ಹಿಜಾಬ್ ವಿವಾದ: ಬೆಂಗಳೂರಿನಲ್ಲಿ ಶಾಲಾ ಕಾಲೇಜುಗಳ ಸಮೀಪ ಮಾರ್ಚ್ 8ರ ತನಕ ಸೆಕ್ಷನ್ 144 ವಿಸ್ತರಣೆ
ರಾಜ್ಯಾದ್ಯಂತ ಪ್ರತಿಭಟನೆಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಶುಕ್ರವಾರದ ತನಕ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಿತ್ತು.
Published: 21st February 2022 02:59 PM | Last Updated: 21st February 2022 04:34 PM | A+A A-

ಸಾಂದರ್ಭಿಕ ಚಿತ್ರ
ಬೆಂಗಳೂರು: ರಾಜ್ಯದ ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ಕುರಿತ ಪ್ರತಿಭಟನೆಗಳು ನಡೆಯುತ್ತಿರುವ ಬೆನ್ನಲ್ಲೇ ಬೆಂಗಳೂರಿನ ಶಿಕ್ಷಣ ಸಂಸ್ಥೆಗಳ 200ಮೀ ಸುತ್ತಳತೆ ವ್ಯಾಪ್ತಿಯಲ್ಲಿ ಗುಂಪುಗೂಡುವುದು, ಪ್ರತಿಭಟನೆ ನಡೆಸುವುದನ್ನು ಬೆಂಗಳೂರು ನಗರ ಪೊಲೀಸರು ನಿರ್ಬಂಧಿಸಿದ್ದಾರೆ.
ಇದನ್ನೂ ಓದಿ: ರಾಜ್ಯ ಕಾಂಗ್ರೆಸ್ ನಾಯಕರಿಂದ ಶುಕ್ರವಾರ ರಾಹುಲ್ ಗಾಂಧಿ ಭೇಟಿ: ಹಿಜಾಬ್ ವಿವಾದದ ಬಗ್ಗೆ ಚರ್ಚೆ
ರಾಜ್ಯಾದ್ಯಂತ ಪ್ರತಿಭಟನೆಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಶುಕ್ರವಾರದ ತನಕ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಿತ್ತು.
ಇದನ್ನೂ ಓದಿ: ಹಿಜಾಬ್ ವಿವಾದದ ಹಿಂದೆ ಐಎಸ್ಐ ಕೈವಾಡ, ಪ್ರಕರಣದಲ್ಲಿ ಕಾಂಗ್ರೆಸ್ ಮೌನವೇಕೆ? ಸಚಿವ ಆರ್. ಅಶೋಕ್ ಪ್ರಶ್ನೆ
ಅದರ ಬೆನ್ನಲ್ಲೇ ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ನಗರದ ಶಿಕ್ಷಣ ಸಂಸ್ಥೆಗಳ ಬಳಿ ಜಮಾವಣೆ, ಪ್ರತಿಭಟನೆ ನಡೆಸದಂತೆ ಮಾರ್ಚ್ 8ರ ತನಕ ನಿಷೇಧಾಜ್ಞೆ ವಿಸ್ತರಿಸಿದ್ದಾರೆ.
ಇದನ್ನೂ ಓದಿ: ಹಿಜಾಬ್ ವಿವಾದ: ತುಂಡು ಬಟ್ಟೆ ಶಿಕ್ಷಣದ ಮೇಲೆ ಹೇಗೆ ಪರಿಣಾಮ ಬೀರುತ್ತದೆ- ಹೈಕೋರ್ಟ್ ಹಿರಿಯ ವಕೀಲರ ಪ್ರಶ್ನೆ