7 ವರ್ಷದ ಹಿಂದಿನ ಕೊಲೆ ಪ್ರಕರಣ ಬೇಧಿಸಿದ ಕಾಮಾಕ್ಷಿಪಾಳ್ಯ ಪೊಲೀಸರು: ತಲೆ ಮರೆಸಿಕೊಂಡಿದ್ದ ದಂಪತಿ ಬಂಧನ
ಸಾಲ ಕೊಟ್ಟ ಬಳಿಕ ಪತ್ನಿಯನ್ನು ಲೈಂಗಿಕವಾಗಿ ಬಳಸಿಕೊಳ್ಳಲು ಮುಂದಾಗಿದ್ದ ಸಂಬಂಧಿಯನ್ನು ಹತ್ಯೆಗೈದು ತಲೆಮರೆಸಿಕೊಂಡಿದ್ದ ದಂಪತಿ ಏಳು ವರ್ಷದ ಬಳಿಕ ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರ ಬಲೆಗೆ ಬಿದ್ದಿದ್ದಾರೆ.
Published: 18th February 2022 10:33 AM | Last Updated: 18th February 2022 01:22 PM | A+A A-

ಸಾಂದರ್ಭಿಕ ಚಿತ್ರ
ಬೆಂಗಳೂರು: ಸಾಲ ಕೊಟ್ಟ ಬಳಿಕ ಪತ್ನಿಯನ್ನು ಲೈಂಗಿಕವಾಗಿ ಬಳಸಿಕೊಳ್ಳಲು ಮುಂದಾಗಿದ್ದ ಸಂಬಂಧಿಯನ್ನು ಹತ್ಯೆಗೈದು ತಲೆಮರೆಸಿಕೊಂಡಿದ್ದ ದಂಪತಿ ಏಳು ವರ್ಷದ ಬಳಿಕ ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಆಂಧ್ರಪ್ರದೇಶದ ಶೇಖ್ ಮೊಹಮದ್ ಗೌಸ್ ಹಾಗೂ ಕೌಸರ್ ಅಲಿಯಾಸ್ ಹೀನಾ ಬಂಧಿತರಾಗಿದ್ದಾರೆ. ಕಾಮಾಕ್ಷಿಪಾಳ್ಯದ ವಜೀರ್ ಪಾಷಾ ಹತ್ಯೆಯಾದ ಸಂಬಂಧಿ. ತಮಗೆ ಕೊಟ್ಟಿದ್ದ 1.5 ಲಕ್ಷ ಸಾಲಕ್ಕೆ ಕೌಸರ್ ಜತೆ ವಜೀರ್ ಅಕ್ರಮ ಸಂಬಂಧ ಹೊಂದಿದ್ದ. ಆಗ ಆತನನ್ನು ಮನೆಗೆ ಕರೆಸಿಕೊಂಡು ದಂಪತಿ ಕೊಂದು ಬಳಿಕ ಆಂಧ್ರಪ್ರದೇಶದಲ್ಲಿ ತಲೆಮರೆಸಿಕೊಂಡಿದ್ದರು.
ಶೇಖ್ ಮೊಹಮದ್ ಗೌಸ್ ಹಾಗೂ ಕೌಸರ್ ಮದುವೆ ಬಳಿಕ ನಗರಕ್ಕೆ ಬಂದು ಹೆಗ್ಗನಹಳ್ಳಿ ಹತ್ತಿರದ ಗಜಾನನ ನಗರದಲ್ಲಿ ನೆಲೆಸಿದ್ದರು. ಮನೆಯಲ್ಲಿ ಹೊಲಿಗೆ ಯಂತ್ರ ಇಟ್ಟುಕೊಂಡು ಗಾರ್ಮೆಂಟ್ಸ್ಗಳಿಗೆ ಬಿಡಿ ಕೆಲಸಗಳನ್ನು ದಂಪತಿ ಮಾಡಿಕೊಡುತ್ತಿದ್ದರು. ವ್ಯವಹಾರದಲ್ಲಿ ನಷ್ಟ ಉಂಟಾದ ಕಾರಣ ತನ್ನ ಸಂಬಂಧಿ ವಜೀರ್ ಪಾಷಾ ಬಳಿ 1.50 ಲಕ್ಷ ಹಣ ಸಾಲ ಪಡೆದಿದ್ದರು.
ಸಾಲ ತೀರಿಸಲು ನೆರವಾದ ವಜೀರ್ ಗೆ ಗೌಸ್ ಪತ್ನಿ ಕೌಸರ್ ಜೊತೆ ಲೈಂಗಿಕ ಸಂಬಂಧ ಬೆಳೆಸಲು ಆಸಕ್ತಿ ಉಂಟಾಯಿತು, ಇದನ್ನು ತಗೌಸ್ ವಜೀರ್ ಪಾಷಾಗೆ ಎಚ್ಚರಿಕೆ ನೀಡಿದ್ದನು, ಇದಾದ ನಂತರ ಕೊಟ್ಟ ಸಾಲವನ್ನು ವಾಪಸ್ ನೀಡದಿದ್ದರೇ ಪೊಲೀಸ್ ಕೇಸ್ ದಾಖಲಿಸುವುದಾಗಿ ದಂಪತಿಗೆ ಬೆದರಿಕೆ ಹಾಕಿದ್ದ.
ಅವಮಾನಕ್ಕೊಳಗಾದ ದಂಪತಿಗಳು ಪಾಷಾನನ್ನು ಕೊಲ್ಲಲು ನಿರ್ಧರಿಸಿದರು, ಅವನನ್ನು ತಮ್ಮ ಮನೆಗೆ ಕರೆದು ಸಹಾಯ ಮಾಡುವುದಾಗಿ ತಿಳಿಸಿದರು. ಆತ ಮನೆ ತಲುಪಿದಾಗ ಗೌಸ್ ಮನೆಯಲ್ಲಿ ಅಡಗಿಕೊಂಡಿದ್ದ, ಪಾಷಾನನ್ನು ಕತ್ತು ಹಿಸುಕಿ ಕೊಂದು. ದೇಹವನ್ನು ಪ್ಲಾಸ್ಟಿಕ್ ಚೀಲದಲ್ಲಿ ತುಂಬಿ, ಬಟ್ಟೆಯ ಚೂರುಗಳಿಂದ ಮುಚ್ಚಿದ ಬಟ್ಟೆಯ ಬಂಡಲ್ನಂತೆ ಕಟ್ಟಿದ್ದರು. ನಂತರ ಮೃತದೇಹವನ್ನು ಚರಂಡಿಯಲ್ಲಿ ಎಸೆದಿದ್ದರು.
ಇತ್ತ ವಜೀರ್ ನಿಗೂಢ ನಾಪತ್ತೆ ಬಗ್ಗೆ ಆತನ ಪತ್ನಿ ನೀಡಿದ ದೂರಿನ ಮೇರೆಗೆ ತನಿಖೆ ಕೈಗೆತ್ತಿಕೊಂಡ ಕಾಮಾಕ್ಷಿಪಾಳ್ಯ ಪೊಲೀಸರಿಗೆ ಆರಂಭದಲ್ಲಿ ಹತ್ಯೆ ಕುರಿತು ಸುಳಿವು ಸಿಗಲಿಲ್ಲ. ತನ್ನ ಪತಿ ದಂಪತಿ ಮನೆಗೆ ಹೋಗಿದ್ದಾಗಿ ವಜೀರ್ ಪತ್ನಿ ಆಯೇಶಾ ಪೊಲೀಸರಿಗೆ ಮಾಹಿತಿ ನೀಡಿದ್ದಳು.
ಎಲ್ಲಾ ರಾಜ್ಯಗಳಲ್ಲಿಯೂ ಪೊಲೀಸರ ತಂಡ ದಂಪತಿಗಾಗಿ ಶೋಧ ನಡೆಸಿ ವಿಫಲವಾಗಿತ್ತು, ಫೆಬ್ರವರಿ 11 ರಂದು ಕೌಸರ್ ತನ್ನ ತಾತನ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ದಂಪತಿಗಳು ಸುಂಕದಕಟ್ಟೆಗೆ ಬರುತ್ತಿದ್ದಾರೆ ಎಂದು ತಿಳಿದ ಆಯೇಷಾ ಪೊಲೀಸರಿಗೆ ಮಾಹಿತಿ ನೀಡಿದ್ದಳು. ದಂಪತಿಯನ್ನು ವಿಚಾರಣೆಗೆ ಕರೆದೊಯ್ದರು ಮತ್ತು ಅವರು ಅಪರಾಧವನ್ನು ಒಪ್ಪಿಕೊಂಡರು ಮತ್ತು ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು.