ಉಡುಪಿ: ಹಿಜಾಬ್ ವಿರುದ್ಧ ಕೇಸರಿ ಶಾಲು ಧರಿಸಿ ವಿದ್ಯಾರ್ಥಿಗಳ ಪ್ರತಿಭಟನೆ ಮುಂದುವರಿಕೆ, ಕಾಲೇಜಿಗೆ ರಜೆ ಘೋಷಣೆ
ಕಿಡಿಯಾಗಿ ಪ್ರಾರಂಭವಾದ 'ಹಿಜಾಬ್ ವಿವಾದ' ಉಡುಪಿ ಜಿಲ್ಲೆಯ ಇತರ ಹಲವು ಕಾಲೇಜುಗಳಿಗೆ ಹರಡಿದೆ. ಶನಿವಾರ, ಕುಂದಾಪುರದ ಭಂಡಾರ್ಕರ್ಸ್ ಕಾಲೇಜಿನಲ್ಲಿ ಸುಮಾರು 200 ವಿದ್ಯಾರ್ಥಿಗಳು ಕೇಸರಿ ಶಾಲುಗಳನ್ನು ಧರಿಸಿ 'ಜೈ ಶ್ರೀ ರಾಮ್' ಎಂಬ ಘೋಷಣೆ ಕೂಗುತ್ತಾ ಕಾಲೇಜಿಗೆ ಬಂದರು.
Published: 05th February 2022 12:35 PM | Last Updated: 05th February 2022 03:07 PM | A+A A-

ಕುಂದಾಪುರದ ಆರ್ ಎನ್ ಶೆಟ್ಟಿ ಕಾಲೇಜ್ ವಿದ್ಯಾರ್ಥಿಗಳನ್ನು ಚದುರಿಸಿದ ಪೊಲೀಸರು
ಉಡುಪಿ: ಕಿಡಿಯಾಗಿ ಪ್ರಾರಂಭವಾದ 'ಹಿಜಾಬ್ ವಿವಾದ' ಉಡುಪಿ ಜಿಲ್ಲೆಯ ಇತರ ಹಲವು ಕಾಲೇಜುಗಳಿಗೆ ಹರಡಿದೆ. ಶನಿವಾರ, ಕುಂದಾಪುರದ ಭಂಡಾರ್ಕರ್ಸ್ ಕಾಲೇಜಿನಲ್ಲಿ ಸುಮಾರು 200 ವಿದ್ಯಾರ್ಥಿಗಳು ಕೇಸರಿ ಶಾಲುಗಳನ್ನು ಧರಿಸಿ 'ಜೈ ಶ್ರೀ ರಾಮ್' ಎಂಬ ಘೋಷಣೆ ಕೂಗುತ್ತಾ ಕಾಲೇಜಿಗೆ ಬಂದರು.
ಆದಾಗ್ಯೂ, ಪೊಲೀಸರು ಅವರನ್ನು ತಡೆದು, ಯಾವುದೇ ಸಂಘರ್ಷವಾಗದಂತೆ ಗುಂಪನ್ನು ಚದುರಿಸಿದರು. ನಂತರ ಕಾಲೇಜು ಆಡಳಿತ ಮಂಡಳಿ ಹಾಗೂ ಪೊಲೀಸರ ಮನವೊಲಿಕೆ ಬಳಿಕ ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸದೆ ತರಗತಿಗೆ ಹಾಜರಾಗಲು ಒಪ್ಪಿಗೆ ಸೂಚಿಸಿದರು. ಇದಕ್ಕೂ ಮುನ್ನ ವಿದ್ಯಾರ್ಥಿಗಳು ಹಿಜಾಬ್ ವಿರುದ್ಧ ತಮ್ಮ ಪ್ರತಿಭಟನೆಯನ್ನು ದಾಖಲಿಸಲು ಸುಮಾರು ಅರ್ಧ ಕಿಲೋಮೀಟರ್ ಮೆರವಣಿಗೆ ನಡೆಸಿದರು.
ಇದನ್ನೂ ಓದಿ: ರಾಜ್ಯಾದ್ಯಂತ ವ್ಯಾಪಿಸಿದ ಹಿಜಾಬ್ ವಿವಾದ: ಮೈಸೂರಿನಲ್ಲಿ ‘ಐ ಲವ್ ಹಿಜಾಬ್‘ ಅಭಿಯಾನ ಆರಂಭ
ಈ ಮಧ್ಯೆ ಸಮಸ್ಯೆ ನಿಯಂತ್ರಣಕ್ಕೆ ಬರಬಹುದೆಂಬ ನಿರೀಕ್ಷೆಯಿಂದ ಕುಂದಾಪುರದ ಸರ್ಕಾರಿ ಪಿಯು ಕಾಲೇಜಿನ ಪ್ರಾಂಶುಪಾಲರು ಶನಿವಾರ ರಜೆ ಘೋಷಿಸಿದ್ದರು. ಸ್ಥಳೀಯ ದೇವಸ್ಥಾನದ ಜಾತ್ರೆ (ಬಸ್ರೂರ್ ರಥೋತ್ಸವ) ರಜೆಯ ಹಿಂದಿನ ಕಾರಣವೆಂದು ಹೇಳಲಾಗಿದ್ದರೂ, ಈ ಹಬ್ಬಕ್ಕೆ ಹಿಂದೆಂದೂ ರಜೆ ಘೋಷಿಸಿರಲಿಲ್ಲ ಎಂದು ಮೂಲಗಳು ತಿಳಿಸಿವೆ. ಹಿಜಾಬ್ ಮತ್ತು ಕೇಸರಿ ಶಾಲು ಸಾಲಿನ ಘರ್ಷಣೆಯನ್ನು ತಪ್ಪಿಸಲು ಕಾಲೇಜು ಆಡಳಿತ ಮಂಡಳಿ ರಜೆ ಘೋಷಿಸಿದಂತೆ ಎಂದು ವರದಿಯಾಗಿದೆ.
ಸಮೀಪದ ಕುಂದಾಪುರದ ಆರ್ಎನ್ ಶೆಟ್ಟಿ ಪಿಯು ಕಾಲೇಜಿನ ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ ತರಗತಿಗೆ ಹಾಜರಾಗಲು ಯತ್ನಿಸಿದರು. ಆದರೆ, ಕಾಲೇಜು ಆಡಳಿತ ಮಂಡಳಿ ಶನಿವಾರ ರಜೆ ಘೋಷಿಸಿ ವಿದ್ಯಾರ್ಥಿಗಳನ್ನು ಮನೆಗೆ ಕಳುಹಿಸಿದೆ. ಹಿಜಾಬ್ ವಿರುದ್ಧ ತಮ್ಮ ಭಿನ್ನಾಭಿಪ್ರಾಯ ವ್ಯಕ್ತಪಡಿಸಲು ವಿದ್ಯಾರ್ಥಿಗಳು ಬೀದಿಗಿಳಿದಿದ್ದರಿಂದ ಗುಂಪನ್ನು ನಿಯಂತ್ರಿಸಲು ಪೊಲೀಸರು ಹರಸಾಹಸಪಡುವಂತಾಯಿತು.
Protest against #Hijab continued even today also at #Bhandarkar private college at #Kundapura. This time #Hindu girl students wearing #saffronshawls came to college protesting against hijab. pic.twitter.com/8kmB8M1w3i
— Imran Khan (@KeypadGuerilla) February 5, 2022