ದಕ್ಷಿಣ ಕನ್ನಡ: ಶಾಲಾ-ಕಾಲೇಜುಗಳ ಪ್ರದೇಶದಲ್ಲಿ ನಿಷೇಧಾಜ್ಞೆ ಫೆ.26 ವರೆಗೂ ಮುಂದುವರಿಕೆ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಲಾ-ಕಾಲೇಜುಗಳ ಪ್ರದೇಶದಲ್ಲಿ ನಿಷೇಧಾಜ್ಞೆಯನ್ನು ಫೆ.26 ವರೆಗೂ ಮುಂದುವರೆಸಲು ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ.
Published: 19th February 2022 10:16 PM | Last Updated: 19th February 2022 10:21 PM | A+A A-

ಹಿಜಾಬ್ ಧರಿಸಿರುವ ವಿದ್ಯಾರ್ಥಿನಿಯರ ಸಾಂದರ್ಭಿಕ ಚಿತ್ರ
ಉಡುಪಿ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಲಾ-ಕಾಲೇಜುಗಳ ಪ್ರದೇಶದಲ್ಲಿ ನಿಷೇಧಾಜ್ಞೆಯನ್ನು ಫೆ.26 ವರೆಗೂ ಮುಂದುವರೆಸಲು ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕೆವಿ ರಾಜೇಂದ್ರ ತಮ್ಮ ಆದೇಶದಲ್ಲಿ ನಿಷೇಧಾಜ್ಞೆಯ ವಿಸ್ತರಣೆಯನ್ನು ಘೋಷಿಸಿದ್ದು, " ಹಿಜಾಬ್ ವಿವಾದದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.
ಆದೇಶ ಫೆ.19 ರ ಸಂಜೆ 6 ರಿಂದ ಫೆ.26 ರ ಸಂಜೆ 6 ವರೆಗೆ ಶಾಲಾ ಕಾಲೇಜುಗಳಿರುವ 200 ಮೀಟರ್ ಗಳ ಪ್ರದೇಶದಲ್ಲಿ ಅನ್ವಯವಾಗಲಿದೆ ಎಂದು ಹೇಳಿದ್ದಾರೆ.