
ಸಂಗ್ರಹ ಚಿತ್ರ
ಬೆಂಗಳೂರು: ಕರ್ನಾಟಕ ಆಡಳಿತ ಸೇವೆ (ಕೆಎಎಸ್) ಅಂತಿಮ ಸಂದರ್ಶನದಲ್ಲಿ ವೈವಾ ಅಂಕಗಳನ್ನು 50 ರಿಂದ 25ಕ್ಕೆ ಇಳಿಸಲು ರಾಜ್ಯ ಸಚಿವ ಸಂಪುಟ ಒಪ್ಪಿಗೆ ನೀಡಿದೆ.
ಕರ್ನಾಟಕ ಲೋಕಸೇನಾ ಆಯೋಗದ ಗೆಜೆಟೆಡ್ ಪ್ರೊಬೆಷನರಿ (ಗ್ರೂಪ್ ಎ ಮತ್ತು ಬಿ) ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಮುಖ್ಯ ಪರೀಕ್ಷೆಯ ಸಂದರ್ಶನದ ವೇಳೆ ನಡೆಯುವ ಸ್ವಜನ ಪಕ್ಷಪಾತ ಮತ್ತು ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವ ಉದ್ದೇಶದಿಂದ ಸಂದರ್ಶನದಲ್ಲಿ ನೀಡುವ ಅಂಕಗಳನ್ನು ಕಡಿತಗೊಳಿಸುವ ಮಹತ್ವದ ನಿರ್ಧಾರವನ್ನು ಸರ್ಕಾರ ಕೈಗೊಂಡಿದೆ.
ಇದನ್ನೂ ಓದಿ: 2011ರ 362 ಗೆಜೆಟೆಡ್ ಅಧಿಕಾರಿಗಳ ರಕ್ಷಣೆಗೆ ವಿಧಾನಸಭೆಯಲ್ಲಿ ವಿಧೇಯಕ ಮಂಡನೆ
2020ರಲ್ಲಿ ಸರ್ಕಾರವು ಮುಖ್ಯ ಪರೀಕ್ಷೆಯಲ್ಲಿ ಲಿಖಿತ ಅಂಕಗಳು 1750 ಇದ್ದುದನ್ನು 1250ಕ್ಕೆ ಇಳಿಸಿತ್ತು. ಅಂತೆಯೇ ಸಂದರ್ಶನಕ್ಕೆ ನಿಗದಿ ಮಾಡಿದ್ದ 200 ಅಂಕಗಳನ್ನು 50ಕ್ಕೆ ಇಳಿಕೆ ಮಾಡಲಾಗಿತ್ತು. ಇದೀಗ 50 ರಿಂದ 25ಕ್ಕೆ ಇಳಿಸುವ ನಿರ್ಧಾರ ಕೈಗೊಂಡಿದೆ.
ಏತನ್ಮಧ್ಯೆ, ಕೆಪಿಎಸ್ಸಿಯಲ್ಲಿ ತೆರವಾಗಿರುವ ಸ್ಥಾನಕ್ಕೆ ಸದಸ್ಯರನ್ನು ನಾಮನಿರ್ದೇಶನ ಮಾಡಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಸಂಪುಟ ಅಧಿಕಾರ ನೀಡಿದೆ.