ಹಿಜಾಬ್ ವಿವಾದ: ಬೆಂಗಳೂರಿನ ವಿದ್ಯಾಸಾಗರ್ ಶಾಲೆಯ ಶಿಕ್ಷಕಿ ಶಶಿಕಲಾ ಅಮಾನತು
ಹಿಜಾಬ್ ವಿವಾದಕ್ಕೆ ಬೆಂಗಳೂರಿನ ಚಂದ್ರಾ ಲೇಔಟ್ ನ ವಿದ್ಯಾಸಾಗರ್ ಶಾಲೆಯಲ್ಲಿ ಕಾರಣವಾಗಿದ್ದಾರೆ ಎಂದು ಹೇಳಲಾಗುತ್ತಿರುವ ಶಿಕ್ಷಕಿ ಶಶಿಕಲಾ ಅವರನ್ನು ಶಾಲಾ ಆಡಳಿತ ಮಂಡಳಿ ಅಮಾನತು ಮಾಡಿದೆ.
Published: 12th February 2022 12:38 PM | Last Updated: 12th February 2022 12:38 PM | A+A A-

ಚಂದ್ರಾಲೇಔಟ್ ನ ವಿದ್ಯಾಸಾಗರ್ ಶಾಲೆ
ಬೆಂಗಳೂರು: ಹಿಜಾಬ್ ವಿವಾದಕ್ಕೆ ಬೆಂಗಳೂರಿನ ಚಂದ್ರಾ ಲೇಔಟ್ ನ ವಿದ್ಯಾಸಾಗರ್ ಶಾಲೆಯಲ್ಲಿ ಕಾರಣವಾಗಿದ್ದಾರೆ ಎಂದು ಹೇಳಲಾಗುತ್ತಿರುವ ಶಿಕ್ಷಕಿ ಶಶಿಕಲಾ ಅವರನ್ನು ಶಾಲಾ ಆಡಳಿತ ಮಂಡಳಿ ಅಮಾನತು ಮಾಡಿದೆ.
ಹಿಜಾಬ್ ಬಗ್ಗೆ ಅವಹೇಳನಕಾರಿಯಾಗಿ ತರಗತಿಯ ಬೋರ್ಡ್ ನಲ್ಲಿ ಶಿಕ್ಷಕಿ ಶಶಿಕಲಾ ಬರೆದಿದ್ದಾರೆ ಎಂಬ ಆರೋಪದಿಂದ ಇಂದು ಬೆಳಗ್ಗೆ ಚಂದ್ರಾ ಲೇಔಟ್ ನ ವಿದ್ಯಾಸಾಗರ್ ಶಾಲೆ ಬಳಿ ತೀವ್ರ ಗಲಾಟೆ ಉಂಟಾಗಿದ್ದು, ಸ್ಥಳಕ್ಕೆ ಪೋಷಕರು ಬಂದು ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕುತ್ತಿದ್ದರು.
ಸ್ಥಳಕ್ಕೆ ಪರಿಸ್ಥಿತಿ ತಿಳಿಗೊಳಿಸಲು ಪೊಲೀಸರು ಮತ್ತು ಡಿಡಿಪಿಐ ಉಪ ನಿರ್ದೇಶಕರು ಬಂದಿದ್ದಾರೆ. ಸದ್ಯ ಪೋಷಕರ ಒತ್ತಾಯದ ಮೇರೆಗೆ ಶಿಕ್ಷಕಿ ಶಶಿಕಲಾರನ್ನು ಅಮಾನತುಮಾಡಲಾಗಿದೆ ಎಂದು ಶಾಲೆಯ ಪ್ರಾಂಶುಪಾಲ ಶಿವಕುಮಾರ್ ತಿಳಿಸಿದ್ದಾರೆ.
ಶಾಲೆಯ ಮೂರು ಮಕ್ಕಳ ಇನಿಷಿಯಲ್ ಕೆಎಲ್ಎಸ್ ಎಂದು ಬರೆದಿದ್ದಾರೆ ಎಂದು ಪೋಷಕರು ಆಕ್ರೋಶ ಹೊರಹಾಕಲಾರಂಭಿಸಿದರು. ನಿನ್ನೆ ತರಗತಿಯಲ್ಲಿ ಏನು ನಡೆಯಿತು ಎಂದು ನನಗೆ ಗೊತ್ತಿರಲಿಲ್ಲ. ಇಂದು ಬಿಇಒ ಮತ್ತು ಡಿಡಿಪಿಐ ಬಂದು ಮಾತನಾಡಿದಾಗ ವಿಷಯ ಗೊತ್ತಾಯಿತು ನೀವು ಗಣಿತ ಶಿಕ್ಷಕಿಯಾಗಿ ನಿಮ್ಮ ಕಲಿಕೆಯ ವಿಷಯದ ಬಗ್ಗೆ ಮಾತ್ರ ಮಾತನಾಡಬೇಕು, ಬೇರೆ ಸೂಕ್ಷ್ಮ ವಿಚಾರಗಳನ್ನು ವಿದ್ಯಾರ್ಥಿಗಳ ಜೊತೆ ಮಾತನಾಡಬಾರದು ಎಂದು ಹೇಳಿ ಶಿಕ್ಷಕಿಯನ್ನು ಅಮಾನತು ಮಾಡಲಾಗಿದೆ ಎಂದರು.