ಬೆಂಗಳೂರಿನಲ್ಲಿ ಕೋವಿಡ್-19 ಪಾಸಿಟಿವಿಟಿ ದರ ಶೇ.3.5ಕ್ಕೆ ಇಳಿಕೆ
ಬೆಂಗಳೂರು ನಗರದಲ್ಲಿ ಕೋವಿಡ್-19 ದೈನಂದಿನ ಪಾಸಿಟಿವಿಟಿ ದರದಲ್ಲಿ ಶೇ. 3.55 ರಷ್ಟು ಇಳಿಕೆಯಾಗಿರುವುದಾಗಿ ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ತಿಳಿಸಿದ್ದಾರೆ. ಬುಧವಾರ ರಾಜ್ಯದಲ್ಲಿ 5,339, ಬೆಂಗಳೂರಿನಲ್ಲಿ 2,161 ಹೊಸ ಪ್ರಕರಣ ವರದಿಯಾಗಿದೆ.
Published: 10th February 2022 12:56 PM | Last Updated: 10th February 2022 01:09 PM | A+A A-

ವಿದ್ಯಾರ್ಥಿನಿಗೆ ಆಶಾ ಕಾರ್ಯಕರ್ತೆಯೊಬ್ಬರು ಲಸಿಕೆ ನೀಡುತ್ತಿರುವ ಚಿತ್ರ
ಬೆಂಗಳೂರು: ಬೆಂಗಳೂರು ನಗರದಲ್ಲಿ ಕೋವಿಡ್-19 ದೈನಂದಿನ ಪಾಸಿಟಿವಿಟಿ ದರದಲ್ಲಿ ಶೇ. 3.55 ರಷ್ಟು ಇಳಿಕೆಯಾಗಿರುವುದಾಗಿ ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ತಿಳಿಸಿದ್ದಾರೆ. ಬುಧವಾರ ರಾಜ್ಯದಲ್ಲಿ 5,339, ಬೆಂಗಳೂರಿನಲ್ಲಿ 2,161 ಹೊಸ ಪ್ರಕರಣ ವರದಿಯಾಗಿದೆ.
ನಗರದಲ್ಲಿ ಚೇತರಿಕೆ ದರ ಶೇ. 97.39 ರಿಂದ ಶೇ. 97.66ಕ್ಕೆ ಏರಿಕೆಯಾಗಿದೆ. ಆದಾಗ್ಯೂ, ಬುಧವಾರ ಬೆಂಗಳೂರಿನಲ್ಲಿ 16 ಸೋಂಕಿತರು ಮೃತಪಟ್ಟಿದ್ದಾರೆ. ಇದರೊಂದಿಗೆ ಸೋಂಕಿನಿಂದ ಮೃತಪಟ್ಟವರ ಒಟ್ಟಾರೇ ಸಂಖ್ಯೆ 16,724ಕ್ಕೆ ಏರಿಕೆಯಾಗಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 24,411 ಆಗಿದೆ.
ಇದನ್ನೂ ಓದಿ: ರಾಜ್ಯದಲ್ಲಿ ಮುಂದುವರೆದ ಕೊರೋನಾ ಏರಿಳಿತ: ಬೆಂಗಳೂರಿನಲ್ಲಿ 2,161 ಸೇರಿ 5,339 ಮಂದಿಗೆ ಪಾಸಿಟಿವ್; 48 ಸಾವು!
ವಾರ್ ರೂಮ್ ಮಾಹಿತಿ ಪ್ರಕಾರ, ಕಳೆದ ಏಳು ದಿನಗಳಲ್ಲಿ ಬೆಂಗಳೂರು ನಗರದಲ್ಲಿ 21,411 ಕೇಸ್ ಗಳು ವರದಿಯಾಗಿವೆ. ಈ ಪೈಕಿ 485 ಸೋಂಕಿತರು ಏಳು ದಿನ ಹೋಮ್ ಐಸೋಲೇಷನ್ ನಲ್ಲಿದ್ದರೆ, 1,400 ಸೋಂಕಿತರು ಏಳು ದಿನಗಳ ಕಾಲ ಆಸ್ಪತ್ರೆಯಲ್ಲಿದ್ದಾರೆ. 47 ಸೋಂಕಿ ಕೋವಿಡ್ ಕೇರ್ ಸೆಂಟರ್ ನಲ್ಲಿದ್ದರು.
ಈ ಮಧ್ಯೆ ರಾಜ್ಯದಲ್ಲಿನ ದೈನಂದಿನ ಪಾಟಿಸಿವಿಟಿ ದರ ಶೇ. 4.14 ರಷ್ಟಾಗಿದೆ. ಬುಧವಾರ ಒಟ್ಟು ಪ್ರಕರಣಗಳ ಸಂಖ್ಯೆ 39,12,100 ಆಗಿದೆ. ಜನವರಿ ಏಳರಿಂದ ಒಟ್ಟಾರೇ ರಾಜ್ಯದಲ್ಲಿನ ಪಾಸಿಟಿವಿಟಿ ದರ ಮೊದಲ ಬಾರಿಗೆ ಶೇ. 6.20ಕ್ಕೆ ಇಳಿಕೆಯಾಗಿದೆ. 16,749 ಸೋಂಕಿತರು ಗುಣಮುಖರಾಗುವುದರೊಂದಿಗೆ ಚೇತರಿಕೆ ದರ ಶೇ. 97.43ಕ್ಕೆ ಏರಿಕೆಯಾಗಿದೆ. 48 ಸಾವಿನೊಂದಿಗೆ ಒಟ್ಟಾರೇ ಮೃತರ ಸಂಖ್ಯೆ 39,495ಕ್ಕೆ ಏರಿಕೆಯಾಗಿದ್ದು, ಮರಣ ಪ್ರಮಾಣ ಶೇ. 1ರಷ್ಟಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 61 ಸಾವಿರಕ್ಕಿಂತಲೂ ಕಡಿಮೆಯಿದೆ.