ಆನೆ ಹಾವಳಿ ತಡೆಗೆ ಅರಣ್ಯ ಇಲಾಖೆ ಮಾಸ್ಚರ್ ಪ್ಲಾನ್: ಬರಲಿದೆ ಸ್ಟೀಲ್ ತಂತಿ ಬೇಲಿ
ಆನೆಗಳು ವನ್ಯಜೀವಿ ಅಭಯಾರಣ್ಯಗಳು ಮತ್ತು ರಾಷ್ಟ್ರೀಯ ಉದ್ಯಾನವನಗಳಲ್ಲಿ ಸೀಮಿತವಾಗಿರಲು ಮತ್ತು ಮಾನವ ಆವಾಸಸ್ಥಾನಗಳಿಗೆ ಅಡ್ಡಿಪಡಿಸುವುದನ್ನು ತಡೆಯಲು ಕರ್ನಾಟಕ ಅರಣ್ಯ ಇಲಾಖೆ ವಿನೂತನ ಪ್ರಯೋಗಕ್ಕೆ ಮುಂದಾಗಿದೆ.
Published: 14th February 2022 12:22 PM | Last Updated: 14th February 2022 02:45 PM | A+A A-

ಆನೆ ಹಿಂಡು
ಬೆಂಗಳೂರು: ಆನೆಗಳು ವನ್ಯಜೀವಿ ಅಭಯಾರಣ್ಯಗಳು ಮತ್ತು ರಾಷ್ಟ್ರೀಯ ಉದ್ಯಾನವನಗಳಲ್ಲಿ ಸೀಮಿತವಾಗಿರಲು ಮತ್ತು ಮಾನವ ಆವಾಸಸ್ಥಾನಗಳಿಗೆ ಅಡ್ಡಿಪಡಿಸುವುದನ್ನು ತಡೆಯಲು ಕರ್ನಾಟಕ ಅರಣ್ಯ ಇಲಾಖೆ ವಿನೂತನ ಪ್ರಯೋಗಕ್ಕೆ ಮುಂದಾಗಿದೆ.
ಈ ಹಿಂದೆ ಆನೆಗಳನ್ನು ನಿಯಂತ್ರಿಸಲು ಇಲಾಖೆ ಹೂಡಿದ್ದ ಎಲ್ಲಾ ವಿಧಾನಗಳನ್ನೂ ಇದು ಮೀರಿಸಿದೆ. ಈಗಾಗಲೇ ಈ ವಿಧಾನದ ಪ್ರಯೋಗ ಯಶಸ್ವಿಯಾಗಿದ್ದು, ಹೊಸೂರು ಬಳಿಯ ಕಾವೇರಿ ವನ್ಯಜೀವಿ ಅಭಯಾರಣ್ಯದಲ್ಲಿ ತಮಿಳುನಾಡು ಅರಣ್ಯಾಧಿಕಾರಿಗಳು ಇದೇ ವಿಧಾನ ಅನುಸರಿಸಿ ಯಶಸ್ಸು ಸಾಧಿಸಿದ್ದಾರೆ.
ಇಷ್ಟಕ್ಕೂ ಏನದು ಮಾಸ್ಚರ್ ಪ್ಲಾನ್?
ಆನೆಗಳು ಕಾಡಿನ ಹೊರಗೆ ಬರದಂತೆ ತಡೆಯಲು ಕರ್ನಾಟಕ ಅರಣ್ಯ ಇಲಾಖೆಯು ಎನ್ಟಿಆರ್ನಲ್ಲಿ ಸೋಲಾರ್ ಅಥವಾ ರೈಲು ಬ್ಯಾರಿಕೇಡ್ಗಳ ಬದಲಿಗೆ ಉಕ್ಕಿನ ತಂತಿ ಬೇಲಿಗಳನ್ನು ಮೊದಲ ಬಾರಿಗೆ ಬಳಸಲಿದೆ. ಇದೇ ವಿಧಾನವನ್ನು ಅನುಸರಿಸಿದ್ದ ಹೊಸೂರು ಬಳಿಯ ಕಾವೇರಿ ವನ್ಯಜೀವಿ ಅಭಯಾರಣ್ಯದಲ್ಲಿ ತಮಿಳುನಾಡು ಅರಣ್ಯಾಧಿಕಾರಿಗಳು ಯಶ ಕಂಡ ಬೆನ್ನಲ್ಲೇ ಇದೇ ವಿಧಾನವನ್ನು ಕರ್ನಾಟಕದಲ್ಲೂ ಅನುಸರಿಸಲು ಅರಣ್ಯ ಇಲಾಖೆ ಮುಂದಾಗಿದೆ. ಅದರಂತೆ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದಲ್ಲಿ (ಎನ್ಟಿಆರ್) ಶೀಘ್ರದಲ್ಲೇ ಈ ವಿಧಾನ ಅಳವಡಿಸಲು ಇಲಾಖೆ ನಿರ್ಧರಿಸಿದೆ.
ಇದನ್ನೂ ಓದಿ: ಅರಣ್ಯಗಳಲ್ಲಿ ಫೈರ್ ಲೈನ್ಸ್ ಕುರಿತ ಅನುಮಾನಗಳಿಗೆ ಅರಣ್ಯ ಇಲಾಖೆ ಸ್ಪಷ್ಟನೆ
ಈ ಕುರಿತು ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್ಗೆ ಮಾಹಿತಿ ನೀಡಿರುವ ಎನ್ಟಿಆರ್ನ ನಿರ್ದೇಶಕ ಡಿ ಮಹೇಶ್ ಕುಮಾರ್ ಅವರು, 'ಈ ವಿಧಾನದಲ್ಲಿ, ಆನೆಗಳು ನಿಲ್ಲಲು ಅಥವಾ ವಿಶ್ರಾಂತಿ ಪಡೆಯಲು ಗಟ್ಟಿಮುಟ್ಟಾದ ನೆಲೆಯನ್ನು ಪಡೆಯುವುದಿಲ್ಲ. ಉಕ್ಕಿನ ಹಗ್ಗಗಳು ಅವುಗಳು ಹಿಂತಿರುಗುವಂತೆ ಮಾಡುತ್ತವೆ ಮತ್ತು ಇದು ಪ್ರಾಣಿಯನ್ನು ಗೊಂದಲಗೊಳಿಸುತ್ತದೆ. ಆನೆ ಹಗ್ಗಗಳ ಮೇಲೆ ಹತ್ತಲು ಯಾವುದೇ ಹಿಡಿತವನ್ನು ಪಡೆಯುವುದಿಲ್ಲ. ಈ ವಿಧಾನವನ್ನು ನಾಗರಹೊಳೆಯಲ್ಲಿ ಅಳವಡಿಸಲು ನಮ್ಮ ಉನ್ನತಾಧಿಕಾರಿಗಳಿಂದ ಅನುಮತಿ ಪಡೆದಿದ್ದೇವೆ. ಈಗ ನಾವು ಅಂತಹ ಹಗ್ಗಗಳ ತಯಾರಕರನ್ನು ಶೋಧಿಸಬೇಕಾಗಿದೆ ಎಂದು ತಿಳಿಸಿದರು.
ವೆಚ್ಚದಲ್ಲೂ ಅಗ್ಗ
ಈ ಉಕ್ಕಿನ ಹಗ್ಗಗಳ ಬೇಲಿ ಸೇತುವೆಗಳನ್ನು ನಿರ್ಮಿಸಲು ಬಳಸುವಂತೆಯೇ ಇರಲಿದ್ದು, ಮಾನವ-ಆನೆ ಸಂಘರ್ಷದ ಸಮಸ್ಯೆ ಇರುವ ಎನ್ಟಿಆರ್ (ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶ)ನ ವೀರನಹೊಸಹಳ್ಳಿ ವ್ಯಾಪ್ತಿಯಲ್ಲಿ ಮೊದಲು 5 ಕಿ.ಮೀ. ಉಕ್ಕಿನ ಹಗ್ಗಗಳು ರೈಲು ಬ್ಯಾರಿಕೇಡ್ಗಳಿಗಿಂತ ಅಗ್ಗವಾಗಿವೆ. ಇಲಾಖೆ ಅಧಿಕಾರಿಗಳ ಪ್ರಕಾರ, ಒಂದು ಕಿ.ಮೀ ರೈಲು ತಡೆಗೋಡೆಗೆ 1.2- 1.3 ಕೋಟಿ ರೂ. ವೆಚ್ಚವಾಗುತ್ತಿದೆ. ತಮಿಳುನಾಡು ಅಳವಡಿಸಿರುವ ಉಕ್ಕಿನ ಹಗ್ಗಗಳ ಬೆಲೆ ಪ್ರತಿ ಕಿ.ಮೀ.ಗೆ ಕೇವಲ Rs50-55 ಲಕ್ಷ ರೂ ಎಂದು ಹೇಳಲಾಗಿದೆ.
ವರ್ಷಗಳಲ್ಲಿ, ಅರಣ್ಯಾಧಿಕಾರಿಗಳು ಆನೆಗಳನ್ನು ಕಾಡಿನೊಳಗೆ ಇಡಲು ಮೆಣಸಿನಕಾಯಿ-ತಂಬಾಕು ಹಗ್ಗದ ಬೇಲಿಗಳು, ಸೌರ ಬೇಲಿಗಳು, ಮುಳ್ಳುತಂತಿಗಳು, ಕಂದಕಗಳು, ರೈಲು ಬ್ಯಾರಿಕೇಡ್ಗಳು ಮತ್ತು ಜೇನುನೊಣಗಳ ಬೇಲಿಗಳಂತಹ ವಿವಿಧ ರೀತಿಯ ಬ್ಯಾರಿಕೇಡ್ಗಳನ್ನು ಪ್ರಯತ್ನಿಸಿದ್ದಾರೆ. ಆದರೆ ಆನೆಗಳು ಈ ಬ್ಯಾರಿಕೇಡ್ಗಳನ್ನು ದಾಟಲು ಮಾರ್ಗಗಳನ್ನು ಕಂಡುಕೊಂಡಿವೆ. ಆನೆಗಳು ಸೌರ ಬ್ಯಾರಿಕೇಡ್ಗಳನ್ನು ಮರದ ದಿಮ್ಮಿಗಳಿಂದ ಒಡೆಯುವುದು, ರೈಲು ಬ್ಯಾರಿಕೇಡ್ಗಳ ಮೇಲೆ ಏರುವುದು ಮತ್ತು ಮೆಣಸಿನಕಾಯಿ-ತಂಬಾಕು ಬ್ಯಾರಿಕೇಡ್ಗಳ ಮೇಲೆ ನೀರು ಎಸೆದು ತಪ್ಪಿಸಿಕೊಳ್ಳುವುದನ್ನು ನಾವು ಕ್ಯಾಮೆರಾ ಟ್ರ್ಯಾಪ್ಗಳ ಮೂಲಕ ಗಮನಿಸಿದ್ದೇವೆ ಎಂದು ಅರಣ್ಯ ಇಲಾಖೆ ಅಧಿಕಾರಿಯೊಬ್ಬರು ಹೇಳಿದ್ದಾರೆ.