ಮುಖ್ಯಮಂತ್ರಿ, ಸಚಿವರು, ಶಾಸಕರ ವೇತನ-ಭತ್ಯೆ ಶೇಕಡಾ 50ರಷ್ಟು ಹೆಚ್ಚಳ; ಯಾರಿಗೆ ಎಷ್ಟು? ಇಲ್ಲಿದೆ ಮಾಹಿತಿ...

ರಾಷ್ಟ್ರಧ್ವಜ ಕುರಿತು ಗ್ರಾಮೀಣಾಭಿವೃದ್ಧಿ ಸಚಿವ ಕೆ ಎಸ್ ಈಶ್ವರಪ್ಪ ನೀಡಿದ್ದ ಹೇಳಿಕೆಯನ್ನು ಹಿಡಿದುಕೊಂಡು ಪ್ರತಿಪಕ್ಷ ಕಾಂಗ್ರೆಸ್ ಅವರ ವಜಾಕ್ಕೆ ಆಗ್ರಹಿಸಿ ಸದನದಲ್ಲಿ ಕಳೆದ ಐದು ದಿನಗಳಿಂದ ಗದ್ದಲ, ಕೋಲಾಹಲ ಎಬ್ಬಿಸಿದ್ದರ ನಡುವೆ ಇಂದು ಮಂಗಳವಾರ ಸದನದಲ್ಲಿ ಕರ್ನಾಟಕ ಸಚಿವರ ವೇತನ ಮತ್ತು ಭತ್ಯೆ (ತಿದ್ದುಪಡಿ) ಮಸೂದೆ 2022ಕ್ಕೆ (Salary hike) ಅಂಗೀಕಾರ ನೀಡಲಾಗಿದೆ

Published: 22nd February 2022 02:09 PM  |   Last Updated: 22nd February 2022 04:22 PM   |  A+A-


Representational image

ಸಂಗ್ರಹ ಚಿತ್ರ

The New Indian Express

ಬೆಂಗಳೂರು: ರಾಷ್ಟ್ರಧ್ವಜ ಕುರಿತು ಗ್ರಾಮೀಣಾಭಿವೃದ್ಧಿ ಸಚಿವ ಕೆ ಎಸ್ ಈಶ್ವರಪ್ಪ ನೀಡಿದ್ದ ಹೇಳಿಕೆಯನ್ನು ಹಿಡಿದುಕೊಂಡು ಪ್ರತಿಪಕ್ಷ ಕಾಂಗ್ರೆಸ್ ಅವರ ವಜಾಕ್ಕೆ ಆಗ್ರಹಿಸಿ ಸದನದಲ್ಲಿ ಕಳೆದ ಐದು ದಿನಗಳಿಂದ ಗದ್ದಲ, ಕೋಲಾಹಲ ಎಬ್ಬಿಸಿದ್ದರ ನಡುವೆ ಇಂದು ಮಂಗಳವಾರ ಸದನದಲ್ಲಿ ಕರ್ನಾಟಕ ಸಚಿವರ ವೇತನ ಮತ್ತು ಭತ್ಯೆ(ತಿದ್ದುಪಡಿ)ಮಸೂದೆ 2022ಕ್ಕೆ(Salary hike) ಅಂಗೀಕಾರ ನೀಡಲಾಗಿದೆ. 

ಇದರಿಂದಾಗಿ ಮುಖ್ಯಮಂತ್ರಿಗಳು ಸೇರಿದಂತೆ ಇತರ ಸಚಿವರುಗಳ ವೇತನ ಶೇಕಡಾ 50ರಷ್ಟು ಹೆಚ್ಚಾಗಲಿದೆ. ವಿಧಾನಸಭೆಯಲ್ಲಿ ಕರ್ನಾಟಕ ಶಾಸಕರ ವೇತನ, ಪಿಂಚಣಿ ಮತ್ತು ಭತ್ಯೆ(ತಿದ್ದುಪಡಿ) ಮಸೂದೆ 2022ಕ್ಕೆ ಸಹ ಅಂಗೀಕಾರ ಸಿಕ್ಕಿದ್ದು, ಇದರಿಂದಾಗಿ ವಿಧಾನಸಭೆ, ವಿಧಾನ ಪರಿಷತ್ ಎರಡೂ ಸದನಗಳ ಶಾಸಕರ, ಸ್ಪೀಕರ್, ಉಪ ಸ್ಪೀಕರ್, ಸಭಾಪತಿ, ಉಪ ಸಭಾಪತಿಗಳ ಸಂಬಳ(Salary) ಶೇಕಡಾ 50ರಷ್ಟು ಹೆಚ್ಚಾಗಲಿದೆ. ಜತೆಗೆ ನಿವೃತ್ತಿ ವೇತನ ತಿದ್ದುಪಡಿ ವಿಧೇಯಕ ಅಂಗೀಕಾರ ಮಾಡಲಾಗಿದೆ. ಸದನ ಸದಸ್ಯರ ಮನೆ ಬಾಡಿಗೆ, ಪ್ರಯಾಣ ಖರ್ಚುವೆಚ್ಚ ಮತ್ತು ಇತರ ಭತ್ಯೆಗಳ ಸೌಲಭ್ಯವೂ ಹೆಚ್ಚು ಸಿಗಲಿದೆ. 

ಎಷ್ಟೆಷ್ಟು ಹೆಚ್ಚಳ, ಏನೆನು ಹೆಚ್ಚಳ
ಸಚಿವರು ಮತ್ತು ಶಾಸಕರ ಸಂಬಳ ಮತ್ತು ಭತ್ಯೆ, ನಿವೃತ್ತಿ ವೇತನಗಳನ್ನು ಹೆಚ್ಚಳ ಮಾಡುವ ವಿಧೇಯಕಗಳಿಂದ ಇನ್ನು ಮುಂದೆ ಮುಖ್ಯಮಂತ್ರಿಗಳು ಈಗಿರುವ 50 ಸಾವಿರ ರೂ.ಗಳ ಸಂಬಳ 75 ಸಾವಿರ ರೂ.ಗಳಿಗೆ ಏರಿಕೆಯಾಗಲಿದೆ. ಸಂಪುಟ ದರ್ಜೆಯ ಸಚಿವರುಗಳ ಸಂಬಳ 40 ಸಾವಿರ ರೂ.ಗಳಿಂದ 60 ಸಾವಿರ ರೂ.ಗಳವರೆಗೆ ಏರಿಕೆಯಾಗಲಿದ್ದು, ಮುಖ್ಯಮಂತ್ರಿ ಮತ್ತು ಮಂತ್ರಿಗಳ ಆತಿಥ್ಯ ಭತ್ಯೆ ವಾರ್ಷಿಕ 3 ಲಕ್ಷ ರೂ.ಗಳಿಂದ ೪.೫ ಲಕ್ಷ ರೂ.ಗಳಿಗೆ ಏರಿಕೆಯಾಗಲಿದೆ. ಸಚಿವ ಸಂಪುಟ ದರ್ಜೆಯ ಮಂತ್ರಿಗಳ ತಿಂಗಳ ಮನೆ ಬಾಡಿಗೆ ಭತ್ಯೆ 80 ಸಾವಿರ ರೂ.ಗಳಿಂದ 1.20 ಲಕ್ಷ ರೂ.ಗಳವರೆಗೆ ಏರಿಕೆಯಾಗಲಿದೆ. ಸಚಿವರುಗಳ ಮನೆ ನಿರ್ವಹಣೆ ವೆಚ್ಚ 20 ಸಾವಿರ ರೂ.ಗಳಿಂದ 30 ಸಾವಿರ ರೂ.ಗಳವರೆಗೆ ಏರಿಕೆಯಾಗಿದೆ.

ಮಂತ್ರಿಗಳು ಹಾಗೂ ಮುಖ್ಯಮಂತ್ರಿಗಳಿಗೆ ಪ್ರತಿ ತಿಂಗಳು ನೀಡುತ್ತಿರುವ ವಾಹನ ಭತ್ಯೆಯಲ್ಲೂ ಏರಿಕೆಯಾಗುತ್ತಿದ್ದು, ಈಗಿನ 1 ಸಾವಿರ ಲೀಟರ್ ಪೆಟ್ರೋಲ್ ಬೆಲೆಯನ್ನು 2 ಸಾವಿರ ಲೀಟರ್ ಪೆಟ್ರೋಲ್ ಬೆಲೆಯಷ್ಟು ವಾಹನ ಭತ್ಯೆಯನ್ನು ನೀಡಲಾಗುತ್ತದೆ. ರಾಜ್ಯ ಮಂತ್ರಿಗಳ ಸಂಬಳ 35 ಸಾವಿರ ರೂ.ಗಳಿಂದ 50 ಸಾವಿರ ರೂ.ಗಳವರೆಗೆ ಮತ್ತು ವಾರ್ಷಿಕ ಆತಿಥ್ಯ ಭತ್ಯೆ 2 ಲಕ್ಷದಿಂದ 3 ಲಕ್ಷ ರೂ.ಗಳಿಗೆ ಏರಿಕೆಯಾಗಿದೆ. ರಾಜ್ಯ ಮಂತ್ರಿಗಳ ಮನೆ ಬಾಡಿಗೆಯನ್ನು 80 ಸಾವಿರದಿಂದ 1.20 ಲಕ್ಷ ರೂ.ಗಳವರೆಗೆ ಮತ್ತು ಮನೆ ನಿರ್ವಹಣಾ ವೆಚ್ಚವನ್ನು 20 ಸಾವಿರ ರೂ.ಗಳಿಂದ 35 ಸಾವಿರ ರೂ.ಗಳಿಗೆ ಏರಿಸಲಾಗಿದೆ. ರಾಜ್ಯ ಮಂತ್ರಿಗಳಿಗೆ ನೀಡುತ್ತಿರುವ ವಾಹನ ಭತ್ಯೆಯಲ್ಲೂ ಏರಿಕೆಯಾಗಿದ್ದು, ಅವರಿಗೆ 1.500 ಲೀಟರ್ ಪೆಟ್ರೋಲ್ ಬೆಲೆಯ ವಾಹನ ಭತ್ಯೆ ನೀಡಲಾಗುತ್ತದೆ. ಉಪಮಂತ್ರಿಗಳ ಸಂಬಳ, ಮನೆ ಬಾಡಿಗೆ ಮತ್ತು ಭತ್ಯೆಗಳು ಏರಿಕೆಯಾಗಿದೆ.

ಮುಖ್ಯಮಂತ್ರಿ, ಸಚಿವರುಗಳ ಸಂಬಳ ಭತ್ಯೆ ಏರಿಕೆ ಜತೆಗೆ ಸಭಾಪತಿ, ಉಪಸಭಾಪತಿ, ವಿಧಾನಸಭಾಧ್ಯಕ್ಷರು, ಉಪಾಧ್ಯಕ್ಷರು ಹಾಗೂ ವಿರೋಧ ಪಕ್ಷದ ನಾಯಕರುಗಳ ಸಂಬಳ ಭತ್ಯೆಗಳು ಏರಿಕೆಯಾಗಲಿದ್ದು, ವಿಧಾನಸಭಾಧ್ಯಕ್ಷರ ಹಾಗೂ ಉಪಾಧ್ಯಕ್ಷರ ಸಂಬಳ 50 ಸಾವಿರ ರೂ.ಗಳಿಂದ 75 ಸಾವಿರ ರೂ.ಗಳವರೆಗೆ, ಆತಿಥ್ಯ ಭತ್ಯೆ ವಾರ್ಷಿಕ 3 ಲಕ್ಷದಿಂದ 4 ಲಕ್ಷ ರೂ.ಗಳಿಗೆ, ಪ್ರಯಾಣ ಭತ್ಯೆ ಕಿ.ಮೀ.ಗೆ 30 ರಿಂದ 40 ರೂ.ಗಳವರೆಗೆ, ದಿನ ಭತ್ಯೆ 2 ಸಾವಿರದಿಂದ 3 ಸಾವಿರ ರೂ.ಗಳವರೆಗೆ, ಹೊರ ರಾಜ್ಯ ಪ್ರವಾಸ ಭತ್ಯೆಯಲ್ಲೂ ಏರಿಕೆಯಾಗಿದೆ. ಸಭಾಪತಿ, ವಿಧಾನಸಭಾಧ್ಯಕ್ಷರ ಬಾಡಿಗೆ 80 ರಿಂದ 1.60ಲಕ್ಷ ರೂ.ಗಳವರೆಗೆ, ವಿಧಾನಸಭೆಯ ಉಪಾಭಾಧ್ಯಕ್ಷ ಹಾಗೂ ಉಪಸಭಾಪತಿ ಸಂಬಳ 40 ರಿಂದ 60 ಸಾವಿರ ರೂ.ಗಳವರೆಗೆ. 

ವಾಹನ ಭತ್ಯೆ 2 ಸಾವಿರ ಲೀಟರ್ ಪೆಟ್ರೋಲ್ ಬೆಲೆ. ವಿರೋಧ ಪಕ್ಷದ ನಾಯಕರ ಸಂಬಳ 40 ಸಾವಿರದಿಂದ 60ಸಾವಿರ, ಆತಿಥ್ಯ ಭತ್ಯೆ 2 ಲಕ್ಷದಿಂದ 2.5 ಲಕ್ಷ, ವಾಹನ ಭತ್ಯೆ 1 ಸಾವಿರ ಲೀಟರ್ ಪೆಟ್ರೋಲ್ ಬೆಲೆಯ ಬದಲು 2 ಸಾವಿರ ಲೀಟರ್ ಪೆಟ್ರೋಲ್ ಬೆಲೆಯ ವಾಹನ ವೆಚ್ಚ ಏರಿಕೆಯಾಗಿದೆ. ಸರ್ಕಾರಿ ಮುಖ್ಯ ಸಚೇತಕರಿಗೆ ಸಂಬಳ 35 ಸಾವಿರ ರೂ.ಗಳಿಂದ 50 ಸಾವಿರ ರೂ.ಗಳವರೆಗೆ, ವಿರೋಧ ಪಕ್ಷದ ಮುಖ್ಯ ಸಚೇತಕರ ಸಂಬಳ ತಲಾ 35 ರಿಂದ 50 ಸಾವಿರ ರೂ.ಗಳವರೆಗೆ ಏರಿಕೆಯಾಗಿದೆ. ಇದರ ಜತೆಗೆ ವಾಹನ ಭತ್ಯೆ, ಪ್ರಯಾಣ ಭತ್ಯೆಯಲ್ಲೂ ಹೆಚ್ಚಳವಾಗಿದೆ.

ಶಾಸಕರ ಸಂಬಳ ಎಷ್ಟೆಷ್ಟು
ಶಾಸಕರ ಸಂಬಳ 25ಸಾವಿರ ರೂ.ಗಳಿಂದ 40ಸಾವಿರ ರೂ.ಗಳವರೆಗೆ ಏರಿಕೆಯಾಗಿದೆ. ಶಾಸಕರ ನಿವೃತ್ತಿ ವೇತನ 40ರಿಂದ 50ಸಾವಿರ ರೂ.ಗಳವರೆಗೆ ಏರಿಕೆಯಾಗಿದೆ. ನಿವೃತ್ತಿ ವೇತನ 1 ಲಕ್ಷ ಮೀರುವಂತಿಲ್ಲ.
 


Stay up to date on all the latest ರಾಜ್ಯ news
Poll
Nitish_Kumar1

2024 ರ ಲೋಕಸಭಾ ಚುನಾವಣೆಯಲ್ಲಿ ನಿತೀಶ್ ಕುಮಾರ್ ಅವರು ಸಂಯುಕ್ತ ವಿರೋಧ ಪಕ್ಷಗಳ ಪ್ರಧಾನಿ ಅಭ್ಯರ್ಥಿಯಾಗಬಹುದೇ?


Result
ಹೌದು
ಇಲ್ಲ

Comments(2)

Disclaimer : We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

  • Anil Sabaji

    what is the rationale in giving 50% raise in salary and 100% raise to fuel allowance? I shall file a PIL asking how anyone can spend 2000 Ltrs of fuel which literally mean 20000KM of travel a month or min 1000 KM travel for 25 days in a month. Considering 60KM average speed, for 25 days, these guys are on road not doing any usefull work. Not even a truck driver travel so much???
    5 months ago reply
  • sathya

    It is not enough turn karnataka into bankrupt, loot corrupt criminal talian state like UP, bihar and they enjoyed 50% hike in salary cost 70crs extra every year. Why don't you publish how much salary each MLA, MP get?
    5 months ago reply
flipboard facebook twitter whatsapp