ಕೆರೆಗಳ ಜಾಗದಲ್ಲಿ ಉದ್ಯಾನ ಅಭಿವೃದ್ಧಿಪಡಿಸುವ ಯಾವುದೇ ಯೋಜನೆ ಪಾಲಿಕೆ ಮುಂದೆ ಇಲ್ಲ: ಗೌರವ್ ಗುಪ್ತಾ
ಕೆರೆಗಳ ಜಾಗದಲ್ಲಿ ಉದ್ಯಾನ ಅಭಿವೃದ್ಧಿಪಡಿಸುವ ಯಾವುದೇ ಯೋಜನೆ ಪಾಲಿಕೆ ಮುಂದೆ ಇಲ್ಲ ಎಂದು ಬಿಬಿಎಂಪಿ ಆಯುಕ್ತ ಗೌರವ್ ಗುಪ್ತಾ ಸ್ಪಷ್ಟನೆ ನೀಡಿದ್ದಾರೆ.
Published: 09th February 2022 01:07 PM | Last Updated: 09th February 2022 01:30 PM | A+A A-

ಗೌರವ್ ಗುಪ್ತಾ
ಬೆಂಗಳೂರು: ಕೆರೆಗಳ ಜಾಗದಲ್ಲಿ ಉದ್ಯಾನ ಅಭಿವೃದ್ಧಿಪಡಿಸುವ ಯಾವುದೇ ಯೋಜನೆ ಪಾಲಿಕೆ ಮುಂದೆ ಇಲ್ಲ ಎಂದು ಬಿಬಿಎಂಪಿ ಆಯುಕ್ತ ಗೌರವ್ ಗುಪ್ತಾ ಸ್ಪಷ್ಟನೆ ನೀಡಿದ್ದಾರೆ.
ಪಾಲಿಕೆ ಕಚೇರಿಯಲ್ಲಿ ಅಧಿಕಾರಿಗಳ ಸಭೆ ನಡೆಸಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ನಗರದಲ್ಲಿ ಹಲವು ಕೆರೆಗಳು ತನ್ನ ಸ್ವರೂಪ ಕಳೆದುಕೊಂಡಿವೆ. ಕೆಲವು ಕೆರೆಗಳಲ್ಲಿ ಹೂಳು ತುಂಬಿಕೊಂಡಿದ್ದರೆ, ಹಲವೆಡೆ ನೀರು ಹರಿದು ಬರಲು ಜಾಗವೇ ಇಲ್ಲದಂತಾಗಿದೆ. ಅಂತಹ ಕೆರೆಗಳ ಜಾಗವನ್ನು ಒತ್ತುವರಿ ಮಾಡಿಕೊಳ್ಳುವ ಪ್ರಯತ್ನಗಳು ನಡೆದಿವೆ. ಕೂಡಲೇ ಸರ್ವೆ ನಡೆಸಿ ಕೆರೆಯ ಗಡಿ ನಿಗದಿ ಮಾಡಿ ಒತ್ತುವರಿ ತೆರವುಗೊಳಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಕೆರೆಗಳ ಜಾಗದಲ್ಲಿ ಉದ್ಯಾನ ಅಭಿವೃದ್ಧಿಪಡಿಸುವ ಯಾವುದೇ ಯೋಜನೆ ಪಾಲಿಕೆ ಮುಂದೆ ಇಲ್ಲ’ ಎಂದು ಅವರು ಸ್ಪಷ್ಟಪಡಿಸಿದರು.
ಸ್ವಾಭಾವಿಕವಾಗಿ ಅಥವಾ ನೀರಿನ ಒಳಹರಿವಿಲ್ಲದೇ ಒಣಗುತ್ತಿರುವ ಕೆರೆಗಳನ್ನು ಉದ್ಯಾನವನಗಳು, ಆಟದ ಮೈದಾನಗಳು ಮತ್ತು ಇತರ ವಾಣಿಜ್ಯ ಉಪಯುಕ್ತ ಸ್ಥಳಗಳಾಗಿ ಮಾಡಲು ಎಂಜಿನಿಯರ್‌ಗಳು ಸ್ವಾಧೀನಪಡಿಸಿಕೊಳ್ಳುತ್ತಿದ್ದಾರೆ ಎಂದು ಹಲವರು ಆಯುಕ್ತರ ಗಮನ ಸೆಳೆದರು.
ಇದನ್ನೂ ಓದಿ: ಸಾರ್ವಜನಿಕರ ಜೀವದ ಜೊತೆ ಚೆಲ್ಲಾಟವಾಡಿದರೆ ಜೈಲಿಗಟ್ಟುತ್ತೇವೆ: ಬಿಬಿಎಂಪಿ ಅಧಿಕಾರಿಗಳಿಗೆ 'ಹೈ' ಎಚ್ಚರಿಕೆ
ಹೈಕೋರ್ಟ್ ನಿಗದಿ ಮಾಡಿರುವ ಸಮಯದೊಳಗೆ ರಸ್ತೆಗಳ ಗುಂಡಿ ಮುಚ್ಚಿ ಸರಿಪಡಿಸಲು ಸಂಬಂಧಪಟ್ಟ ಎಲ್ಲ ಎಂಜಿನಿಯರ್‌ಗಳಿಗೆ ಸೂಚನೆ ನೀಡಲಾಗಿದೆ’ ಎಂದು ಗುಪ್ತ ತಿಳಿಸಿದರು.
‘ನಗರದ ಒಳಗಿನ ಸ್ಥಿತಿ ಬೇರೆ ಇದೆ, ಹೊರ ವಲಯದ ಸ್ಥಿತಿ ಬೇರೆ ಇದೆ. ಹೊರ ವಲಯದಲ್ಲಿ ಜಲ ಮಂಡಳಿಯಿಂದ ಪೈಪ್‌ಲೈನ್ ಅಳವಡಿಕೆ ಕಾಮಗಾರಿ ಇನ್ನೂ ಪೂರ್ಣಗೊಳ್ಳಬೇಕಿದೆ. ಅನಗತ್ಯವಾಗಿ ವಿಳಂಬ ಮಾಡದೆ ಕಾಮಗಾರಿ ಪೂರ್ಣಗೊಳಿಸಲು ಸಮಯ ನಿಗದಿ ಮಾಡಬೇಕು. ಅಷ್ಟರಲ್ಲಿ ಪೂರ್ಣಗೊಳಿಸದಿದ್ದರೆ ನೋಟೀಸ್ ನೀಡುವಂತೆ ಎಂಜಿನಿಯರ್‌ಗಳಿಗೆ ತಿಳಿಸಲಾಗಿದೆ’ ಎಂದು ಹೇಳಿದರು.