ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ನಿರ್ದೇಶಕರ ಹುದ್ದೆ ಭರ್ತಿ ಮಾಡಲು ಒತ್ತಾಯ
ಅರಣ್ಯ ಇಲಾಖೆ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು (ಸಿಸಿಎಫ್), ಉಪ ಅರಣ್ಯ ಸಂರಕ್ಷಣಾಧಿಕಾರಿಗಳು (ಡಿಸಿಎಫ್) ಮತ್ತು ಅರಣ್ಯ ಸಂರಕ್ಷಣಾಧಿಕಾರಿಗಳು (ಸಿಎಫ್) ಸೇರಿದಂತೆ ಹಲವರು ಹುದ್ದೆ ಭರ್ತಿ ಮಾಡಿಲ್ಲ.
Published: 19th February 2022 01:53 PM | Last Updated: 19th February 2022 01:58 PM | A+A A-

ಸಾಂದರ್ಭಿಕ ಚಿತ್ರ
ಬೆಂಗಳೂರು: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ನಿರ್ದೇಶಕರ ಹುದ್ದೆಯು ಬಹಳ ದಿನಗಳಿಂದ ಖಾಲಿಯಾಗಿಯೇ ಉಳಿದಿದೆ.
ಹೀಗಾಗಿ ಈ ಹುದ್ದೆಯನ್ನು ಶೀಘ್ರವೇ ಭರ್ತಿ ಮಾಡಬೇಕೆಂದು ಸಂರಕ್ಷಣವಾದಿಗಳು ಒತ್ತಾಯಿಸಿದ್ದಾರೆ. ಆದರೆ ಅರಣ್ಯ ಇಲಾಖೆ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು (ಸಿಸಿಎಫ್), ಉಪ ಅರಣ್ಯ ಸಂರಕ್ಷಣಾಧಿಕಾರಿಗಳು (ಡಿಸಿಎಫ್) ಮತ್ತು ಅರಣ್ಯ ಸಂರಕ್ಷಣಾಧಿಕಾರಿಗಳು (ಸಿಎಫ್) ಸೇರಿದಂತೆ ಹಲವರು ಹುದ್ದೆ ಭರ್ತಿ ಮಾಡಿಲ್ಲ.
ಪರಿಸ್ಥಿತಿ ಎಷ್ಟರಮಟ್ಟಿಗಿದೆ ಎಂದರೆ ಹಲವು ಅಧಿಕಾರಿಗಳು ಮೂರು- ಮೂರು ಹುದ್ದೆಗಳನ್ನು ನಿಭಾಯಿಸುತ್ತಿದ್ದಾರೆ. ಕೆಲವು ಅಧಿಕಾರಿಗಳನ್ನು ಐಎಫ್ಎಸ್ ಅಲ್ಲದ ಹುದ್ದೆಗಳಿಗೆ ನಿಯೋಜಿಸಿರುವುದರಿಂದ ಕೊರತೆ ಉಂಟಾಗಿದೆ ಎಂ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
12 ವರ್ಷ ಸೇವೆ ಸಲ್ಲಿಸಿರುವ ರಾಜ್ಯ ಅರಣ್ಯ ಇಲಾಖೆ ಅಧಿಕಾರಿಗಳನ್ನು ಐಎಫ್ಎಸ್ ಕೇಡರ್ಗೆ ಮೇಲ್ದರ್ಜೆಗೇರಿಸುವ ದೀರ್ಘಾವಧಿಯ ಪ್ರಸ್ತಾವನೆಗೆ ಸರ್ಕಾರಅನುಮತಿಸಿದರೇ ಖಾಲಿ ಹುದ್ದೆಗಳನ್ನು ಭರ್ತಿ ಮಾಡಬಹುದು. ಹಲವು ಹುದ್ದೆಗಳನ್ನು ನಿರ್ವಹಿಸುತ್ತಿರುವವರ ಮೇಲಿನ ಹೊರೆ ಕಡಿಮೆಯಾಗಲಿದೆ ಎಂದು ಹೇಳಿದ್ದಾರೆ. 25 ಅಧಿಕಾರಿಗಳು ಮೇಲ್ದರ್ಜೆಗೆ ಅರ್ಹರಾಗಿದ್ದಾರೆ, ಆದರೆ ಕಡತ ರಾಜ್ಯ ಸರ್ಕಾರದ ಮುಂದೆ ಬಾಕಿ ಇದೆ.
ಇದನ್ನೂ ಓದಿ: ನಂದಿ ಗಿರಿಧಾಮದಲ್ಲಿ ರೋಪ್-ವೇ ನಿರ್ಮಾಣಕ್ಕೆ ರಾಜ್ಯ ಸರ್ಕಾರ ಆಡಳಿತಾತ್ಮಕ ಅನುಮೋದನೆ
ಮಡಿಕೇರಿ, ಮೈಸೂರು, ಶಿವಮೊಗ್ಗ ಮತ್ತು ಚಿಕ್ಕಮಗಳೂರಿನ ಸಿಸಿಎಫ್ಗಳ ಪ್ರಧಾನ ಹುದ್ದೆಗಳು ಬಹಳ ಸಮಯದಿಂದ ಖಾಲಿ ಇವೆ. ಅರಣ್ಯ ಸಂರಕ್ಷಣಾಧಿಕಾರಿಗಳು ಮತ್ತು ನಿರ್ದೇಶಕರ 17 ಹುದ್ದೆಗಳಲ್ಲಿ ಆರು ಹುದ್ದೆಗಳು ಭರ್ತಿಯಾಗದೇ ಹಾಗೆಯೇ ಉಳಿದಿವೆ. . ಕೆಲವು ಸ್ಥಳಗಳಲ್ಲಿ, ಉದ್ಯಾನವನಗಳು ಮತ್ತು ಅಭಯಾರಣ್ಯಗಳ ನಿರ್ದೇಶಕರ ಹುದ್ದೆಯನ್ನು ಅರಣ್ಯ ಸಂರಕ್ಷಣಾಧಿಕಾರಿಯಾಗಿ ಮೇಲ್ದರ್ಜೆಗೆ ಏರಿಸಬಹುದು ಮತ್ತು ಅದನ್ನು ಮಾಡಲಾಗುತ್ತಿದೆ.
ಜಾರ್ಖಂಡ್ನ ಐಎಫ್ಎಸ್ ಅಧಿಕಾರಿಯಾಗಿದ್ದ ನಟೇಶ್ ಅವರ ಅಧಿಕಾರಾವಧಿಯು ಡಿಸೆಂಬರ್ 29, 2021 ರಂದು ಕರ್ನಾಟಕದಲ್ಲಿ ಕೊನೆಗೊಂಡ ನಂತರ ಈಗ ಮೈಸೂರು ಸಿಎಫ್ ಕರಿಕಾಳನ್ ಅವರು ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ನಿರ್ದೇಶಕರ ಹುದ್ದೆಯನ್ನೂ ನಿರ್ವಹಿಸುತ್ತಿದ್ದಾರೆ. ಈ ಮಹತ್ವದ ಹುದ್ದೆಗೆ ಹಲವರ ಹೆಸರು ಕೇಳಿ ಬರುತ್ತಿವೆ, ಜನವರಿ 18 ರಂದು ಇಬ್ಬರ ಹೆಸರನ್ನು ಶಾರ್ಟ್ ಲಿಸ್ಟ್ ಮಾಡಿ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿತ್ತು, ಆದರೆ ಅಂದಿನಿಂದ ಇಂದಿನವರೆಗೆ ಫೈಲ್ ಮೂವ್ ಆಗಿಲ್ಲ.
ಹುಲಿ ಗಣತಿ ನಡೆದು ಹಲವು ಸಮಸ್ಯೆಗಳನ್ನು ಎದುರಿಸುತ್ತಿರುವ ಸಮಯದಲ್ಲಿ ಬಿಟಿಆರ್ ಗೆ ನಿರ್ದೇಶಕರನ್ನು ನೇಮಿಸುವಲ್ಲಿ ಸರ್ಕಾರ ವಿಳಂಬ ಮಾಡುತ್ತಿದೆ, ರಾಜ್ಯ ಸರ್ಕಾರಕ್ಕೆ ಗಂಭೀರತೆ ಮತ್ತು ದೂರ ದೃಷ್ಟಿಯಿಲ್ಲ ಎಂದು ಸಂರಕ್ಷಣಾ ವಾದಿಗಳು ಆರೋಪಿಸಿದ್ದಾರೆ.
ಕರ್ನಾಟಕ ಅರಣ್ಯ ಇಲಾಖೆಯು ರಾಜ್ಯವನ್ನು ಹುಲಿಗಳ ಸಂಖ್ಯೆಯಲ್ಲಿ ಮೊದಲ ಸ್ಥಾನಕ್ಕೆ ತರಲು ಶ್ರಮಿಸುತ್ತಿರುವಾಗ ಖಾಲಿ ಹುದ್ದೆಗಳನ್ನು ಭರ್ತಿ ಮಾಡದಿರುವುದು ಸರ್ಕಾರವು ಅರಣ್ಯ ಸಂರಕ್ಷಣೆಗೆ ಉತ್ಸುಕವಾಗಿಲ್ಲ ಎಂಬುದನ್ನು ಸೂಚಿಸುತ್ತದೆ ಎಂದು ಸಂರಕ್ಷಣಾ ವಾದಿಯೊಬ್ಬರು ಅಭಿಪ್ರಾಯ ಪಟ್ಟಿದ್ದಾರೆ.