ತ್ರಿಪುರದಿಂದ ರೈಲಿನಲ್ಲಿ ಮಾದಕವಸ್ತು ತಂದು ಮಾರಾಟ; ಮೂವರ ಬಂಧನ, 15 ಕೆಜಿ ಗಾಂಜಾ ವಶಕ್ಕೆ
ತ್ರಿಪುರ ರಾಜ್ಯದಿಂದ ರೈಲಿನಲ್ಲಿ ಮಾದಕವಸ್ತು ಗಾಂಜಾ ಸಾಗಿಸಿಕೊಂಡು ಬೆಂಗಳೂರು ನಗರದಲ್ಲಿ ಮಾರಾಟ ಮಾಡುತ್ತಿದ್ದ ಮೂವರನ್ನು ನಗರದ ಶ್ರೀರಾಂಪುರ ಪೊಲೀಸರು ಬಂಧಿಸಿದ್ದಾರೆ.
Published: 21st February 2022 04:33 PM | Last Updated: 21st February 2022 05:00 PM | A+A A-

ಸಾಂದರ್ಭಿಕ ಚಿತ್ರ
ಬೆಂಗಳೂರು: ತ್ರಿಪುರ ರಾಜ್ಯದಿಂದ ರೈಲಿನಲ್ಲಿ ಮಾದಕವಸ್ತು ಗಾಂಜಾ ಸಾಗಿಸಿಕೊಂಡು ಬೆಂಗಳೂರು ನಗರದಲ್ಲಿ ಮಾರಾಟ ಮಾಡುತ್ತಿದ್ದ ಮೂವರನ್ನು ನಗರದ ಶ್ರೀರಾಂಪುರ ಪೊಲೀಸರು ಬಂಧಿಸಿದ್ದಾರೆ.
ತ್ರಿಪುರದ ಕಮ್ರುಲ್ ಇಸ್ಲಾಂ (27 ವರ್ಷ), ಸಾಹಿಬ್ ಮಿಯಾನ್, (40 ವರ್ಷ) ಮತ್ತು ಅವನ ಸಂಬಂಧಿ ಖುರ್ಷಿದ್ ಮಿಯಾನ್ (21 ವರ್ಷ) ಬಂಧಿತ ಆರೋಪಿಗಳಾಗಿದ್ದಾರೆ ಎಂದು ಡಿಸಿಪಿ ವಿನಾಯಕ ಪಾಟೀಲ್ ತಿಳಿಸಿದ್ದಾರೆ.
ಆರೋಪಿಗಳು ತ್ರಿಪೂರ ರಾಜ್ಯದವರಾಗಿದ್ದು, ನಗರದ ಖಾಸಗಿ ಸಂಸ್ಥೆಗಳಲ್ಲಿ ಸೆಕ್ಯೂರಿಟಿ ಗಾರ್ಡ್ ಗಳಾಗಿ ಆಗಿ ಕೆಲಸ ಮಾಡಿಕೊಂಡಿದ್ದರು. ಆರೋಪಿಗಳು ತ್ರಿಪೂರಕ್ಕೆ ಹೋದಾಗ ಅತಿ ಕಡಿಮೆ ಬೆಲೆಗೆ ಗಾಂಜಾವನ್ನು ಖರೀದಿಸಿ ಲಗೇಜ್ ಬ್ಯಾಗ್ಗಳಲ್ಲಿ ರೈಲಿನಲ್ಲಿ ಪೊಲೀಸರ ಕಣ್ತಪ್ಪಿಸಿ ತಂದು ನಗರದಲ್ಲಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದರು. ಈ ಮಾಹಿತಿ ಅರಿತ ಪೊಲೀಸರು ತನಿಖೆ ನಡೆಸಿ ಅಕ್ರಮ ಬಯಲಿಗೆಳೆದಿದ್ದಾರೆ.
ಪೊಲೀಸ್ ಮೂಲಗಳ ಪ್ರಕಾರ ಆರೋಪಿಗಳು ಫೆ.19 ರಂದು ಬೆಳಿಗ್ಗೆ 10.30ರ ವೇಳೆ ಶ್ರೀರಾಮಪುರದ ವಾಟಾಳ್ ನಾಗರಾಜ್ ರಸ್ತೆಯ ಮೂಲಕ ದ್ವಿಚಕ್ರವಾಹನದಲ್ಲಿ ಗಾಂಜಾ ಇಟ್ಟುಕೊಂಡು ಮೆಜೆಸ್ಟಿಕ್ ಕಡೆಗೆ ಮಾರಾಟ ಮಾಡಲು ಹೋಗುತ್ತಿದ್ದರು. ಈ ಬಗ್ಗೆ ಲಭಿಸಿದ ಖಚಿತ ಮಾಹಿತಿ ಮೇರೆಗೆ ಪೊಲೀಸ್ ಇನ್ಸ್ಪೆಕ್ಟರ್ ಬಾಲಕೃಷ್ಣ ಆರ್ ಮತ್ತವರ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಶ್ರೀರಾಮಪುರದ ಬ್ರಿಟಾನಿಯಾ ಪ್ಯಾಕ್ಟರಿ ಬಳಿ ಆರೋಪಿಗಳನ್ನು ಬಂಧಿಸಿದ್ದಾರೆ.
ಅಲ್ಲದೆ ಬಂಧಿತ ಆರೋಪಿಗಳಿಂದ ಸುಮಾರು 6 ಲಕ್ಷ ರೂ ಮೌಲ್ಯದ 20 ಕೆಜೆ ಗಾಂಜಾವನ್ನು ವಶಕ್ಕೆ ಪಡೆದಿದ್ದಾರೆ.