ಹಿಜಾಬ್ ವಿವಾದ: ಇಬ್ಬರು ಮಾಜಿ ನ್ಯಾಯಾಧೀಶರು ಸೇರಿದಂತೆ 700ಕ್ಕೂ ಹೆಚ್ಚು ಮಂದಿಯಿಂದ ಬಹಿರಂಗ ಪತ್ರ
ಹಿಜಾಬ್ ವಿವಾದಕ್ಕೆ ಸಂಬಂಧಿಸಿದಂತೆ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಡಾ ಸಿ ಎಸ್ ದ್ವಾರಕನಾಥ್, ಹೈಕೋರ್ಟ್ ನ ಇಬ್ಬರು ಮಾಜಿ ನ್ಯಾಯಾಧೀಶರು ಸೇರಿದಂತೆ 500 ವಕೀಲರು ಸೇರಿ 700ಕ್ಕೂ ಅಧಿಕ ಮಂದಿ ಸಂಬಂಧಪಟ್ಟವರಿಗೆ ಪತ್ರ ಬರೆದಿದ್ದಾರೆ.
Published: 17th February 2022 08:45 AM | Last Updated: 17th February 2022 01:35 PM | A+A A-

ಸಾಂದರ್ಭಿಕ ಚಿತ್ರ
ಬೆಂಗಳೂರು: ಹಿಜಾಬ್ ವಿವಾದಕ್ಕೆ ಸಂಬಂಧಿಸಿದಂತೆ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಡಾ ಸಿ ಎಸ್ ದ್ವಾರಕನಾಥ್, ಹೈಕೋರ್ಟ್ ನ ಇಬ್ಬರು ಮಾಜಿ ನ್ಯಾಯಾಧೀಶರು ಸೇರಿದಂತೆ 500 ವಕೀಲರು ಸೇರಿ 700ಕ್ಕೂ ಅಧಿಕ ಮಂದಿ ಸಂಬಂಧಪಟ್ಟವರಿಗೆ ಪತ್ರ ಬರೆದಿದ್ದಾರೆ.
ಇವರು ಬರೆದಿರುವ ಪತ್ರದಲ್ಲಿ ಕರ್ನಾಟಕ ಹೈಕೋರ್ಟ್ ನ ಮಧ್ಯಂತರ ಆದೇಶದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದು ಮುಸ್ಲಿಂ ಮಹಿಳೆಯರು ಮತ್ತು ಹುಡುಗಿಯರಿಗೆ ಹಿಜಾಬ್ ಧರಿಸಲು ಅವಕಾಶ ನೀಡದಿರುವುದು ಅವರನ್ನು ಸಾರ್ವಜನಿಕವಾಗಿ ಅವಮಾನ ಮಾಡಿದಂತೆ ಎಂದು ಆಕ್ಷೇಪಿಸಿ ಸಹಿ ಹಾಕಿದ್ದಾರೆ.
ಇದನ್ನೂ ಓದಿ: ಹಿಜಾಬ್, ರಾಷ್ಟ್ರಧ್ವಜ ಕುರಿತು ಗದ್ದಲಕ್ಕೆ ಕಲಾಪ ಬಲಿ; ರೈತರ ಸಮಸ್ಯೆಗಳ ಪ್ರಸ್ತಾಪ ಯಾವಾಗ?: ರಾಜಕೀಯ ನಾಯಕರ ಪ್ರಶ್ನೆ
ಶಾಲೆ-ಕಾಲೇಜುಗಳು ಪುನಾರಂಭವಾಗಿದ್ದು, ಶಿಕ್ಷಣ ಸಂಸ್ಥೆಗಳ ಆವರಣದಲ್ಲಿ ಶಿಕ್ಷಕರು ಮತ್ತು ಆಡಳಿತ ಮಂಡಳಿ ಮುಸ್ಲಿಂ ವಿದ್ಯಾರ್ಥಿನಿಯರನ್ನು ಬುರ್ಖಾ, ಹಿಜಾಬ್ ತೆಗೆಯುವಂತೆ ಒತ್ತಾಯಿಸುತ್ತಿರುವ ವಿಡಿಯೊ ಮಾಧ್ಯಮಗಳಲ್ಲಿ, ಸೋಷಿಯಲ್ ಮೀಡಿಯಾಗಳಲ್ಲಿ ಯಥೇಚ್ಛವಾಗಿ ಹರಿದಾಡುತ್ತಿದೆ.
ಹಿಜಾಬ್ ನಿಷೇಧಕ್ಕೆ ಅವಕಾಶವಿಲ್ಲ: ಮುಖ್ಯ ನ್ಯಾಯಮೂರ್ತಿ ರಿತು ರಾಜ್ ಅವಸ್ತಿ ಮತ್ತು ನ್ಯಾಯಮೂರ್ತಿಗಳಾದ ಕೃಷ್ಣ ಎಸ್ ದೀಕ್ಷಿತ್ ಮತ್ತು ಜೆಎಂ ಖಾಜಿ ಅವರ ಪೂರ್ಣ ಪೀಠದ ಮುಂದೆ ವಾದ ಮಂಡಿಸಿದ ಕುಮಾರ್, ಹಿಜಾಬ್ ಅನ್ನು ನಿಷೇಧಿಸಲು ಕಾನೂನಿನಲ್ಲಿ ಯಾವುದೇ ಅವಕಾಶವಿಲ್ಲ. ಬಳೆ, ಬಿಂದಿ, ಶಿಲುಬೆ, ಪೇಟ ಕೂಡ ಧಾರ್ಮಿಕ ಸಂಕೇತಗಳಾಗಿವೆ ಎಂದು ವಾದಿಸಿದರು.
ಇದನ್ನೂ ಓದಿ: ಸೇನೆಯಲ್ಲಿ ಟರ್ಬನ್ಗೆ ಅವಕಾಶವಿದೆ; ಶಾಲೆಗಳಲ್ಲಿ ಹಿಜಾಬ್ ಏಕೆ ಬೇಡ: ಹೈಕೋರ್ಟ್ನಲ್ಲಿ ವಕೀಲರ ವಾದ
“ಇವುಗಳನ್ನು ಧರಿಸುವುದರಿಂದ ಏಕರೂಪತೆಯನ್ನು ಮುರಿಯುವುದಿಲ್ಲವೇ? ಹಿಜಾಬ್ ಧರಿಸಿದ್ದಕ್ಕಾಗಿ ಈ ಬಡ ಮುಸ್ಲಿಂ ಹುಡುಗಿಯರನ್ನು ಮಾತ್ರ ಏಕೆ ಗುರಿಯಾಗಿಸಬೇಕು ಎಂದು ನ್ಯಾಯಪೀಠ ಮುಂದೆ ವಾದಿಸಿದರು.
ಕರ್ನಾಟಕಕ್ಕೆ ಪ್ರತ್ಯೇಕ ಪೀಠ ಬೇಕಾಗಬಹುದು: ಸಿಜೆಐ
ಕರ್ನಾಟಕದಿಂದ ಸುಪ್ರೀಂ ಕೋರ್ಟ್ಗೆ ಹೆಚ್ಚಿನ ಸಂಖ್ಯೆಯ ಪ್ರಕರಣಗಳು ಬರುತ್ತಿದ್ದು, ರಾಜ್ಯದ ವಿಷಯಗಳಿಗೆ ವಿಶೇಷ ಪೀಠವನ್ನು ರಚಿಸುವ ಅಗತ್ಯವಿದೆ ಎಂದು ಸಿಜೆಐ ಎನ್ವಿ ರಮಣ ಬುಧವಾರ ವ್ಯಂಗ್ಯದಿಂದ ಹೇಳಿದ್ದಾರೆ. ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ರಾಜ್ಯದಲ್ಲಿ ಗಣಿಗಾರಿಕೆಯಿಂದ ಹಾನಿಗೊಳಗಾದವರಿಗೆ ಪರಿಹಾರಕ್ಕೆ ಸಂಬಂಧಿಸಿದ ಪ್ರಕರಣವನ್ನು ತುರ್ತು ಪಟ್ಟಿಗೆ ಕೋರಿದ ನಂತರ ಮುಖ್ಯ ನ್ಯಾಯಮೂರ್ತಿಗಳು ಹೀಗೆ ಹೇಳಿದ್ದಾರೆ.
ಗಣಿಗಾರಿಕೆ ಸಂಬಂಧಪಟ್ಟಂತೆ ವಿಚಾರಣೆಗೆ ಪಟ್ಟಿ ಮಾಡಲಾಗುತ್ತಿದ್ದು, ಬಹುಶಃ ನಾವು ಕರ್ನಾಟಕದ ವಿಷಯಗಳಿಗೆ ಮಾತ್ರ ಪೀಠವನ್ನು ರಚಿಸಬೇಕಾಗಬಹುದು ಎಂದು ಸಿಜೆಐ ಪ್ರತಿಕ್ರಿಯಿಸಿದ್ದಾರೆ.