ದಾವಣಗೆರೆ: 5ನೇ ತರಗತಿ ಬಾಲಕಿಯ ಬಾಲ್ಯ ವಿವಾಹ ಮಾಡಲು ಮುಂದಾಗಿದ್ದ ಪೋಷಕರು, ಶಿಕ್ಷಕರಿಂದ ರಕ್ಷಣೆ
ಇಲ್ಲಿನ ಸರ್ಕಾರಿ ಶಾಲೆಯ 5ನೇ ತರಗತಿ ವಿದ್ಯಾರ್ಥಿನಿ ಸುನಿತಾ(ಹೆಸರು ಬದಲಿಸಲಾಗಿದೆ) ಪೋಷಕರ ಆಶಯದಂತೆ ಮದುವೆಯಾಗಿ ತನ್ನ ಅಮೂಲ್ಯ ಬಾಲ್ಯ ಜೀವನವನ್ನು ಶಾಲಾ ಕಲಿಕೆಯನ್ನು ಕಳೆದುಕೊಳ್ಳಬೇಕಾಗಿತ್ತು.
Published: 21st February 2022 08:30 AM | Last Updated: 21st February 2022 02:58 PM | A+A A-

ಸಾಂದರ್ಭಿಕ ಚಿತ್ರ
ದಾವಣಗೆರೆ: ಇಲ್ಲಿನ ಸರ್ಕಾರಿ ಶಾಲೆಯ 5ನೇ ತರಗತಿ ವಿದ್ಯಾರ್ಥಿನಿ ಸುನಿತಾ(ಹೆಸರು ಬದಲಿಸಲಾಗಿದೆ) ಪೋಷಕರ ಆಶಯದಂತೆ ಮದುವೆಯಾಗಿ ತನ್ನ ಅಮೂಲ್ಯ ಬಾಲ್ಯ ಜೀವನವನ್ನು ಶಾಲಾ ಕಲಿಕೆಯನ್ನು ಕಳೆದುಕೊಳ್ಳಬೇಕಾಗಿತ್ತು.
ಇದು ನಡೆದಿರುವುದು ದಾವಣಗೆರೆ ಜಿಲ್ಲೆಯ ಸಂತೆಬೆನ್ನೂರು ಗ್ರಾಮದಲ್ಲಿ. ಆದರೆ ಗ್ರಾಮಸ್ಥರು ಮಧ್ಯೆ ಪ್ರವೇಶಿಸಿ ಬಾಲ್ಯವಿವಾಹವಾಗುವುದನ್ನು(Child marriage) ತಡೆದಿದ್ದಾರೆ.
ಸುನಿತಾ ತನ್ನ ಎಸ್ಬಿಆರ್ ಕಾಲೊನಿಯಲ್ಲಿ ಅಜ್ಜಿಮನೆಯಲ್ಲಿ ವಾಸವಾಗಿದ್ದಳು. ಕಳೆದ ಹಲವು ತಿಂಗಳುಗಳಿಂದ ಶಾಲೆಗೆ ಹೋಗುತ್ತಿರಲಿಲ್ಲ. ಈ ಬಗ್ಗೆ ಶಾಲೆಯ ಶಿಕ್ಷಕರು ಪ್ರಶ್ನಿಸಿದಾಗ ಆಕೆಯ ಪೋಷಕರು ಮದುವೆ ಮಾಡಲು ಮುಂದಾಗಿದ್ದಾರೆ ಎಂದು ತಿಳಿದುಬಂತು.
ಇದನ್ನೂ ಓದಿ: ಸಾಂಕ್ರಾಮಿಕ ಎಫೆಕ್ಟ್: ಅಪ್ರಾಪ್ತ ಬಾಲಕಿಯರ ವಿವಾಹ ಸಂಖ್ಯೆಯಲ್ಲಿ ಹೆಚ್ಚಳ!
ಕೂಡಲೇ ಎಚ್ಚೆತ್ತ ಶಾಲೆಯ ಶಿಕ್ಷಕರು ಗ್ರಾಮಸ್ಥರ ಸಹಾಯದಿಂದ ಪೋಷಕರ ಮನವೊಲಿಸಿ ಮದುವೆ ಮಾಡದೆ ಓದಿಸಿ ಎಂದು ಹೇಳಿದ್ದಾರೆ. ಸುನಿತಾಳ ತಂದೆ ವಿಜಯಪುರದವರಾಗಿದ್ದು ತಾಯಿ ಸಂತೆಬೆನ್ನೂರಿನ ಗೊಲ್ಲರಹಳ್ಳಿ ಗ್ರಾಮದವರು. ದಿನಗೂಲಿ ನೌಕರರು. ಬಡವರಾಗಿದ್ದು ತಮ್ಮ ಮಗಳನ್ನು ಸಾಕಿ, ಸಲಹಿ ಶಾಲೆಗೆ ಕಳುಹಿಸಲು ಸಾಧ್ಯವಾಗುವುದಿಲ್ಲ ಎಂದು ಮದುವೆ ಮಾಡಲು ಮುಂದಾಗಿದ್ದರು ಎಂದು ಶಾಲೆಯ ಶಿಕ್ಷಕರು ಹೇಳುತ್ತಾರೆ.