ಬೆಂಗಳೂರಿನಲ್ಲಿ ಕೋವಿಡ್ ಪಾಸಿಟಿವಿಟಿ ದರ ಒಂದಂಕಿಗೆ ಕುಸಿತ!
ಶುಕ್ರವಾರ ಬೆಂಗಳೂರಿನಲ್ಲಿ 6,039 ಹೊಸ ಕೋವಿಡ್ ಪ್ರಕರಣಗಳೊಂದಿಗೆ ದೈನಂದಿನ ಪಾಸಿಟಿವಿಟಿ ದರ ಶೇ. 9.17ರಷ್ಟು ಇರುವುದರೊಂದಿಗೆ ಒಂದಂಕಿಗೆ ಕುಸಿತವಾಗಿರುವುದಾಗಿ ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ತಿಳಿಸಿದ್ದಾರೆ.
Published: 05th February 2022 01:43 PM | Last Updated: 05th February 2022 02:59 PM | A+A A-

ಸಾಂದರ್ಭಿಕ ಚಿತ್ರ
ಬೆಂಗಳೂರು: ಶುಕ್ರವಾರ ಬೆಂಗಳೂರಿನಲ್ಲಿ 6,039 ಹೊಸ ಕೋವಿಡ್ ಪ್ರಕರಣಗಳೊಂದಿಗೆ ದೈನಂದಿನ ಪಾಸಿಟಿವಿಟಿ ದರ ಶೇ. 9.17ರಷ್ಟು ಇರುವುದರೊಂದಿಗೆ ಒಂದಂಕಿಗೆ ಕುಸಿತವಾಗಿರುವುದಾಗಿ ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ತಿಳಿಸಿದ್ದಾರೆ. ಆದರೆ ಕೋವಿಡ್ ವಾರ್ ರೂಮ್ ಡೇಟಾ ಪ್ರಕಾರ, ನಗರವು ವಾಸ್ತವವಾಗಿ, ಫೆಬ್ರವರಿ 3 ರಂದು ಪಾಸಿಟಿವಿಟಿ ದರದಲ್ಲಿ ಶೇಕಡಾ 9.38 ರಷ್ಟು ಮೈಲಿಗಲ್ಲನ್ನು ಸಾಧಿಸಿದೆ.
ಜನವರಿ 8 ರಿಂದ ಇದು ಅತ್ಯಂತ ಕಡಿಮೆ ಎಂದು ಸುಧಾಕರ್ ಹೇಳಿದ್ದಾರೆ. ಜನವರಿ 20 ರಂದು 30, 540 ಗರಿಷ್ಟ ಮಟ್ಟದಿಂದ ದೈನಂದಿನ ಹೊಸ ಪ್ರಕರಣಗಳಲ್ಲಿ ಶೇ.80 ರಷ್ಟು ಕಡಿಮೆಯಾಗಿದೆ. 51,000 ಸಕ್ರಿಯ ಪ್ರಕರಣಗಳಿದ್ದು, ತೀವ್ರ ಕುಸಿತವಾಗುತ್ತಿರುವುದಾಗಿ ಅವರು ಟ್ವೀಟ್ ಮಾಡಿದ್ದಾರೆ.
ಫೆಬ್ರವರಿ ಮೂರರಂದು ರಾಮನಗರ, ದಕ್ಷಿಣ ಕನ್ನಡ, ಚಿಕ್ಕಮಗಳೂರು, ಗದಗ್, ದಾವಣಗೆರೆ, ಬೀದರ್, ಉತ್ತರ ಕನ್ನಡ, ಯಾದಗಿರಿ, ಧಾರವಾಡ, ಕೊಪ್ಪಳ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ವಿಜಯಪುರ, ಉಡುಪಿ, ಚಿತ್ರದುರ್ಗ ಮತ್ತು ಕೋಲಾರದಲ್ಲಿ ಪಾಸಿಟಿವಿಟಿ ದರ ಒಂದಂಕಿಗೆ ಕುಸಿತವಾಗಿತ್ತು.
ಇದನ್ನೂ ಓದಿ: ರಾಜ್ಯದಲ್ಲಿ ಕೊರೋನಾ ಏರಿಳಿತ: ಮಹಾಮಾರಿಗೆ ಇಂದು 53 ಬಲಿ, ಬೆಂಗಳೂರಿನಲ್ಲಿ 6039 ಸೇರಿ 14950 ಮಂದಿಗೆ ಪಾಸಿಟಿವ್
ರಾಜ್ಯದಲ್ಲಿ 412 ಕಂಟೈನ್ ಮೆಂಟ್ ವಲಯಗಳು: ವಾರ್ ರೂಮ್ ನ ಇತ್ತೀಚಿನ ವರದಿ ಪ್ರಕಾರ, ಜನವರಿ 23 ರಂದು ದೈನಂದಿನ ಪಾಸಿಟಿವಿಟಿ ದರ ಶೇ. 32.95 ರಷ್ಟಿತ್ತು. ಅಲ್ಲಿಂದಲೂ ಸತತವಾಗಿ ಕಡಿಮೆಯಾಗುತ್ತಲೇ ಇದೆ. ಸಕ್ರಿಯ ಪ್ರಕರಣಗಳಲ್ಲಿ ಕೇವಲ 4,093 ಸೋಂಕಿತರು ಮಾತ್ರ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ದಾಖಲಾಗಿದ್ದಾರೆ.
ಬಿಬಿಎಂಪಿ ಮತ್ತು ಬೆಂಗಳೂರು ನಗರ ವ್ಯಾಪ್ತಿಯಲ್ಲಿ 13 ಸಕ್ರಿಯ ಕಂಟೈನ್ ಮೆಂಟ್ ವಲಯಗಳಿವೆ, ಉಳಿದ 412 ರಾಜ್ಯದ ಇತರ ಜಿಲ್ಲೆಗಳಿವೆ. ದೈನಂದಿನ ಮರಣ ಪ್ರಮಾಣ ಶೇ. 0.35 ರಷ್ಟಿದೆ.