ಹತ್ಯೆಗೀಡಾದ ಭಜರಂಗದಳ ಕಾರ್ಯಕರ್ತ ಹರ್ಷನ ಮೃತದೇಹ ಕುಟುಂಬಕ್ಕೆ ಹಸ್ತಾಂತರ: ಶಿವಮೊಗ್ಗ ನಗರದಲ್ಲಿ ಮೆರವಣಿಗೆ
ಕಳೆದ ರಾತ್ರಿ ಶಿವಮೊಗ್ಗದಲ್ಲಿ ಬರ್ಭರವಾಗಿ ಹತ್ಯೆಯಾದ ಭಜರಂಗದಳ ಕಾರ್ಯಕರ್ತ ಹರ್ಷನ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದ್ದು, ಸದ್ಯ ಮೆಗ್ಗಾನ್ ಜಿಲ್ಲಾಸ್ಪತ್ರೆಯಿಂದ ಮನೆಗೆ ಮೆರವಣಿಗೆ ಮೂಲಕ ಮೃತದೇಹವನ್ನು ಸಾಗಿಸಲಾಗುತ್ತಿದೆ.
Published: 21st February 2022 12:16 PM | Last Updated: 21st February 2022 03:17 PM | A+A A-

ಶಿವಮೊಗ್ಗ ನಗರದಲ್ಲಿ ಹರ್ಷನ ಮೃತದೇಹ ಮೆರವಣಿಗೆ
ಶಿವಮೊಗ್ಗ: ಕಳೆದ ರಾತ್ರಿ ಶಿವಮೊಗ್ಗದಲ್ಲಿ ಬರ್ಭರವಾಗಿ ಹತ್ಯೆಯಾದ ಭಜರಂಗದಳ ಕಾರ್ಯಕರ್ತ ಹರ್ಷನ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದ್ದು, ಸದ್ಯ ಮೆಗ್ಗಾನ್ ಜಿಲ್ಲಾಸ್ಪತ್ರೆಯಿಂದ ಮನೆಗೆ ಮೆರವಣಿಗೆ ಮೂಲಕ ಮೃತದೇಹವನ್ನು ಸಾಗಿಸಲಾಗುತ್ತಿದೆ.
ಶಿವಮೊಗ್ಗ ನಗರದಲ್ಲಿ ಮೃತದೇಹ ಮೆರವಣಿಗೆ ಸಾಗುತ್ತಿದ್ದು, ಬಿಗಿ ಪೊಲೀಸ್ ಬಂದೋಬಸ್ತ್ ಇದೆ. ಇನ್ನೊಂದೆಡೆ ಉದ್ರಿಕ್ತರ ಗುಂಪು ಅಲ್ಲಲ್ಲಿ ಕಲ್ಲು ತೂರಾಟ ನಡೆಸುತ್ತಿದ್ದಾರೆ. ಪೊಲೀಸ್ ಭದ್ರತೆಯಲ್ಲಿ ಮೃತದೇಹವನ್ನು ಮೆರವಣಿಗೆ ಮೂಲಕ ಮನೆಗೆ ಸಾಗಿಸಲಾಗುತ್ತಿದೆ.
ಇದನ್ನೂ ಓದಿ: ಶಿವಮೊಗ್ಗದಲ್ಲಿ ಭಜರಂಗದಳ ಕಾರ್ಯಕರ್ತನ ಕಗ್ಗೊಲೆ: ಬೆಚ್ಚಿಬಿದ್ದ ಮಲೆನಾಡು, ಬಿಗುವಿನ ವಾತಾವರಣ, ಶಾಲಾ-ಕಾಲೇಜುಗಳಿಗೆ ರಜೆ
ಶಿವಮೊಗ್ಗದ ಬಸವನ ಬೀದಿಯಲ್ಲಿ ಕೊಲೆಗೀಡಾದ ಯುವಕ ಹರ್ಷನ ನಿವಾಸವಿದೆ.
Karnataka | Body of the 26-year-old Bajrang Dal activist Harsha, who was allegedly murdered yesterday in Shivamogga, being taken to his residence amid Police security after postmortem.
— ANI (@ANI) February 21, 2022
Large numbers of workers of Hindu organisations join in. pic.twitter.com/6jllIkEZ0q
ವಿಧಾನ ಪರಿಷತ್ ನಲ್ಲಿ ತೀವ್ರ ಗದ್ದಲ: ಶಿವಮೊಗ್ಗದಲ್ಲಿ ಹಿಂದೂ ಸಂಘಟನೆ ಹತ್ಯೆ ವಿಧಾನ ಮಂಡಲ ಕಲಾಪದಲ್ಲಿ ಭಾರೀ ಸದ್ದು ಮಾಡುತ್ತಿದೆ. ಹರ್ಷನ ಕೊಲೆಗೆ ಗ್ರಾಮೀಣಾಭಿವೃದ್ಧಿ ಸಚಿವ ಕೆ ಎಸ್ ಈಶ್ವರಪ್ಪನವರೇ ಕಾರಣ, ಕೊಲೆಗಡುಕ ಈಶ್ವರಪ್ಪನವರನ್ನು ಸಂಪುಟದ ವಜಾ ಮಾಡಬೇಕೆಂದು ವಿಧಾನ ಪರಿಷತ್ ನಲ್ಲಿ ಸದನದ ಬಾವಿಗಿಳಿದು ಕಾಂಗ್ರೆಸ್ ನಾಯಕರು ಪ್ರತಿಭಟನೆ ಮಾಡುತ್ತಿದ್ದಾರೆ.