ಬೆಂಗಳೂರು: ನಿವೃತ್ತಿ ಹೊಂದಿದ ಮೂರು ಸಿಐಎಸ್ಎಫ್ ಶ್ವಾನಗಳಿಗೆ ಬೀಳ್ಕೊಡುಗೆ
ಒಂದು ದಶಕಕ್ಕೂ ಹೆಚ್ಚು ಕಾಲ ಸೇವೆ ಸಲ್ಲಿಸಿದ ನಂತರ, ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಯ(ಸಿಐಎಸ್ಎಫ್) ಬಾಂಬ್ ಪತ್ತೆ ಮತ್ತು ನಿಷ್ಕ್ರಿಯ ದಳದ ನಿರ್ಣಾಯಕ
Published: 19th February 2022 03:17 PM | Last Updated: 19th February 2022 08:11 PM | A+A A-

ನಿವೃತ್ತಿ ಹೊಂದಿದ ಮೂರು ಸಿಐಎಸ್ಎಫ್ ಶ್ವಾನಗಳು
ಬೆಂಗಳೂರು: ಒಂದು ದಶಕಕ್ಕೂ ಹೆಚ್ಚು ಕಾಲ ಸೇವೆ ಸಲ್ಲಿಸಿದ ನಂತರ, ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಯ(ಸಿಐಎಸ್ಎಫ್) ಬಾಂಬ್ ಪತ್ತೆ ಮತ್ತು ನಿಷ್ಕ್ರಿಯ ದಳದ ನಿರ್ಣಾಯಕ ಭಾಗವಾಗಿದ್ದ ಮೂರು ಶ್ವಾನಗಳಿಗೆ ಶುಕ್ರವಾರ ಪ್ರೀತಿಯಿಂದ ಬೀಳ್ಕೊಡಲಾಯಿತು.
ನಿವೃತ್ತಿ ಹೊಂದಿದ ಮೂವರು ಸೂಪರ್ಹೀರೋಗಳೆಂದರೆ- ಎರಡು ಸ್ತ್ರೀ ಲ್ಯಾಬ್ರಡಾರ್ಗಳು, ಪಿಂಕಿ ಮತ್ತು ನಿರು, ಮತ್ತೊಂದು ಗಂಡು ಗೋಲ್ಡನ್ ರಿಟ್ರೈವರ್ ಮಾಮೊ.
ಇದನ್ನು ಓದಿ: ಗೃಹ ಇಲಾಖೆಯಲ್ಲಿನ ಮಹಿಳೆಯರಿಗೆ ಶೇ.33 ಮೀಸಲಾತಿ: ಸರ್ಕಾರಕ್ಕೆ ಆಡಳಿತ ಸುಧಾರಣಾ ಆಯೋಗ ಶಿಫಾರಸು
“ಈ ಮೂವರು ವಿಧ್ವಂಸಕ ವಿರೋಧಿ ತಂಡದ ಭಾಗವಾಗಿದ್ದರು ಮತ್ತು ವಿಮಾನ ನಿಲ್ದಾಣದ ಭದ್ರತೆಯನ್ನು ಕಾಪಾಡಿಕೊಳ್ಳಲು ಅಪಾರ ಕೊಡುಗೆ ನೀಡಿದ್ದಾರೆ. ಇವುಗಳನ್ನು ಸೆಪ್ಟೆಂಬರ್ 2012 ರಲ್ಲಿ ಭದ್ರತೆಗೆ ಸೇರಿಸಲಾಯಿತು ಮತ್ತು ಅಂದಿನಿಂದ ಅದ್ಭುತವಾದ ವೃತ್ತಿಜೀವನ ಹೊಂದಿದ್ದಾರೆ” ಎಂದು ಹಿರಿಯ ಸಿಐಎಸ್ಎಫ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ಮೂವರೂ ವಿಧ್ವಂಸಕ-ವಿರೋಧಿ ತಪಾಸಣೆ, ವ್ಯಾಪಕ ಕಾರ್ಯಾಚರಣೆಗಳನ್ನು ನಡೆಸಿದ್ದಾರೆ ಮತ್ತು ವಾಹನ ತಪಾಸಣೆ ನಡೆಸುವುದರ ಜೊತೆಗೆ ಟರ್ಮಿನಲ್ನಲ್ಲಿ ಗಮನಿಸದ ಸಾಮಾನು ಸರಂಜಾಮುಗಳಿಗೆ ಸಂಬಂಧಿಸಿದಂತೆ ಸಾವಿರಾರು ಸ್ನಿಫಿಂಗ್ ಕಾರ್ಯಗಳನ್ನು ನಡೆಸಿದ್ದಾರೆ ಎಂದು ಅಧಿಕಾರಿ ಹೇಳಿದ್ದಾರೆ.