ಅರಣ್ಯಗಳಲ್ಲಿ ಫೈರ್ ಲೈನ್ಸ್ ಕುರಿತ ಅನುಮಾನಗಳಿಗೆ ಅರಣ್ಯ ಇಲಾಖೆ ಸ್ಪಷ್ಟನೆ
ಬಂಡೀಪುರ ಮತ್ತು ನಾಗರಹೊಳೆ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಹುಲಿ ಗಣತಿಯನ್ನು ಪೂರ್ಣಗೊಳಿಸಿದ ನಂತರ ಅರಣ್ಯ ಇಲಾಖೆಯು ಬೆಂಕಿಯ ರೇಖೆ ರಚನೆಯ ಕಸರತ್ತನ್ನು ಪ್ರಾರಂಭಿಸಿದೆ. ಇದನ್ನು ಅನೇಕ ಹೋರಾಟಗಾರರು ಕಾಡ್ಗಿಚ್ಚು ಎಂದು ತಪ್ಪಾಗಿ ಭಾವಿಸಿದ್ದಾರೆ.
Published: 03rd February 2022 04:07 PM | Last Updated: 03rd February 2022 04:44 PM | A+A A-

ಹುಲಿಯ ಸಾಂದರ್ಭಿಕ ಚಿತ್ರ
ಬೆಂಗಳೂರು: ಬಂಡೀಪುರ ಮತ್ತು ನಾಗರಹೊಳೆ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಹುಲಿ ಗಣತಿಯನ್ನು ಪೂರ್ಣಗೊಳಿಸಿದ ನಂತರ ಅರಣ್ಯ ಇಲಾಖೆಯು ಬೆಂಕಿಯ ರೇಖೆ ರಚನೆಯ ಕಸರತ್ತನ್ನು ಪ್ರಾರಂಭಿಸಿದೆ. ಇದನ್ನು ಅನೇಕ ಹೋರಾಟಗಾರರು ಕಾಡ್ಗಿಚ್ಚು ಎಂದು ತಪ್ಪಾಗಿ ಭಾವಿಸಿದ್ದಾರೆ.
ಬೆಂಕಿ ರೇಖೆಗಳನ್ನು ರಚಿಸಲು ಸಮಯ ಹಾಗೂ ಶಕ್ತಿಯನ್ನು ವ್ಯಯ ಮಾಡುವ ಬದಲು, ಅದು ಅರಣ್ಯಗಳಲ್ಲಿ ಬಿದ್ದ ಬೆಂಕಿನಾ ಅಥವಾ ಇಲ್ಲವೇ ಎಂಬುದರ ಬಗ್ಗೆಗಿನ ಅನುಮಾನಗಳನ್ನು ಪರಿಹರಿಸುವುದರಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಬ್ಯುಸಿಯಾಗಿದ್ದಾರೆ.
ಧೀರ್ಘಾವಧಿಯ ಮಾನ್ಸೂನ್ ಮತ್ತು ತೇವಾಂಶದ ಕಾರಣದಿಂದಾಗಿ ನವೆಂಬರ್ - ಡಿಸೆಂಬರ್ ನಲ್ಲಿ ಮಾಡಬೇಕಾಗಿದ್ದ ಬೆಂಕಿ ರೇಖೆ ರಚನೆ ಪ್ರಕ್ರಿಯೆಯನ್ನು ಜನವರಿ ಮತ್ತು ಫೆಬ್ರವರಿಯಲ್ಲಿ ಮಾಡಲಾಗಿದೆ ಎಂದು ನಾಗರಹೊಳೆ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದ ನಿರ್ದೇಶಕ ಮಹೇಶ್ ಕುಮಾರ್ ಹೇಳಿದ್ದಾರೆ.
ಬಂಡೀಪುರ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಬೆಂಕಿಯಿಂದಾಗಿ ಅನೇಕ ಹುಲಿಗಳು ಸಾವನ್ನಪ್ಪಿವೆ ಅಂತಾ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಸುದ್ದಿ ಕುರಿತಂತೆ ಕುರಿತಂತೆ ಪ್ರತಿಕ್ರಿಯಿಸಿರುವ ಬಂಡೀಪುರ ಹುಲಿ ಸಂರಕ್ಷಿತಾರಣ್ಯದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ವಿ. ಕರಿಕಾಳನ್, ಇದು ಸತ್ಯವಲ್ಲ. ರಸ್ತೆಯ ಎರಡು ಬದಿಗಳಲ್ಲಿ ಬೆಂಕಿಯನ್ನು ನಿಯಂತ್ರಿಸಲಾಗಿದೆ. ಯಾವುದೇ ವನ್ಯಜೀವಿ ಸಾವನ್ನಪ್ಪಿದ ಬಗ್ಗೆ ವರದಿಯಾಗಿಲ್ಲ ಎಂದು ತಿಳಿಸಿದರು.