ಸರ್ಕಾರ ನಮ್ಮದೇ ಇದ್ದಾಗಲೂ ಹಿಂದೂ ಕಾರ್ಯಕರ್ತನ ಕೊಲೆ ಆಗಿರುವುದು ನಾಚಿಕೆಗೇಡು: ಪ್ರತಾಪ್ ಸಿಂಹ
ಶಿವಮೊಗ್ಗದಲ್ಲಿ ಬಜರಂಗದಳದ ಕಾರ್ಯಕರ್ತ ಹರ್ಷನ ಹತ್ಯೆ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ನಮ್ಮದೇ ಸರ್ಕಾರ ಬಂದ ಮೇಲೂ ಹಿಂದೂ ಕಾರ್ಯಕರ್ತರ ಕೊಲೆಯಾಗಿರುವುದು ನನಗೆ ನಾಚಿಕೆ ಉಂಟುಮಾಡುತ್ತಿದೆ ಎಂದು ಹೇಳಿದ್ದಾರೆ.
Published: 21st February 2022 04:47 PM | Last Updated: 21st February 2022 05:12 PM | A+A A-

ಪ್ರತಾಪ್ ಸಿಂಹ
ಬೆಂಗಳೂರು: ಶಿವಮೊಗ್ಗದಲ್ಲಿ ಬಜರಂಗದಳದ ಕಾರ್ಯಕರ್ತ ಹರ್ಷನ ಹತ್ಯೆ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ನಮ್ಮದೇ ಸರ್ಕಾರ ಬಂದ ಮೇಲೂ ಹಿಂದೂ ಕಾರ್ಯಕರ್ತರ ಕೊಲೆಯಾಗಿರುವುದು ನನಗೆ ನಾಚಿಕೆ ಉಂಟುಮಾಡುತ್ತಿದೆ ಎಂದು ಹೇಳಿದ್ದಾರೆ.
ಬಿಜೆಪಿ ಕಚೇರಿಯಲ್ಲಿ ಮಾತನಾಡಿರುವ ಅವರು, ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ ಹಿಂದೂ ಕಾರ್ಯಕರ್ತರ ಹತ್ಯೆಯಾದಾಗಲೂ ಕಾಂಗ್ರೆಸ್ ನ್ನು ನಿಂದಿಸುತ್ತಿದ್ದೆವು. ಈಗ ನಮ್ಮ ಸರ್ಕಾರ ಇದ್ದರೂ ನಮ್ಮದೇ ಕಾರ್ಯಕರ್ತ ಹತ್ಯೆ ಆಗಿದ್ದಾನೆ. ಇದು ನನಗೆ ತೀವ್ರ ನೋವುಂಟು ಮಾಡಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಭಜರಂಗದಳ ಕಾರ್ಯಕರ್ತ ಹರ್ಷ ಹತ್ಯೆ ಪ್ರಕರಣ: ಇಬ್ಬರು ಆರೋಪಿಗಳ ಬಂಧನ
ರಾಜ್ಯದಲ್ಲಿ ಹಿಜಬ್ ವಿಷಯದಲ್ಲಿ ಹೈಕೋರ್ಟ್ ನ ಮಧ್ಯಂತರ ಆದೇಶ ಪಾಲನೆ ಆಗುತ್ತಿಲ್ಲ. ಸೆಕ್ಷನ್ 144 ನ್ನು ಉಲ್ಲಂಘಿಸಿದವರ ಮೇಲೆ ಕ್ರಮ ಕೈಗೊಂಡಿಲ್ಲ. ಈಗ ನಮ್ಮ ಹಿಂದೂ ಕಾರ್ಯಕರ್ತ ಹತ್ಯೆಯಾಗಿದ್ದಾನೆ ಸರ್ಕಾರ ಇನ್ನು ಯಾವಾಗ ಕ್ರಮ ಕೈಗೊಳ್ಳಲಿದೆ? ಎಂದು ಪ್ರಶ್ನಿಸಿದ್ದಾರೆ. ಸಿಎಂ ಮಾತು ನಿಲ್ಲಿಸಿ ಕೃತಿಯಲ್ಲಿ ಕಠಿಣತೆ ತೋರಲಿ ಎಂದು ಪ್ರತಾಪ್ ಸಿಂಹ ಆಗ್ರಹಿಸಿದ್ದಾರೆ.