ಕಾಲೇಜಿನೊಳಗೆ ಬುರ್ಖಾ ಧರಿಸುವುದು ಬೇಡ: ಹೊನ್ನಾಳಿಯ ವಿದ್ಯಾರ್ಥಿಗಳಿಂದ ಕಾಲೇಜು ಪ್ರಾಂಶುಪಾಲರಿಗೆ ಮನವಿ ಸಲ್ಲಿಕೆ
ಹಿಜಾಬ್ ಮತ್ತು ಕೇಸರಿ ಶಾಲು ಧರಿಸುವ ಬಗ್ಗೆ ರಾಜ್ಯದಲ್ಲಿ ತೀವ್ರ ವಿವಾದ ನಡೆಯುತ್ತಿರುವುದರ ಮಧ್ಯೆ ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲ್ಲೂಕಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳ ಒಂದು ವರ್ಗ, ಬುರ್ಖಾ ಧರಿಸಿಕೊಂಡು ಬರುವ ಹೆಣ್ಣುಮಕ್ಕಳನ್ನು ಕಾಲೇಜಿನೊಳಗೆ ಬಿಡಬೇಡಿ ಎಂದು ಮನವಿ ಮಾಡಿಕೊಂಡಿದೆ.
Published: 06th February 2022 08:36 AM | Last Updated: 06th February 2022 08:36 AM | A+A A-

ಸಾಂದರ್ಭಿಕ ಚಿತ್ರ
ಹೊನ್ನಾಳಿ: ಹಿಜಾಬ್ ಮತ್ತು ಕೇಸರಿ ಶಾಲು ಧರಿಸುವ ಬಗ್ಗೆ ರಾಜ್ಯದಲ್ಲಿ ತೀವ್ರ ವಿವಾದ ನಡೆಯುತ್ತಿರುವುದರ ಮಧ್ಯೆ ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲ್ಲೂಕಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳ ಒಂದು ವರ್ಗ, ಬುರ್ಖಾ ಧರಿಸಿಕೊಂಡು ಬರುವ ಹೆಣ್ಣುಮಕ್ಕಳನ್ನು ಕಾಲೇಜಿನೊಳಗೆ ಬಿಡಬೇಡಿ ಎಂದು ಮನವಿ ಮಾಡಿಕೊಂಡಿದೆ.
ಈ ಬಗ್ಗೆ ಪ್ರಾಂಶುಪಾಲರಿಗೆ ವಿದ್ಯಾರ್ಥಿಗಳು ಮನವಿ ಸಲ್ಲಿಸಿದ್ದಾರೆ. ರೋಹನ್ ಮತ್ತು ಇತರ ಐವರು ವಿದ್ಯಾರ್ಥಿಗಳು 50 ವಿದ್ಯಾರ್ಥಿಗಳ ಸಹಿ ಹಾಕಿಕೊಂಡು ಪ್ರಾಂಶುಪಾಲರಿಗೆ ಮನವಿ ಸಲ್ಲಿಸಿ ತರಗತಿಯೊಳಗೆ ಬುರ್ಖಾ ಧರಿಸುವುದನ್ನು ನಿಷೇಧಿಸಬೇಕೆಂದು ಕಾಲೇಜು ಆಡಳಿತ ವರ್ಗಕ್ಕೆ ಮನವಿ ಮಾಡಿಕೊಂಡಿದ್ದಾರೆ.
ಮುಸಲ್ಮಾನ ಹೆಣ್ಣುಮಕ್ಕಳು ಕಾಲೇಜಿಗೆ ತಮ್ಮಿಷ್ಟದ ಧಾರ್ಮಿಕ ಉಡುಪನ್ನು ಧರಿಸಿಕೊಂಡು ಬರಲಿ, ಆದರೆ ಕಾಲೇಜಿನೊಳಗೆ ಬೇರೆ ವಿದ್ಯಾರ್ಥಿನಿಗಳ ಜೊತೆ ಕುಳಿತು ಪಾಠ ಕೇಳುವಾಗ ಬುರ್ಖಾ ತೆಗೆದು ಬೇರೆ ಮಕ್ಕಳಂತೆಯೇ ಕುಳಿತುಕೊಳ್ಳಬೇಕು. ಪ್ರಾಂಶುಪಾಲರು ಮತ್ತು ಆಡಳಿತ ವರ್ಗ ಈ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಲು ವಿಫಲವಾದರೆ ಹಿಂದೂ ಸಮುದಾಯದವರು ಕೇಸರಿ ಶಾಲು ತೊಟ್ಟುಕೊಂಡು ಸೋಮವಾರದಿಂದ ತರಗತಿಗಳಿಗೆ ಬರುತ್ತಾರೆ ಎಂದು ಎಚ್ಚರಿಕೆ ನೀಡಿದ್ದಾರೆ.