವಾನುಮತಿ ಪಡೆಯದೆ ರಸ್ತೆ ಕತ್ತರಿಸಿದರೆ, ಅಂತಹವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುತ್ತದೆ' ಎಂದು ಬಿಬಿಎಂಪಿಯ ಮುಖ್ಯ ಆಯುಕ್ತ ಗೌರವ್ ಗುಪ್ತ ಎಚ್ಚರಿಕೆ ನೀಡಿದ್ದಾರೆ.
ಸುದ್ದಿಗಾರರ ಜೊತೆ ಬುಧವಾರ ಮಾತನಾಡಿದ ಅವರು, ‘ಕೆಲವು ರಸ್ತೆಗಳ ಕೆಳಗೆ ವಿದ್ಯುತ್ ಕೇಬಲ್ ಗಳು ಹಾಗೂ ಜಲಮಂಡಳಿಯವರು ಅಳವಡಿಸಿರುವ ಕುಡಿಯುವ ನೀರಿನ ಕೊಳವೆಗಳು ಇರುತ್ತವೆ. ಅವುಗಳಿಗೆ ಹಾನಿ ಉಂಟಾದಾಗ, ದುರಸ್ತಿಪಡಿಸಲು ರಸ್ತೆ ಕತ್ತರಿಸಬೇಕಾಗುತ್ತದೆ. ಆದರೆ, ಇದಕ್ಕೆ ಬಿಬಿಎಂಪಿಯಿಂದ ಪೂರ್ವಾನುಮತಿ ಪಡೆಯುವುದು ಕಡ್ಡಾಯ. ಇದಕ್ಕಾಗಿಯೇ ಪ್ರತ್ಯೇಕ ವ್ಯವಸ್ಥೆ ರೂಪಿಸಲಾಗಿದೆ’ ಎಂದರು.
ಕೇಬಲ್ ಮಾಫಿಯಾ, ಜಲಮಂಡಳಿ ಕಾಮಗಾರಿಗಳಿಂದ ಬೆಂಗಳೂರಿನ ರಸ್ತೆಗಳು ಸಂಪೂರ್ಣ ಹದಗೆಟ್ಟಿವೆ. ಇದರಿಂದ ರಸ್ತೆ ಅವಘಡಗಳಲ್ಲಿ ಮುಗ್ಧರು ಜೀವ ಕಳೆದುಕೊಂಡ ಪ್ರಕರಣಗಳು ಮರುಕಳಿಸುತ್ತಲೇ ಇವೆ. ಇದರಿಂದ ಎಚ್ಚೆತ್ತ ಬೆಂಗಳೂರು ಮಹಾನಗರ ಪಾಲಿಕೆ ಮುಖ್ಯ ಆಯುಕ್ತ ಗೌರವ ಗುಪ್ತಾ ರಸ್ತೆ ಕತ್ತರಿಸುವರಿಗೆ ಖಡಕ್ ವಾರ್ನಿಂಗ್ ನೀಡಿದ್ದಾರೆ.
ಇದನ್ನೂ ಓದಿ: ಗುಂಡಿ ಬಿದ್ದ ರಸ್ತೆಗಳು: ಬಿಬಿಎಂಪಿ ವಿರುದ್ಧ ಹೈಕೋರ್ಟ್ ಅತೃಪ್ತಿ
ರಸ್ತೆ ಕಡಿಯುವ ಪ್ರಕರಣಗಳಿಗೆ ಸಂಬಂಧಿಸಿದಂತೆ ಸುದ್ದಿಗಾರರ ಜತೆ ಮಾತನಾಡಿದ ಪಾಲಿಕೆ ಮುಖ್ಯ ಆಯುಕ್ತರು, ಕೆಲವು ರಸ್ತೆಗಳಲ್ಲಿ ವಿದ್ಯುತ್ ಕೇಬಲ್‌ಗಳು ಇವೆ. ಜಲಮಂಡಳಿ ಅಳವಡಿಸಿರುವ ಕುಡಿಯುವ ನೀರಿನ ಪೈಪುಗಳು ಇವೆ. ಅವುಗಳಿಗೆ ಹಾನಿ ಉಂಟಾದಾಗ ರಸ್ತೆ ಕತ್ತರಿಸಬೇಕಾಗುತ್ತದೆ. ಆದರೆ ರಸ್ತೆ ಕತ್ತರಿಸಬೇಕಾದರೆ, ಬಿಬಿಎಂಪಿ ಪೂರ್ವಾನುಮತಿ ಪಡೆಯುವುದು ಕಡ್ಡಾಯ. ಇದಕ್ಕಾಗಿಯೇ ಪ್ರತ್ಯೇಕ ವ್ಯವಸ್ಥೆ ರೂಪಿಸಲಾಗಿದೆ ಎಂದರು.
ಅಭಿವೃದ್ಧಿಪಡಿಸಿದ ರಸ್ತೆಯನ್ನು ಒಮ್ಮೆ ಕತ್ತರಿಸಿದರೆ, ಬಳಿಕ ಎಷ್ಟೇ ದುರಸ್ತಿ ಮಾಡಿದರೂ ಅದನ್ನು ಮತ್ತೆ ಹಿಂದಿನ ಸ್ಥಿತಿಗೆ ತರಲು ಸಾಧ್ಯವಾಗದು. ಬಿಬಿಂಪಿಯ ಸ್ವಾಧೀನದಲ್ಲಿರುವ ರಸ್ತೆಯನ್ನು ಯಾರಾದರೂ ಅಕ್ರಮವಾಗಿ ಕತ್ತರಿಸಿದರೆ ಅಂತಹವರ ವಿರುದ್ಧ ಪ್ರಕರಣ ದಾಖಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇವೆ. ನಮ್ಮ ಸ್ವಾಧೀನದಲ್ಲಿರುವ ರಸ್ತೆಗಳ ಸುರಕ್ಷತೆ ನಮ್ಮ ಅಧಿಕಾರಿಗಳದ್ದೇ ಹೊಣೆ’ ಎಂದು ಸ್ಪಷ್ಟಪಡಿಸಿದರು.
ಹಲವಾರು ಪ್ರಕರಣಗಳಲ್ಲಿ ಬಿಬಿಎಂಪಿಯ ಅನುಮತಿ ಪಡೆಯದೆಯೇ ರಸ್ತೆ ಕತ್ತರಿಸಲಾಗುತ್ತಿದೆ. ಈ ರೀತಿ ಅಕ್ರಮವಾಗಿ ರಸ್ತೆ ಕತ್ತರಿಸಿರುವ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ ಕ್ರಮ ಕೈಗೊಳ್ಳಲಿದ್ದೇವೆ. ಅದಕ್ಕೆ ಕಡಿವಾಣ ಹಾಕಲು ಶೀಘ್ರವೇ ಹೊಸ ವ್ಯವಸ್ಥೆ ಜಾರಿಗೆ ತರಲಿದ್ದೇವೆ’ ಎಂದರು.