ಬಜರಂಗದಳ ಕಾರ್ಯಕರ್ತ ಹರ್ಷ ಭೀಕರ ಹತ್ಯೆ ಪ್ರಕರಣ: ಮತ್ತಿಬ್ಬರ ಬಂಧನ; ಒಟ್ಟು 12 ಮಂದಿ ವಶಕ್ಕೆ
ಭಜರಂಗ ದಳದ ಕಾರ್ಯಕರ್ತ ಹರ್ಷ ಅವರ ಭೀಕರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೆ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧನಕ್ಕೊಳಪಡಿಸಿದ್ದು, ಇದರೊಂದಿಗೆ ಪ್ರಕರಣ ಸಂಬಂಧ ಬಂಧನಕ್ಕೊಳಗಾದವರ ಸಂಖ್ಯೆ ಐದಕ್ಕೆ ಏರಿಕೆಯಾಗಿದೆ.
Published: 22nd February 2022 11:53 AM | Last Updated: 22nd February 2022 03:08 PM | A+A A-

ಆ್ಯಂಬುಲೆನ್ಸ್ ನಲ್ಲಿ ಮೃತದೇಹವನ್ನು ಸಾಗಿಸುತ್ತಿರುವುದು.
ಶಿವಮೊಗ್ಗ: ಭಜರಂಗ ದಳದ ಕಾರ್ಯಕರ್ತ ಹರ್ಷ ಅವರ ಭೀಕರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೆ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧನಕ್ಕೊಳಪಡಿಸಿದ್ದು, ಇದರೊಂದಿಗೆ ಪ್ರಕರಣ ಸಂಬಂಧ ಬಂಧನಕ್ಕೊಳಗಾದವರ ಸಂಖ್ಯೆ ಐದಕ್ಕೆ ಏರಿಕೆಯಾಗಿದೆ.
ಪ್ರಕರಣ ಸಬಂಧ ಪೊಲೀಸರು ಈ ಹಿಂದೆ ಮೂವರು ಆರೋಪಿಗಳನ್ನು ಬಂಧನಕ್ಕೊಳಪಡಿಸಿದ್ದರು. ಇದೀಗ ಇಬ್ಬರು ಆರೋಪಿಗಳನ್ನು ಮತ್ತ ಬಂಧನಕ್ಕೊಳಪಡಿಸಲಾಗಿದೆ. ಬಂಧಿತರಿಬ್ಬರೂ ಶಿವಮೊಗ್ಗ ಮೂಲದವರಾಗಿದ್ದು, 12 ಮಂದಿಯನ್ನು ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆಗೊಳಪಡಿಸಿದ್ದಾರೆಂದು ಮೂಲಗಳು ಮಾಹಿತಿ ನೀಡಿವೆ.
ಇದನ್ನೂ ಓದಿ: ಶಿವಮೊಗ್ಗ ಗಲಭೆಗೆ ಸಚಿವ ಈಶ್ವರಪ್ಪನೇ ಕಾರಣ: ಡಿ ಕೆ ಶಿವಕುಮಾರ್
ಬಜರಂಗದಳ ಕಾರ್ಯಕರ್ತ ಹರ್ಷ ಎಂಬುವವರ ಬರ್ಬರ ಹತ್ಯೆ ಪ್ರಕರಣ ಹಿನ್ನೆಲೆಯಲ್ಲಿ ಸೋಮವಾರ ಇಡೀ ಶಿವಮೊಗ್ಗ ಹೊತ್ತಿ ಉರಿದಿದೆ.
ದಿನವಿಡೀ ಉದ್ರಿಕ್ತ ಗುಂಪುಗಳು ಕಂಡ ಕಂಡಲ್ಲಿ ಆಸ್ತಿಪಾಸ್ತಿಗಳ ಮೇಲೆ ಕಲ್ಲು ತೂರಿ, ವಾಹನಗಳು, ಅಂಗಡಿಗಳಿಗೆ ಬೆಂಕಿ ಹಚ್ಚುವ ಮೂಲಕ ಹಿಂಸಾಚಾರಕ್ಕಿಳಿದಿದ್ದು, ಈ ವೇಳೆ 25ಕ್ಕೂ ಹೆಚ್ಚು ಮಂದಿಗೆ ಗಾಯಗಳಾಗಿವೆ. ನಿಷೇಧಾಜ್ಞೆ ನಡುವೆಯೇ ನಡದ ಈ ಭಾರೀ ಹಿಂಸಾಚಾರ ನಿಯಂತ್ರಣ ಮಾಡಲು ಪೊಲೀಸರು ಹರಸಾಹಸ ಪಡುವಂತಾಗಿತ್ತು. ಲಾಠಿ ಪ್ರಹಾರ ನಡೆಸಿ, ಅಶ್ರುವಾಯು ಸಿಡಿಸಿ ಹಾಗೂ ಗಾಳಿಯಲ್ಲಿ ಗುಂಡು ಹಾರಿಸಿ ಗುಂಪು ಚದುರಿಸಿದರು.
ಇದನ್ನೂ ಓದಿ: ಹರ್ಷ ಇಲ್ಲದೆ ಬದುಕುವುದು ಹೇಗೆಂದೇ ಗೊತ್ತಾಗುತ್ತಿಲ್ಲ: ಶಿವಮೊಗ್ಗ ಯುವಕ ಹರ್ಷನ ನೆನೆದು ಕಣ್ಣೀರಾದ ತಂದೆ-ತಾಯಿ, ಸೋದರಿಯರು
ಇಷ್ಟಾದರೂ ಬೆಳಿಗ್ಗೆ 11.45ಕ್ಕೆ ಆರಂಭವಾದ ಹಿಂಸಾಚಾರ ಸಂಜೆ 5.30ರವರಗೂ ನಡೆದಿತು. ಶಿವಮೊಗ್ಗ ಹಿಂಸಾಚಾರದಲ್ಲಿ 30ಕ್ಕೂ ಹೆಚ್ಚು ಅಂಗಡಿಗಳು, 32ಕತ್ಕೂ ಹೆಚ್ಚು ವಾಹನಗಳಿಗೆ ಹಾನಿಯಾಗಿದ್ದು, ಹತ್ತಕ್ಕೂ ಹೆಚ್ಚು ವಾಹನಗಳು ಸುಟ್ಟುಕರಕಲಾಗಿವೆ. ಘಟನೆ ಹಿನ್ನೆಲೆಯಲ್ಲಿ ಶಿವಮೊಗ್ಗ ನಗರದಲ್ಲಿ ನಿಷೇಧಾಜ್ಞೆಯನ್ನು ಎರಡು ದಿನ ವಿಸ್ತರಿಸಲಾಗಿದೆ. ಇದೇ ವೇಳೆ ಸೋಮವಾರ ರಾತ್ರಿ 10ರಿಂದ ಬುಧವಾರ ಬೆಳಿಗ್ಗೆ 6ರವರೆಗೆ ಕರ್ಫ್ಯೂವನ್ನೂ ಘೋಷಿಸಲಾಗಿದೆ. ಭದ್ರತಾವತಿಯಲ್ಲೂ ಕರ್ಫ್ಯೂ ಜಾರಿಯಲ್ಲಿರಲಿದೆ ಎಂದು ತಿಳಿದುಬಂದಿದ್ದು, ಶಾಲೆ-ಕಾಲೇಜುಗಳಿಗೂ ರಜೆ ಮುಂದುವರಿಸಲಾಗಿದೆ. ಪ್ರಕರಣ ಸಂಬಂಧ 7 ಮಂದಿ ಭಾಗಿಯಾಗಿರುವ ಸಾಧ್ಯತೆಗಳಿವೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.