ಮೈಸೂರು: ಕೇವಲ ಒಂದು ವಾರದಲ್ಲಿ 35 ಮಂದಿ ಕೋವಿಡ್'ಗೆ ಬಲಿ, ಹೆಚ್ಚಿದ ಆತಂಕ!
ಮೈಸೂರಿನಲ್ಲಿ ಕೋವಿಡ್ ಪ್ರಕರಣಗಳು ಇಳಿಮುಖವಾಗಿದ್ದರೂ, ಸಾವು ಏರಿಕೆಯಾಗುತ್ತಿರುವುದು ಜನರಲ್ಲಿ ಆತಂಕ ಹೆಚ್ಚಾಗುವಂತೆ ಮಾಡಿದೆ. ನಗರದಲ್ಲಿ ಕೇವಲ ಒಂದು ವಾರದಲ್ಲಿ (ಫೆಬ್ರವರಿ 1 ರಿಂದ 6 ರವರೆಗೆ) 35 ಕೋವಿಡ್ ಸಾವುಗಳು ವರದಿಯಾಗಿವೆ.
Published: 07th February 2022 07:46 AM | Last Updated: 07th February 2022 12:00 PM | A+A A-

ಸಂಗ್ರಹ ಚಿತ್ರ
ಮೈಸೂರು: ಮೈಸೂರಿನಲ್ಲಿ ಕೋವಿಡ್ ಪ್ರಕರಣಗಳು ಇಳಿಮುಖವಾಗಿದ್ದರೂ, ಸಾವು ಏರಿಕೆಯಾಗುತ್ತಿರುವುದು ಜನರಲ್ಲಿ ಆತಂಕ ಹೆಚ್ಚಾಗುವಂತೆ ಮಾಡಿದೆ. ನಗರದಲ್ಲಿ ಕೇವಲ ಒಂದು ವಾರದಲ್ಲಿ (ಫೆಬ್ರವರಿ 1 ರಿಂದ 6 ರವರೆಗೆ) 35 ಕೋವಿಡ್ ಸಾವುಗಳು ವರದಿಯಾಗಿವೆ.
ಈ ಹಿಂದೆ ಸುಮಾರು 3,500 ರಿಂದ 4,000 ಪ್ರಕರಣಗಳಿದ್ದ ದೈನಂದಿನ ಪ್ರಕರಣಗಳ ಸಂಖ್ಯೆ ಸಾವಿರಕ್ಕಿಂತಲೂ ಕಡಿಮೆ ವರದಿಯಾಗುತ್ತಿವೆ. ಸೋಂಕ ಪ್ರಕರಣ ಇಳಿಕೆ ಇದೀಗ ತುಸು ನೆಮ್ಮದಿ ನೀಡಿದಂತಾಗಿದೆ.
ಜಿಲ್ಲಾ ಆರೋಗ್ಯ ಬುಲೆಟಿನ್ ಪ್ರಕಾರ, ವೈರಸ್ಗೆ ಬಲಿಯಾದ 35 ಜನರಲ್ಲಿ, ಅರ್ಧದಷ್ಟು ಜನರು 75 ವರ್ಷಕ್ಕಿಂತ ಮೇಲ್ಪಟ್ಟವರಾಗಿದ್ದರೆ, 12 ವರ್ಷ ಮತ್ತು 35 ವರ್ಷದವರು ಸೇರಿದಂತೆ 40 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದಾರೆ. ರಸ್ತೆಯಲ್ಲಿ ಸಂಭವಿಸಿದ ಅಪಘಾತದಲ್ಲಿ ತಲೆಗೆ ಪೆಟ್ಟು ಬಿದ್ದು ಸಾವನ್ನಪ್ಪಿದ್ದ ವ್ಯಕ್ತಿಯಲ್ಲಿ ಸೋಂಕು ಪತ್ತೆಯಾಗಿದ್ದು, ಈ ಸಾವನ್ನು ಕೋವಿಡ್ ಸಾವೆಂದೇ ಪರಿಗಣಿಸಲಾಗಿದೆ ಎಂದು ತಿಳಿಸಿದೆ.
ಇದನ್ನೂ ಓದಿ: ಕೋವಿಡ್ 3ನೇ ಅಲೆ ಸಾವಿನ ಲೆಕ್ಕಪರಿಶೋಧನೆ ನಡೆಸಲು ಸಮಿತಿ ರಚಿಸಿ: ಸರ್ಕಾರಕ್ಕೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮನವಿ
ಹೆಚ್ಚಿನ ಸಾವುಗಳು ರಿಫ್ರ್ಯಾಕ್ಟರಿ ಹೈಪೋಕ್ಸಿಯಾ, ಸೆಪ್ಟಿಕ್ ಆಘಾತ, ಕೋವಿಡ್ ಬ್ರಾಂಕೋಪ್ನ್ಯುಮೋನಿಯಾ ಮತ್ತು ತೀವ್ರವಾದ ಕೋವಿಡ್ ಸೋಂಕಿನಿಂದ ಉಂಟಾಗಿದ್ದರೆ, ಶೇ.80ರಷ್ಟು ಜನರು ಅಧಿಕ ರಕ್ತದೊತ್ತಡ, ಮಧುಮೇಹ ಮತ್ತು ದೀರ್ಘಕಾಲದ ಮೂತ್ರಪಿಂಡ ಅಥವಾ ಪಿತ್ತಜನಕಾಂಗದ ಕಾಯಿಲೆಯಿಂದಾಗಿ ಸಾವನ್ನಪ್ಪಿದ್ದಾರೆ.
"ಕಳೆದ ಒಂದು ವಾರದಲ್ಲಿ ಕೋವಿಡ್ ಸಾವುಗಳು ಹೆಚ್ಚಾಗಿದ್ದರೂ, ಮರಣ ಪ್ರಮಾಣ ಶೇಕಡಾ 1 ಕ್ಕಿಂತ ಕಡಿಮೆಯಿದೆ. ಒಂದು ವಾರದಲ್ಲಿ 3,700 ಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗಿದ್ದು, ಈ ಪೈಕಿ 35 ಜನರು COVID ಗೆ ಬಲಿಯಾಗಿದ್ದಾರೆ ಮತ್ತು ಸಾವಿನ ಪ್ರಮಾಣವು ಸುಮಾರು 0.8 ಶೇಕಡದಷ್ಟಿದೆ ಎಂದು ಮಾಹಿತಿ ನೀಡಿದೆ.
ಏತನ್ಮಧ್ಯೆ, ಲಸಿಕೆ ಹಾಕಿಸಿಕೊಳ್ಳದವರು ಐಸಿಯುವಿನಲ್ಲಿದ್ದು, ದೀರ್ಘಕಾಲಿಕ ರೋಗದಿಂದ ಬಳಲುತ್ತಿರುವವರು ಆಸ್ಪತ್ರೆಗೆ ತಡವಾಗಿ ದಾಖಲಾಗುವವರು ಹೆಚ್ಚಿನ ಸಾವಿಗೆ ಕಾರಣವಾಗಿದೆ ಎಂದು ಹಿರಿಯ ಆರೋಗ್ಯಾಧಿಕಾರಿಯೊಬ್ಬರು ಹೇಳಿದ್ದಾರೆ.