ಸೋಮವಾರದಿಂದ ವಿಧಾನಮಂಡಲ ಅಧಿವೇಶನ: ಮೇಲ್ಮನೆ ಘನತೆ ಹೆಚ್ಚುವ ರೀತಿಯಲ್ಲಿ ಕಲಾಪ- ಸಭಾಪತಿ ಬಸವರಾಜ ಹೊರಟ್ಟಿ
ಸೋಮವಾರದಿಂದ ವಿಧಾನಮಂಡಲ ಅಧಿವೇಶನ ಆರಂಭವಾಗಲಿದ್ದು, ಫೆ.14 ರಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಉಭಯ ಸದನಗಳನ್ನುದ್ದೇಶಿಸಿ ಭಾಷಣ ಮಾಡಲಿದ್ದಾರೆ.
Published: 13th February 2022 01:21 AM | Last Updated: 13th February 2022 01:37 AM | A+A A-

ಸಭಾಪತಿ ಬಸವರಾಜ ಹೊರಟ್ಟಿ
ಬೆಂಗಳೂರು: ಸೋಮವಾರದಿಂದ ವಿಧಾನಮಂಡಲ ಅಧಿವೇಶನ ಆರಂಭವಾಗಲಿದ್ದು, ಫೆ.14 ರಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಉಭಯ ಸದನಗಳನ್ನುದ್ದೇಶಿಸಿ ಭಾಷಣ ಮಾಡಲಿದ್ದಾರೆ.
ಈ ಬಾರಿ ವಿಧಾನಪರಿಷತ್ತಿನ ಕಲಾಪಗಳು ಫೆ.14ಕ್ಕೆ ಪ್ರಾರಂಭವಾಗಿ 10 ದಿನಗಳ ಕಾಲ ನಡೆಯಲಿದ್ದು, ಹಲವು ಮಹತ್ವದ ವಿಷಯಗಳು ಕಲಾಪದ ವೇಳೆ ಚರ್ಚೆಯಾಗಲಿವೆ ಎಂದು ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ತಿಳಿಸಿದ್ದಾರೆ.
ಈ ಬಾರಿ ಕಲಾಪದ ವೇಳೆ ಅಂದಿನ ರಾಜಕಾರಣ ಅಂದಿನ ಚುನಾವಣೆ- ಇಂದಿನ ರಾಜಕಾರಣ ಇಂದಿನ ಚುನಾವಣೆ ಎಂಬ ವಿಷಯದ ಬಗ್ಗೆ ವ್ಯವಹಾರಿಕ ಸಲಹಾ ಸಮಿತಿ ಸಭೆಯಲ್ಲಿ ಚರ್ಚಿಸಿ ಸಮಯ ಪಡೆದುಕೊಂಡು ಸದನದಲ್ಲಿ ಚರ್ಚಿಸಲು ನಿರ್ಧರಿಸಲಾಗಿದೆ ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.
ಮುಂದಿನ ದಿನಗಳಲ್ಲಿ 60 ದಿನಗಳ ಕಲಾಪ ನಡೆಸಲು ಅವಕಾಶ ಒದಗಿಸುವಂತೆ ಸರ್ಕಾರಕ್ಕೆ ತಿಳಿಸಲಾಗುವುದು, ಇನ್ನೂ ಮುಂದೆ ರಾಜ್ಯಸಭೆ ಮಾದರಿಯಲ್ಲಿಯೇ ಮೇಲ್ನನೆ ಕಲಾಪ ನಡೆಸಲು ತೀರ್ಮಾನಿಸಲಾಗಿದೆ. ಈ ಸಂಬಂಧ ರಾಜ್ಯಸಭೆ ಅಧಿವೇಶನ ನಡೆಯುವ ವೇಳೆ ದೆಹಲಿಗೆ ತೆರಳಿ ಅಲ್ಲಿನ ಕಾರ್ಯಕಲಾಪಗಳನ್ನು ವೀಕ್ಷಿಸಿ, ಅಲ್ಲಿ ಅನುಸರಿಸುವ ನಿಯಮಗಳು, ಪದ್ದತಿಗಳನ್ನು ಅಳವಡಿಸಿಕೊಳ್ಳಬೇಕೆಂದಿದ್ದೇವೆ ಎಂದು ಸಭಾಪತಿ ತಿಳಿಸಿದರು.