ಹಿಜಾಬ್ ವಿವಾದ ನಡೆಯುತ್ತಿರುವ ಘರ್ಷಣೆಗಳ ಹಿಂದೆ ಹಿಂದುತ್ವ ಸಂಘಟನೆಗಳ ಕೈವಾಡ: ಬಹುತ್ವ ಕರ್ನಾಟಕ ಸಂಘಟನೆ
ಹಿಜಾಬ್ ವಿವಾದ ಸಂಬಂಧ ರಾಜ್ಯದಲ್ಲಿ ನಡೆಯುತ್ತಿರುವ ಘರ್ಷಣೆಗಳ ಹಿಂದೆ ಹಿಂದುತ್ವ ಸಂಘಟನೆಗಳ ಕೈವಾಡವಿದೆ ಎಂದು ಬಹುತ್ವ ಕರ್ನಾಟಕ ಸಂಘಟನೆ ಶುಕ್ರವಾರ ಆರೋಪಿಸಿದೆ.
Published: 12th February 2022 12:30 PM | Last Updated: 12th February 2022 12:30 PM | A+A A-

ಕರ್ನಾಟಕ ರಾಜ್ಯದ ಕೆಲವು ಶಾಲೆಗಳಲ್ಲಿ ಹಿಜಾಬ್ ಧರಿಸಿ ಮುಸ್ಲಿಂ ಹುಡುಗಿಯರಗೆ ತರಗತಿಗಳಿಗೆ ಹಾಜರಾಗುವುದನ್ನು ನಿಷೇಧಿಸಿದ್ದರ ವಿರುದ್ಧ ಕೋಲ್ಕತಾದಲ್ಲಿ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡಿರುವ ಮುಸ್ಲಿಂ ಮಹಿಳೆ.
ಬೆಂಗಳೂರು: ಹಿಜಾಬ್ ವಿವಾದ ಸಂಬಂಧ ರಾಜ್ಯದಲ್ಲಿ ನಡೆಯುತ್ತಿರುವ ಘರ್ಷಣೆಗಳ ಹಿಂದೆ ಹಿಂದುತ್ವ ಸಂಘಟನೆಗಳ ಕೈವಾಡವಿದೆ ಎಂದು ಬಹುತ್ವ ಕರ್ನಾಟಕ ಸಂಘಟನೆ ಶುಕ್ರವಾರ ಆರೋಪಿಸಿದೆ.
ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿರುವ ಸಂಘಟನೆ ಸದಸ್ಯರು, ಹಿಜಾಬ್ ವಿವಾದ ಸಂಬಂಧ ರಾಜ್ಯದಲ್ಲಿ ನಡೆಯುತ್ತಿರುವ ಘರ್ಷಣೆಗಳ ಹಿಂದೆ ಹಿಂದುತ್ವ ಸಂಘಟನೆಗಳ ಕೈವಾಡವಿದೆ. ಕೋಮುಗಲಭೆ ನಡೆದ ಕೆಲವು ಸ್ಥಳಗಳಿಗೆ ಭೇಟಿ ನೀಡಿದಾಗ ಈ ಸತ್ಯ ಬಹಿರಂಗವಾಗಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಬೆಂಗಳೂರಿಗೂ ಕಾಲಿಟ್ಟ ಹಿಜಾಬ್ ವಿವಾದ: ಶಾಲೆಯೊಂದರ ಮುಂದೆ ಹೈಡ್ರಾಮಾ, ಹೈಕೋರ್ಟ್ ಮಧ್ಯಂತರ ಆದೇಶಕ್ಕೆ ಡೋಂಟ್ ಕೇರ್
ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್ಎಸ್ಎಸ್)ಯೊಂದಿಗೆ ನಂಟು ಹೊಂದಿರುವ ಬಜರಂಗದಳ, ಹಿಂದೂ ಜಾಗರಣ ವೇದಿಕೆ, ಶ್ರೀರಾಮ ಸೇನೆ ಮತ್ತು ಶ್ರೀರಾಮಸೇನೆ ಹಿಂದೂಸ್ತಾನ್ನ ಸದಸ್ಯರು ಇದರಲ್ಲಿ ಭಾಗಿಯಾಗಿದ್ದಾರೆ. ಸ್ನೇಹಿತರ ದಿನ, ಪ್ರೇಮಿಗಳ ದಿನದ ಸಂದರ್ಭಗಳಲ್ಲಿ ಸಂಭವಿಸುವ ಅನೇಕ ಪ್ರಕರಣಗಳಲ್ಲು ಹಿಂದೂ ಸಂಘಟನೆಗಳ ಕೈವಾಡಗಳಿರುವುದು ಕಂಡು ಬಂದಿದೆ. ಈ ಸಂಘಟನೆಗಳು ಸಾಮಾಜಿಕ ಸಾಮರಸ್ಯವನ್ನು ಹಾಳು ಮಾಡುತ್ತಿವೆ.
ಕಾಲೇಜುಗಳಲ್ಲಿ ಕೇಸರಿ ಶಾಲು ಮತ್ತು ಕೇಸರಿ ಪೇಟವನ್ನು ಧರಿಸಿರುವ ವಿದ್ಯಾರ್ಥಿಗಳು,ರಾಜ್ಯಾದ್ಯಂತ ನಡೆಯುತ್ತಿರುವ ಘಟನೆಗಳನ್ನು ಗಮನಿಸಿದರೆ, ಆ ವಿದ್ಯಾರ್ಥಿಗಳು ಈ ಸಂಘಟನೆಗಳೊಂದಿಗೆ ಕೈ ಜೋಡಿಸುವಂತೆ ತೋರುತ್ತಿದೆ, ಹಿಂದುತ್ವ ಸಂಘಟನೆಗಳು ಯುವಕರನ್ನು ಪ್ರಚೋದಿಸುವ, ಬೆದರಿಕೆ ಹಾಕುವ ಪ್ರಯತ್ನಗಳಿಗೆ ಕೈಹಾಕುತ್ತಿವೆ. ಇತ್ತೀಚಿನ ದಿನಗಳಲ್ಲಿ ಶಿಕ್ಷಣ ಸಂಸ್ಥೆಗಳು ಹಿಂಸಾಚಾರದ ಕೇಂದ್ರಗಳಾಗಿ ಮಾರ್ಪಟ್ಟಿರುವುದು ದುರದೃಷ್ಟರಕರ ಸಂಗತಿ.
ಮುಸ್ಲಿಂ ಮಹಿಳೆಯರು ಹಿಜಾಬ್ ಧರಿಸುವ ತಮ್ಮ ಧಾರ್ಮಿಕ ಆಚರಣೆಯ ಹಕ್ಕನ್ನು ಹಠಾತ್ತನೆ ವಿರೋಧಿಸುತ್ತಿರುವ ಪರಿಸ್ಥಿತಿಗಳು ಎದುರಾಗಿದೆ. "ಈ ಘಟನೆಗಳು ಕರ್ನಾಟಕದ ಬಹುಸಂಸ್ಕೃತಿ ನಾಶಪಡಿಸುತ್ತಿದೆ ಎಂದು ತಿಳಿಸಿದ್ದಾರೆ.
ಶಿಕ್ಷಣ ಸಂಸ್ಥೆಗಳಲ್ಲಿ ಶೋಷಣೆಗೆ ಒಳಗಾಗಿರುವ ಮುಸ್ಲಿಂ ವಿದ್ಯಾರ್ಥಿನಿಯರಿಗೆ ಸರ್ಕಾರ ಸೂಕ್ತ ರಕ್ಷಣೆ ನೀಡಬೇಕು ಹಾಗೂ ಅವರ ಶೈಕ್ಷಣಿಕ ಹಕ್ಕನ್ನು ಭದ್ರಪಡಿಸಬೇಕು. ಶಾಲಾ ಕಾಲೇಜುಗಳಲ್ಲಿ ಕೋಮುವಾದಿ ದ್ವೇಷ ಹರಡುವುದನ್ನು ನಿಲ್ಲಿಸಬೇಕು. ದ್ವೇಷದ ಹೇಳಿಕೆಗಳನ್ನು ನೀಡಿರುವ ಎಲ್ಲ ಚುನಾಯಿತ ಜನಪ್ರತಿನಿಧಿಗಳ ವಿರುದ್ಧ ತಕ್ಷಣ ಎಫ್ಐಆರ್ ದಾಖಲಿಸಬೇಕು. ರಾಜ್ಯದಲ್ಲಿ ಕಲಹಗಳನ್ನು ಸೃಷ್ಟಿಸಿ, ಪೋಷಿಸುತ್ತಿರುವ ಕೋಮುವಾದಿ ವ್ಯಕ್ತಿಗಳನ್ನು ಕೂಡಲೇ ಬಂಧಿಸುವ ಕೆಲಸ ಮಾಡಬೇಕು ಎಂದು ಆಗ್ರಹಿಸಿದ್ದಾರೆ.