ಎಲ್ಲರಿಗೂ ಶಿಕ್ಷಣ ಸಿಗುವ ವಾತಾವರಣ ನಿರ್ಮಿಸಬೇಕು: ಬಿ.ಸಿ.ನಾಗೇಶ್
ಶಿಕ್ಷಣದ ಅವಕಾಶವನ್ನು ಕಲ್ಪಿಸುವ ಮೂಲಕ ಪ್ರತಿಯೊಬ್ಬ ವ್ಯಕ್ತಿಯನ್ನು ಉನ್ನತೀಕರಿಸುವ ವಾತಾವರಣ ನಿರ್ಮಾಣವಾಗಬೇಕು ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರು ಶನಿವಾರ ಹೇಳಿದ್ದಾರೆ.
Published: 13th February 2022 07:25 AM | Last Updated: 13th February 2022 12:27 PM | A+A A-

ಬಿಸಿ ನಾಗೇಶ್
ಬೆಂಗಳೂರು: ಶಿಕ್ಷಣದ ಅವಕಾಶವನ್ನು ಕಲ್ಪಿಸುವ ಮೂಲಕ ಪ್ರತಿಯೊಬ್ಬ ವ್ಯಕ್ತಿಯನ್ನು ಉನ್ನತೀಕರಿಸುವ ವಾತಾವರಣ ನಿರ್ಮಾಣವಾಗಬೇಕು ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರು ಶನಿವಾರ ಹೇಳಿದ್ದಾರೆ.
ಇದನ್ನೂ ಓದಿ: ಹಿಜಾಬ್ ವಿವಾದ: ಕಾಲೇಜು ಪುನಾರಂಭ ಕುರಿತ ನಿರ್ಧಾರ ಫೆ.14 ಕ್ಕೆ- ಶಿಕ್ಷಣ ಸಚಿವ
ಆರ್ಟ್ ಆಫ್ ಲಿವಿಂಗ್ ಆಯೋಜಿಸಿದ್ದ ಶಿಕ್ಷಣದ ಭವಿಷ್ಯದ ಸಮಾವೇಶದಲ್ಲಿ ಮಾತನಾಡಿದ ಅವರು, ಶಿಕ್ಷಣದ ಸಾಮಾಜಿಕ ಮತ್ತು ವೈಯಕ್ತಿಕ ಅಂಶಗಳನ್ನು ಉಳಿಸಿಕೊಂಡು ಅದನ್ನು ಹೆಚ್ಚು ಡಿಜಿಟಲೀಕರಣಗೊಳಿಸುವ ಪ್ರಯತ್ನಗಳು ನಡೆಯಬೇಕು. ಶಾಲಾ ಮಕ್ಕಳೊಂದಿಗೆ ಮಾತನಾಡಿದಾಗ, ಮಕ್ಕಳು ತರಗತಿಗಳಿಗೆ ಹೋಗುವುದು ಮತ್ತು ಅವರ ಶಿಕ್ಷಕರೊಂದಿಗೆ ಸಂವಹನ ನಡೆಸುವುದಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿರುವುದು ತಿಳಿದುಬಂದಿತ್ತು. ಮಕ್ಕಳ ತಪ್ಪುಗಳನ್ನು ಗಮನಿಸುವ ಹಾಗೂ ಆ ಸಮಸ್ಯೆಗಳನ್ನು ಪರಿಹರಿಸುವ ವಾತಾವರಣ ನಿರ್ಮಿಸಲಾಗಿದೆ ಎಂದು ಹೇಳಿದ್ದಾರೆ.