ಹಿಜಾಬ್ ಇಂದು ನಿನ್ನೆಯ ಬೇಡಿಕೆಯಲ್ಲ, ಹಲವು ವರ್ಷಗಳಿಂದ ಕೇಳುತ್ತಿದ್ದೇವೆ: ಉಡುಪಿ ವಿದ್ಯಾರ್ಥಿನಿಯರ ವಾದ

ಕೋವಿಡ್ ಸೋಂಕಿನಂತೆ ಹಿಜಾಬ್ v/s ಕೇಸರಿ ಶಾಲು ವಿವಾದ ಈಗ ಒಂದೊಂದೇ ಜಿಲ್ಲೆಗೆ ವ್ಯಾಪಿಸುತ್ತಿದೆ.ಕೋವಿಡ್ ಲಾಕ್ ಡೌನ್ ನಿಂದ ಶಾಲಾ-ಕಾಲೇಜು ಕಳೆದೆರಡು ವರ್ಷಗಳಿಂದ ಸರಿಯಾಗಿ ನಡೆಯದೆ ಪಾಠ-ಪ್ರವಚನಗಳು ಸರಿಯಾಗಿ ಆಗಿಲ್ಲ ಎಂದು ಪೋಷಕರು, ಶಿಕ್ಷಕರು, ವಿದ್ಯಾರ್ಥಿಗಳು ಹೇಳುತ್ತಿರುವಾಗಲೇ ಕರಾವಳಿ ಭಾಗದಲ್ಲಿ ಹಿಜಾಬ್ ಪಡಂಭೂತ ಇದ್ದಕ್ಕಿದ್ದಂತೆ ತಲೆಯೆದ್ದಿತು. 

Published: 07th February 2022 12:47 PM  |   Last Updated: 07th February 2022 02:02 PM   |  A+A-


Students who weared Hijab

ಹಿಜಾಬ್ ಧರಿಸಿದ ವಿದ್ಯಾರ್ಥಿನಿಯರು

The New Indian Express

ಉಡುಪಿ: ಕೋವಿಡ್ ಸೋಂಕಿನಂತೆ ಹಿಜಾಬ್ v/s ಕೇಸರಿ ಶಾಲು(Hijab row) ವಿವಾದ ಈಗ ಒಂದೊಂದೇ ಜಿಲ್ಲೆಗೆ ವ್ಯಾಪಿಸುತ್ತಿದೆ.ಕೋವಿಡ್ ಲಾಕ್ ಡೌನ್ ನಿಂದ ಶಾಲಾ-ಕಾಲೇಜು ಕಳೆದೆರಡು ವರ್ಷಗಳಿಂದ ಸರಿಯಾಗಿ ನಡೆಯದೆ ಪಾಠ-ಪ್ರವಚನಗಳು ಸರಿಯಾಗಿ ಆಗಿಲ್ಲ ಎಂದು ಪೋಷಕರು, ಶಿಕ್ಷಕರು, ವಿದ್ಯಾರ್ಥಿಗಳು ಹೇಳುತ್ತಿರುವಾಗಲೇ ಕರಾವಳಿ ಭಾಗದಲ್ಲಿ ಹಿಜಾಬ್ ಪಡಂಭೂತ ಇದ್ದಕ್ಕಿದ್ದಂತೆ ತಲೆಯೆದ್ದಿತು. 

ನಾವು ಹಿಜಾಬ್ ಹಾಕಿಕೊಂಡೇ ಕಾಲೇಜಿಗೆ ಬರುತ್ತೇವೆ, ನಮ್ಮನ್ನು ತಡೆಯುವವರಾರು ಎಂದು ಮುಸ್ಲಿಂ ವಿದ್ಯಾರ್ಥಿನಿಯರು ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ. ಬಿಜೆಪಿ ಸರ್ಕಾರ ಎಲ್ಲಾ ವಿದ್ಯಾರ್ಥಿಗಳು ಒಂದೇ ರೀತಿಯ ಸಮವಸ್ತ್ರ ಧರಿಸಿಕೊಂಡು ಬರಬೇಕು, ಇಲ್ಲಿ ಹಿಜಾಬ್, ಕೇಸರಿ ಶಾಲು ಯಾವುದಕ್ಕೂ ಅವಕಾಶವಿಲ್ಲ ಎಂದು ಸಮವಸ್ತ್ರ ನೀತಿ ಹೊರಡಿಸಿದೆ. 

ಆದರೆ ಹಿಜಾಬ್ ವಿವಾದ ಇಂದು ಮತ್ತಷ್ಟು ವ್ಯಾಪಿಸಿದೆ. ಬೇರೆ ಬೇರೆ ಜಿಲ್ಲೆಗಳಲ್ಲಿ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಹಿಜಾಬ್ v/s ಕೇಸರಿ ಶಾಲು(Sufrown Shawl) ವಿಚಾರದಲ್ಲಿ ಬಡಿದಾಡಿಕೊಳ್ಳುತ್ತಿದ್ದಾರೆ. ಅಷ್ಟಕ್ಕೂ ಹಿಜಾಬ್ ಧರಿಸುವ ವಿಷಯ ಇದ್ದಕ್ಕಿದ್ದಂತೆ ಏಕೆ ಎದ್ದಿತು, ಇದರ ಹಿಂದೆ ರಾಜಕೀಯ ಕೈವಾಡವಿದೆ ಎಂದು ರಾಜಕೀಯ ನಾಯಕರು ಹೇಳುತ್ತಿದ್ದಾರೆ. 

ಆದರೆ ಉಡುಪಿಯ(Udupi college students) ವಿದ್ಯಾರ್ಥಿನಿಯರು ಹೇಳುವುದು ಬೇರೆ. ಹಿಜಾಬ್ ನಮ್ಮ ಹಠಾತ್ ಬೇಡಿಕೆಯಲ್ಲ, ನಾವು ಕಾಲೇಜಿನ ಮೊದಲ ವರ್ಷದಲ್ಲಿರುವಾಗಲೇ ಹಿಜಾಬ್ ಧರಿಸಲು ಅನುಮತಿ ನೀಡಬೇಕೆಂದು ಕಾಲೇಜು ಆಡಳಿತ ಮಂಡಳಿಗೆ ಕೇಳಿದ್ದೆವು. ಕಳೆದ ಹಲವು ವರ್ಷಗಳಿಂದ ಕೇಳುತ್ತಿದ್ದೇವೆ. ಆದರೆ ನಮ್ಮ ಬೇಡಿಕೆಯನ್ನು ಇದುವರೆಗೆ ಯಾರೂ ಮನ್ನಿಸಿಲ್ಲ ಎಂದು ಶಾಸಕ ರಘುಪತಿ ಭಟ್ ಆರೋಪಕ್ಕೆ ವಿದ್ಯಾರ್ಥಿನಿಯೊಬ್ಬಳು ಉತ್ತರಿಸುತ್ತಾಳೆ.

ಇದನ್ನೂ ಓದಿ: ಹಿಜಾಬ್ ವಿವಾದ: ಸಮವಸ್ತ್ರವಿಲ್ಲದೆ, ಶಾಲೆ ಪ್ರವೇಶವಿಲ್ಲ; ಸಚಿವ ಬಿಸಿ ನಾಗೇಶ್

ನಾವು ನರ್ಸರಿಯಿಂದ ಹಿಜಾಬ್ ಧರಿಸಿಕೊಂಡೇ ಶಾಲೆಗೆ ಬರುತ್ತಿದ್ದೇವೆ. ನಮಗೆ ಅದನ್ನು ಧರಿಸುವುದರಿಂದ ಯಾವುದೇ ಸಮಸ್ಯೆಯಾಗುವುದಿಲ್ಲ ಎಂದು ಶಿಫಾ ಎಂಬ ವಿದ್ಯಾರ್ಥಿನಿ ಹೇಳುತ್ತಾಳೆ. 

ಮತ್ತೊಬ್ಬ ವಿದ್ಯಾರ್ಥಿನಿ ಅಲಿಯಾ, ಹಿಜಾಬ್ ವಿವಾದ ನಂತರ ತರಗತಿಯಲ್ಲಿ ಸಹಪಾಠಿಗಳು ನಮ್ಮನ್ನು ನೋಡುವ ರೀತಿಯೇ ಬದಲಾಗಿದೆ. ಕಾಲೇಜು ಕ್ಯಾಂಪಸ್ ಒಳಗೆ ಹಿಂದೂ ಧರ್ಮದ ಕಾರ್ಯಕ್ರಮವಾಗುವಾಗ ಎದ್ದುನಿಂತು ಕೈ ಮುಗಿದು ಗೌರವ ಸೂಚಿಸುತ್ತೇವೆ. ಹಾಗಿರುವಾಗ ನಮ್ಮ ಸಂಪ್ರದಾಯದಲ್ಲಿರುವ ಹಿಜಾಬ್ ಧರಿಸಿದರೆ ಏನು ತೊಂದರೆ, ದ್ವೇಷ ಹರಡುವ ಬದಲು ಬೇರೆ ಧರ್ಮವನ್ನು ಪ್ರೀತಿಸಿ ಸಹಿಷ್ಣುತೆ ತೋರಿಸಬಹುದಲ್ಲವೇ ಎಂದರು.

ಇಂದು ಹಿಜಾಬ್ ಧರಿಸಿಕೊಂಡು ಹೋದ ವಿದ್ಯಾರ್ಥಿನಿಯರಿಗೆ ತರಗತಿಯೊಳಗೆ ಅಧ್ಯಾಪಕರು ಬಿಡಲಿಲ್ಲ. ತರಗತಿಯ ಹೊರಗೆ ನಿಂತು ಮಾತನಾಡುತ್ತಾ, ನ್ಯಾಯಾಲಯ ನಮ್ಮ ಹಕ್ಕುಗಳನ್ನು ಎತ್ತು ಹಿಡಿಯುತ್ತದೆ ಎಂಬ ವಿಶ್ವಾಸವಿದೆ ಎನ್ನುತ್ತಾರೆ. 

ಈ ಮಧ್ಯೆ, ಕುಂದಾಪುರದ ಆರ್ ಎನ್ ಶೆಟ್ಟಿ ಪದವಿ ಪೂರ್ವ ಕಾಲೇಜಿನಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯಬಾರದೆಂದು ಇಂದು ಮತ್ತು ನಾಳೆ ರಜೆ ನೀಡಲಾಗಿದೆ.


Stay up to date on all the latest ರಾಜ್ಯ news
Poll
Nitish_Kumar1

2024 ರ ಲೋಕಸಭಾ ಚುನಾವಣೆಯಲ್ಲಿ ನಿತೀಶ್ ಕುಮಾರ್ ಅವರು ಸಂಯುಕ್ತ ವಿರೋಧ ಪಕ್ಷಗಳ ಪ್ರಧಾನಿ ಅಭ್ಯರ್ಥಿಯಾಗಬಹುದೇ?


Result
ಹೌದು
ಇಲ್ಲ

Comments

Disclaimer : We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

flipboard facebook twitter whatsapp