ವಿಕಲಾಂಗ ಸ್ನೇಹಿ ನಿಲ್ದಾಣಗಳಾಗಿ ಬೆಂಗಳೂರು ವಿಭಾಗದ ನಾಲ್ಕು ರೈಲು ನಿಲ್ದಾಣಗಳ ಪರಿವರ್ತನೆಗೆ ಯೋಜನೆ
ವಿವಿಧ ರೀತಿಯ ಅಂಗವೈಕಲ್ಯದಿಂದ ಬಳಲುತ್ತಿರುವ ಪ್ರಯಾಣಿಕರಿಗೆ ಹೆಚ್ಚು ಅಗತ್ಯವಿರುವ ಹೆಚ್ಚುವರಿ ಸೌಕರ್ಯಗಳನ್ನು ಬೆಂಗಳೂರು ವಿಭಾಗದ ನಾಲ್ಕು ರೈಲು ನಿಲ್ದಾಣಗಳಲ್ಲಿ ಪ್ರಾರಂಭಿಸಲು ನಿರ್ಧರಿಸಲಾಗಿದೆ. ನಗರದ ಪ್ರಧಾನ ಕಛೇರಿಯ ಸಮರ್ಥನಂ ಟ್ರಸ್ಟ್ ಫಾರ್ ದಿ ಡಿಸೇಬಲ್ನಿಂದ ಇದಕ್ಕೆ ಪುಷ್ಟಿ ನೀಡಲಾಗಿದೆ.
Published: 15th February 2022 01:22 PM | Last Updated: 15th February 2022 01:28 PM | A+A A-

ಬೈಯಪ್ಪನಹಳ್ಳಿಯ ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್
ಬೆಂಗಳೂರು: ವಿವಿಧ ರೀತಿಯ ಅಂಗವೈಕಲ್ಯದಿಂದ ಬಳಲುತ್ತಿರುವ ಪ್ರಯಾಣಿಕರಿಗೆ ಹೆಚ್ಚು ಅಗತ್ಯವಿರುವ ಹೆಚ್ಚುವರಿ ಸೌಕರ್ಯಗಳನ್ನು ಬೆಂಗಳೂರು ವಿಭಾಗದ ನಾಲ್ಕು ರೈಲು ನಿಲ್ದಾಣಗಳಲ್ಲಿ ಪ್ರಾರಂಭಿಸಲು ನಿರ್ಧರಿಸಲಾಗಿದೆ. ನಗರದ ಪ್ರಧಾನ ಕಛೇರಿಯ ಸಮರ್ಥನಂ ಟ್ರಸ್ಟ್ ಫಾರ್ ದಿ ಡಿಸೇಬಲ್ನಿಂದ ಇದಕ್ಕೆ ಪುಷ್ಟಿ ನೀಡಲಾಗಿದೆ.
ವೈಟ್ಫೀಲ್ಡ್, ಬೆಂಗಳೂರು ಕಂಟೋನ್ಮೆಂಟ್, ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣ ಬೆಂಗಳೂರು ಮತ್ತು ಬೈಯಪ್ಪನಹಳ್ಳಿಯಲ್ಲಿ ಇನ್ನೂ ಪ್ರಾರಂಭವಾಗದ ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ ಈ ಸೌಕರ್ಯಗಳನ್ನು ಹೊಂದಿದ್ದು, ಒಟ್ಟು 50 ಲಕ್ಷ ರೂಪಾಯಿ ವೆಚ್ಚದಲ್ಲಿ ಈ ಸೌಕರ್ಯ ಕಲ್ಪಿಸಲಾಗುತ್ತಿದೆ.
ವಿಕಲಚೇತನರ ಸಮರ್ಥನಂ ಟ್ರಸ್ಟ್ಗೆ ಕಾಮಗಾರಿಗಳನ್ನು ಮುಂದುವರಿಸಲು ನಾವು ತಾತ್ವಿಕ ಅನುಮೋದನೆ ನೀಡಿದ್ದೇವೆ. ಅವರು ಪ್ರಾರಂಭಿಸಿದ್ದಾರೆ. ಟ್ರಸ್ಟ್ ಮತ್ತು ರೈಲ್ವೆ ಇಲಾಕೆ ನಡುವೆ ಒಪ್ಪಂದಕ್ಕೆ ಶೀಘ್ರದಲ್ಲೇ ಸಹಿ ಹಾಕಲಾಗುವುದು ಎಂದು ನೈಋತ್ಯ ರೈಲ್ವೆ ವಲಯದ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಇ ವಿಜಯಾ ತಿಳಿಸಿದ್ದಾರೆ.
ಏನೇನು ಸೌಕರ್ಯ: ಬಹು ಟಿವಿ ಡಿಸ್ಪ್ಲೇ ಪರದೆಗಳು (32 ಇಂಚುಗಳು) ಪ್ರತಿ ನಿಲ್ದಾಣಗಳಲ್ಲಿ ಅಳವಡಿಸುವುದು, ಅದು ಮಾತು ಮತ್ತು ಶ್ರವಣದೋಷವುಳ್ಳ ಪ್ರಯಾಣಿಕರಿಗೆ ಸಂಕೇತ ಭಾಷೆಯಲ್ಲಿ ವೀಡಿಯೊಗಳನ್ನು ಬೀಮ್ ಮಾಡುತ್ತದೆ. ಅವರನ್ನು ಹೆಚ್ಚು ಸ್ವತಂತ್ರ ಪ್ರಯಾಣಿಕರನ್ನಾಗಿ ಮಾಡುವ ಗುರಿಯನ್ನು ಹೊಂದಲಾಗಿದೆ. ಈ ವೀಡಿಯೊಗಳು, ಸ್ಲೈಡ್ಗಳು ಕಾಯ್ದಿರಿಸದ ಮತ್ತು ಕಾಯ್ದಿರಿಸಲಾದ ಟಿಕೆಟ್ ಕೌಂಟರ್ಗಳು, ಪಾರ್ಕಿಂಗ್, ಪ್ರವೇಶ ಮತ್ತು ನಿರ್ಗಮನ ಗೇಟ್ಗಳು, ಫುಟ್ ಓವರ್ ಬ್ರಿಡ್ಜ್, ಎಸ್ಕಲೇಟರ್ಗಳು, ಶೌಚಾಲಯಗಳು, ಕಾಯುವ ಕೊಠಡಿಗಳು ಮುಂತಾದ ಪ್ರಮುಖ ಸೌಲಭ್ಯಗಳ ಸ್ಥಳವನ್ನು ನಿರ್ಮಿಸಲಾಗುತ್ತದೆ. ಸಂಗೊಳ್ಳಿ ರಾಯಣ್ಣ ಸ್ಟೇಷನ್ ನಲ್ಲಿ ನಾಲ್ಕು ಟಿವಿ ಡಿಸ್ಪ್ಲೇ ಪರದೆಗಳನ್ನು ಹೊಂದಿದ್ದರೆ ಇತರ ನಿಲ್ದಾಣಗಳು ತಲಾ ಎರಡನ್ನು ಹೊಂದಿರುತ್ತವೆ ಎಂದು ಅವರು ಹೇಳಿದರು.
ಭಾಗಶಃ ದೃಷ್ಟಿಹೀನತೆ ಹೊಂದಿರುವವರಿಗೆ ಸಹಾಯ ಮಾಡಲು, ರೈಲು ನಿಲ್ದಾಣದ ಪ್ರಚಲಿತ ಮಾರ್ಗ ನಕ್ಷೆಯು ರೇಡಿಯಂ ಪ್ರತಿಫಲಕಗಳನ್ನು ಹೊಂದಿರುತ್ತದೆ. ಪ್ರತಿಯೊಂದು ಪ್ಲಾಟ್ಫಾರ್ಮ್ ಮತ್ತು ಮೆಟ್ಟಿಲುಗಳಲ್ಲಿ ಹಳದಿ ಮತ್ತು ಬಿಳಿ ಬಣ್ಣಗಳಲ್ಲಿರುತ್ತವೆ. ಗಾಜಿನ ಬಾಗಿಲುಗಳು ಮತ್ತು ಕಾರಿಡಾರ್ಗಳಿಗೆ ಬಣ್ಣದ ಪಟ್ಟಿಗಳನ್ನು ಅಳವಡಿಸಲಾಗುತ್ತದೆ ಎಂದು ವಿಜಯಾ ಹೇಳಿದರು.
ಬುಕಿಂಗ್ ಕಚೇರಿಗಳಲ್ಲಿ ರೇಲಿಂಗ್ಗಳೊಂದಿಗೆ ರ್ಯಾಂಪ್, ಬುಕಿಂಗ್ ಆಫೀಸ್ ಕೌಂಟರ್ನಲ್ಲಿ ದಿವ್ಯಾಂಗ್ ಪ್ಯಾಸೆಂಜರ್ ಕೌಂಟರ್ಗಳ ಎತ್ತರ ಮಾರ್ಪಾಡು, ಸಾಮಾನ್ಯ ಕಾಯುವ ಕೋಣೆಯೊಳಗಿನ ಶೌಚಾಲಯಗಳ ಮಾರ್ಪಾಡು ಒದಗಿಸುವ ಸೌಕರ್ಯಗಳಲ್ಲಿ ಸೇರಿವೆ.
ಸಮರ್ಥನಂ ಟ್ರಸ್ಟ್ ಫಾರ್ ಡಿಸೇಬಲ್ಡ್ನ ಸಂಸ್ಥಾಪಕ ಮತ್ತು ಮ್ಯಾನೇಜಿಂಗ್ ಟ್ರಸ್ಟಿ ಜಿ ಕೆ ಮಹಾಂತೇಶ್, ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆಗೆ ಮಾತನಾಡಿ, ವಿಕಲಚೇತನರಿಗೆ ವಿದೇಶದಲ್ಲಿರುವ ರೈಲ್ವೆ ನಿಲ್ದಾಣಗಳಲ್ಲಿ ಒದಗಿಸಲಾದ ಅದ್ಭುತ ಸೌಲಭ್ಯಗಳನ್ನು ನಾವು ಗಮನಿಸಿದ್ದೇವೆ. ಭಾರತದಲ್ಲಿಯೂ ಅದೇ ರೀತಿ ಮಾಡಲಾಗುತ್ತಿದೆ. ಭಾರತೀಯ ರೈಲ್ವೇ ಅವರಿಗೆ ನೀಡುತ್ತಿರುವ ಹೆಚ್ಚಿನ ಸಬ್ಸಿಡಿ ದರದ ಕಾರಣದಿಂದ ಅನೇಕ ಅಂಗವಿಕಲ ವ್ಯಕ್ತಿಗಳು ರೈಲು ಪ್ರಯಾಣವನ್ನು ಆರಿಸಿಕೊಳ್ಳುವುದರಿಂದ ಈ ಸೌಲಭ್ಯಗಳು ಸಾವಿರಾರು ಜನರಿಗೆ ಪ್ರಯೋಜನವನ್ನು ನೀಡುತ್ತದೆ ಎಂದರು.