ಹಿಜಾಬ್ ವಿವಾದವನ್ನು 'ಬಿಜೆಪಿ ತಂತ್ರ' ಎಂದ ಉಡುಪಿ ಕಾಂಗ್ರೆಸ್ ನಾಯಕರು
ರಾಜ್ಯದಲ್ಲಿ ಭುಗಿಲೆದ್ದಿರುವ ಹಿಜಾಬ್-ಕೇಸರಿ ಶಾಲು ವಿವಾದ ಕುರಿತು ಪ್ರತಿಕ್ರಿಯೆ ನೀಡಿರುವ ಉಡುಪಿಯ ಕಾಂಗ್ರೆಸ್ ನಾಯಕರು, ಇದು ಬಿಜೆಪಿಯ ತಂತ್ರವೆಂದು ಶನಿವಾರ ಹೇಳಿದ್ದಾರೆ.
Published: 13th February 2022 07:38 AM | Last Updated: 13th February 2022 12:28 PM | A+A A-

ಸಂಗ್ರಹ ಚಿತ್ರ
ಉಡುಪಿ: ರಾಜ್ಯದಲ್ಲಿ ಭುಗಿಲೆದ್ದಿರುವ ಹಿಜಾಬ್-ಕೇಸರಿ ಶಾಲು ವಿವಾದ ಕುರಿತು ಪ್ರತಿಕ್ರಿಯೆ ನೀಡಿರುವ ಉಡುಪಿಯ ಕಾಂಗ್ರೆಸ್ ನಾಯಕರು, ಇದು ಬಿಜೆಪಿಯ ತಂತ್ರವೆಂದು ಶನಿವಾರ ಹೇಳಿದ್ದಾರೆ.
ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಮಾತನಾಡಿ, ಚುನಾವಣೆಗೂ ಮುನ್ನವೇ ಧಾರ್ಮಿಕ ಭಾವನೆಗಳನ್ನು ಕೆರಳಿಸಿ ಜನರನ್ನು ಒಡೆಯುವ ತಂತ್ರವನ್ನು ಬಿಜೆಪಿ ಯಾವಾಗಲೂ ನಡೆಸುತ್ತಿದೆ. ಅದೇ ರೀತಿ ಹಿಜಾಬ್ ವಿವಾದವನ್ನು ಸೃಷ್ಟಿಸಿದೆ ಎಂದು ಆರೋಪಿಸಿದ್ದಾರೆ.
ಇದನ್ನೂ ಓದಿ: ಹಿಜಾಬ್ ವಿವಾದ: ಉಡುಪಿಯ ಎಲ್ಲಾ ಪ್ರೌಢ ಶಾಲಾ ವ್ಯಾಪ್ತಿಯಲ್ಲಿ ಸೆಕ್ಷನ್ 144 ಜಾರಿ
ಇಷ್ಟು ದಿನ ಮುಸ್ಲಿಂ ಯುವತಿಯರು ತರಗತಿಯೊಳಗೆ ಹಿಜಾಬ್ ಧರಿಸುತ್ತಿದ್ದರು, ಇದೀಗ ಇದು ಇದ್ದಕ್ಕಿದ್ದಂತೆ ಒಂದು ಸಮಸ್ಯೆಯಾಗಿ ಪರಿಣಮಿಸಿದೆ. ಹಿಜಾಬ್ ಧರಿಸುವುದು ಮುಸ್ಲಿಂ ಹೆಣ್ಣುಮಕ್ಕಳ ಸಾಂವಿಧಾನಿಕ ಹಕ್ಕು. ಈಗ ಬಿಜೆಪಿ ಸರಕಾರವು ಮಕ್ಕಳನ್ನು ಧರ್ಮದ ಆಧಾರದಲ್ಲಿ ವಿಭಜಿಸುವ ಮೂಲಕ ಅವರ ಮನಸ್ಥಿತಿಯನ್ನು ಹಾಳು ಮಾಡಿದೆ,'' ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.