ನಿಮ್ಹಾನ್ಸ್ ಮೂಲಕ 24X7 ಗಂಟೆ ಮಾನಸಿಕ ಆರೋಗ್ಯ ಸೇವೆ ನೀಡಲಿರುವ ಟಿ-ಮನಸ್
ಟೆಲಿ ಮಾನಸಿಕ ಆರೋಗ್ಯ ಸಹಾಯ ಮತ್ತು ರಾಷ್ಟ್ರೀಯ ಕಾರ್ಯ ಯೋಜನೆಗೆ ರಾಜ್ಯಗಳ ಟಿ-ಮನಸ್ ಅಭಿಯಾನಗಳಗಳನ್ನು ಕೇಂದ್ರ ಬಜೆಟ್ ನಲ್ಲಿ ಘೋಷಿಸಿರುವಂತೆ ಕಾರ್ಯರೂಪಕ್ಕೆ ತರಲಾಗುತ್ತಿದ್ದು ಅದಕ್ಕೆ ನಿಮ್ಹಾನ್ಸ್ ನೋಡಲ್ ಕೇಂದ್ರಗಳನ್ನು ನೇಮಕ ಮಾಡಿದೆ. ಅದರ ಮೂಲಕ 24*7 ಸಮಯಗಳ ಕಾಲ ಮಾನಸಿಕ ಆರೋಗ್ಯ ನೆರವು ಸಿಗಲಿದೆ.
Published: 05th February 2022 11:56 AM | Last Updated: 05th February 2022 02:52 PM | A+A A-

ಸಾಂಕೇತಿಕ ಚಿತ್ರ
ಬೆಂಗಳೂರು: ಟೆಲಿ ಮಾನಸಿಕ ಆರೋಗ್ಯ ಸಹಾಯ ಮತ್ತು ರಾಷ್ಟ್ರೀಯ ಕಾರ್ಯ ಯೋಜನೆಗೆ ರಾಜ್ಯಗಳ ಟಿ-ಮನಸ್ ಅಭಿಯಾನಗಳಗಳನ್ನು ಕೇಂದ್ರ ಬಜೆಟ್ ನಲ್ಲಿ ಘೋಷಿಸಿರುವಂತೆ ಕಾರ್ಯರೂಪಕ್ಕೆ ತರಲಾಗುತ್ತಿದ್ದು ಅದಕ್ಕೆ ನಿಮ್ಹಾನ್ಸ್ ನೋಡಲ್ ಕೇಂದ್ರಗಳನ್ನು ನೇಮಕ ಮಾಡಿದೆ. ಅದರ ಮೂಲಕ 24*7 ಸಮಯಗಳ ಕಾಲ ಮಾನಸಿಕ ಆರೋಗ್ಯ ನೆರವು ಸಿಗಲಿದೆ.
ಈ ಬಗ್ಗೆ ಪ್ರಕಟಣೆ ಹೊರಡಿಸಿರುವ ನಿಮ್ಹಾನ್ಸ್, ಮಾನಸಿಕ ತೊಂದರೆಯಲ್ಲಿರುವ ಜನರಿಗೆ, ವಿಶೇಷವಾಗಿ ನಮ್ಮ ದೇಶದ ದೂರದ ಕುಗ್ರಾಮ, ಗುಡ್ಡಗಾಡು ಪ್ರದೇಶಗಳಲ್ಲಿರುವವರಿಗೆ ತಕ್ಷಣದ ಮಾನಸಿಕ ಆರೋಗ್ಯದ ಮಧ್ಯಸ್ಥಿಕೆಯನ್ನು ಒದಗಿಸುವುದು ಟಿ-ಮನಸ್ನ ದೃಷ್ಟಿಯಾಗಿದೆ. ಸಮಗ್ರವಾದ ನಿರಂತರ ಆರೈಕೆಯನ್ನು ಒದಗಿಸಲು ಅಸ್ತಿತ್ವದಲ್ಲಿರುವ ವೈಯಕ್ತಿಕ ಮಾನಸಿಕ ಆರೋಗ್ಯ ಸೇವೆಗಳೊಂದಿಗೆ ಟಿ-ಮನಸ್ ಅನ್ನು ಜೋಡಿಸುವುದು ನಮ್ಮ ಉದ್ದೇಶವಾಗಿದೆ ಎಂದರು.
ಇದಕ್ಕೆ ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆಯ ಮೂಲಕ ತಾಂತ್ರಿಕ ನೆರವು ಪಡೆದುಕೊಳ್ಳಲಾಗುತ್ತದೆ ಎಂದರು.
ಇದನ್ನೂ ಓದಿ: ಕೇಂದ್ರ ಬಜೆಟ್ 2022: ರಾಷ್ಟ್ರೀಯ ಟೆಲಿ ಮೆಂಟಲ್ ಹೆಲ್ತ್ ಯೋಜನೆಗೆ ಬೆಂಗಳೂರಿನ ನಿಮ್ಹಾನ್ಸ್ ಆಯ್ಕೆ
ಸಂಸ್ಥೆಯು ಬಹು ಸಹಾಯವಾಣಿಗಳನ್ನು ನಡೆಸುವ ಅನುಭವ ಮತ್ತು ಸಹಾಯವಾಣಿಗಳ ಭಾಗವಾಗಿ ವೃತ್ತಿಪರರಿಗೆ ತರಬೇತಿ ನೀಡಿದ ಕಾರಣದಿಂದ ನೋಡಲ್ ಕೇಂದ್ರವಾಗಿ ಆಯ್ಕೆ ಮಾಡಲಾಗಿದೆ. ಇದು ವಿಶೇಷವಾಗಿ ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ ಮಾನಸಿಕ ಆರೋಗ್ಯ ರಕ್ಷಣೆಯನ್ನು ಒದಗಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದರು.
ಕೋವಿಡ್ -19 ಪರಿಣಾಮದ ಹಿನ್ನೆಲೆಯಲ್ಲಿ ವ್ಯಕ್ತಿಯ ಮಾನಸಿಕ ಆರೋಗ್ಯದ ಮೇಲೆ ಸಾಕಷ್ಟು ಪರಿಣಾಮ ಬೀರಿದೆ. ಮಾನಸಿಕ ಯಾತನೆಯನ್ನು ನಿವಾರಿಸಲು, ಸಾಮಾನ್ಯ ಮಾನಸಿಕ ಆರೋಗ್ಯ ಸಮಸ್ಯೆಗಳನ್ನು ಪರಿಹರಿಸಲು, ತೀವ್ರ ಮಾನಸಿಕ ಅಸ್ವಸ್ಥತೆ ಮತ್ತು ಆತ್ಮಹತ್ಯೆಯನ್ನು ತ್ವರಿತವಾಗಿ ಗುರುತಿಸಲು ಜನರಿಗೆ ಸಮಯೋಚಿತವಾಗಿ ಸಹಾಯ ಮಾಡುವ, ಸಮಕಾಲೀನ ಕಾರ್ಯತಂತ್ರದ ಅಗತ್ಯವಿದೆ. ಸಮಯೋಚಿತ ವೃತ್ತಿಪರ ಸಹಾಯದ ಅಗತ್ಯತೆಯನ್ನು ಮನಗಂಡು ಜನರಿಗೆ ಸಮಾಲೋಚನೆ ನೀಡಲಾಗುತ್ತದೆ ಎಂದು ಸಂಸ್ಥೆ ಹೇಳಿದೆ.