ವೈದ್ಯರ ಟ್ಟಿಟ್ಟರ್ ಖಾತೆಯಲ್ಲಿ ಹಿಜಾಬ್ ವಿರೋಧಿ ಪೋಸ್ಟ್: ನನ್ನ ಇಮೇಜ್ ಹಾಳು ಮಾಡುವ ಯತ್ನ; ಪೊಲೀಸರಿಗೆ ಉಜಿರೆ ಡಾಕ್ಟರ್ ದೂರು!
ದಕ್ಷಿಣ ಕನ್ನಡ ಜಿಲ್ಲೆಯ ಉಜಿರೆಯ ವೈದ್ಯರೊಬ್ಬರು ತಮ್ಮ ಟ್ವಿಟರ್ ಖಾತೆಯನ್ನು ದುಷ್ಕರ್ಮಿಗಳು ಹ್ಯಾಕ್ ಮಾಡಿ ಅದರಲ್ಲಿ ಹಿಜಾಬ್ ವಿರೋಧಿ ಪೋಸ್ಟ್ ಅನ್ನು ಅಪ್ಲೋಡ್ ಮಾಡಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.
Published: 17th February 2022 12:23 PM | Last Updated: 17th February 2022 01:44 PM | A+A A-

ಸಾಂದರ್ಭಿಕ ಚಿತ್ರ
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಉಜಿರೆಯ ವೈದ್ಯರೊಬ್ಬರು ತಮ್ಮ ಟ್ವಿಟರ್ ಖಾತೆಯನ್ನು ದುಷ್ಕರ್ಮಿಗಳು ಹ್ಯಾಕ್ ಮಾಡಿ ಅದರಲ್ಲಿ ಹಿಜಾಬ್ ವಿರೋಧಿ ಪೋಸ್ಟ್ ಅನ್ನು ಅಪ್ಲೋಡ್ ಮಾಡಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.
ಉಜಿರೆಯ ಮಕ್ಕಳ ತಜ್ಞ ಡಾ.ಶಾಂತನು ಆರ್ ಪ್ರಭು ಅವರು ತಮ್ಮ ಖಾತೆಯಲ್ಲಿ ಹಿಜಾಬ್ ವಿರುದ್ಧದ ಟ್ವೀಟ್ ಕಾಣಿಸಿಕೊಂಡಿದ್ದು, ಇದು ತಮ್ಮ ಇಮೇಜ್ ಹಾಳು ಮಾಡುವ ಉದ್ದೇಶದಿಂದ ಬಂದಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಮಹಿಳೆಯರು ಮತ್ತು ಹುಡುಗಿಯರು ಹಿಜಾಬ್ ಧರಿಸುವುದನ್ನು ಅವರು ಬಯಸುವುದಿಲ್ಲ ಎಂದು ಟ್ವೀಟ್ ನಲ್ಲಿ ಬರೆಯಲಾಗಿದೆ . ಇದು ತಾಲಿಬಾನ್ ರಾಜ್ಯ, ಸೌದಿ ಅರೇಬಿಯಾ ಅಥವಾ ಮದರಸಾ ಅಲ್ಲ ಮತ್ತು ಹಿಜಾಬ್ ಅನಗತ್ಯ. ನೀವು ಹಿಜಾಬ್ ಧರಿಸಬೇಕಾದರೆ ಮದರಸಾಕ್ಕೆ ಹೋಗಿ” ಎಂದು ಬರೆಯಲಾಗಿದೆ.
ವೈದ್ಯರು ಮಗುವನ್ನು ಕೈಯಲ್ಲಿ ಹಿಡಿದಿರುವ ಸ್ಕ್ರೀನ್ಶಾಟ್ ಅನ್ನು ಟ್ವೀಟ್ನೊಂದಿಗೆ ಅಪ್ಲೋಡ್ ಮಾಡಲಾಗಿದೆ ಎಂದು ಡಾ.ಶಾಂತನು ಆರ್ ಪ್ರಭು ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: ಹಿಜಾಬ್ ವಿವಾದ: ಇಬ್ಬರು ಮಾಜಿ ನ್ಯಾಯಾಧೀಶರು ಸೇರಿದಂತೆ 700ಕ್ಕೂ ಹೆಚ್ಚು ಮಂದಿಯಿಂದ ಬಹಿರಂಗ ಪತ್ರ
ಈ ಪೋಸ್ಟ್ ಅನ್ನು ಬಳಸಿಕೊಂಡು ಕೆಲವರು ಅವರು ಕೆಲಸ ಮಾಡುವ ಆಸ್ಪತ್ರೆಯ ವಿರುದ್ಧ ದುರುದ್ದೇಶಪೂರಿತ ಅಪಪ್ರಚಾರ ಮಾಡಲು ಪ್ರಾರಂಭಿಸಿದ್ದಾರೆ ಎಂದು ವೈದ್ಯರು ಆರೋಪಿಸಿದ್ದಾರೆ.
“ಇದು ನನ್ನ ಇಮೇಜ್ ಹಾಳು ಮಾಡುವ ಪ್ರಯತ್ನ. ಅಲ್ಪಸಂಖ್ಯಾತರು ನಡೆಸುತ್ತಿರುವ ವೈದ್ಯಕೀಯ ಕಾಲೇಜಿನಲ್ಲಿ ಓದಿರುವ ನನಗೆ ಹಿಜಾಬ್ ಎಂದರೇನು ಎಂಬುದು ಗೊತ್ತಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.