ಶಿವಮೊಗ್ಗದಲ್ಲಿ ಶಾಲಾ ಕಾಲೇಜು ಆರಂಭದ ಕುರಿತು ಜಿಲ್ಲಾಧಿಕಾರಿಗಳು ತೀರ್ಮಾನಿಸುತ್ತಾರೆ: ಶಿಕ್ಷಣ ಸಚಿವ ಬಿಸಿ. ನಾಗೇಶ್
ಶಿವಮೊಗ್ಗದಲ್ಲಿ ಶಾಲಾ ಕಾಲೇಜು ಆರಂಭಿಸುವ ಬಗ್ಗೆ ಡಿಸಿ ನಿರ್ಧಾರ ಮಾಡ್ತಾರೆ ಇವತ್ತು ಗಂಭೀರ ಪರಿಸ್ಥಿತಿ ಇದ್ದ ಕಾರಣ ಇಂದಿನ ಮಟ್ಟಿಗೆ ರಜೆ ನೀಡಲಾಗಿದೆ ಎಂದು ಶಿಕ್ಷಣ ಸಚಿವ ನಾಗೇಶ್ ಅವರು ಹೇಳಿದ್ದಾರೆ.
Published: 22nd February 2022 12:25 PM | Last Updated: 22nd February 2022 03:09 PM | A+A A-

ಬಿಸಿ ನಾಗೇಶ್
ಬೆಂಗಳೂರು: ಶಿವಮೊಗ್ಗದಲ್ಲಿ ಶಾಲಾ ಕಾಲೇಜು ಆರಂಭಿಸುವ ಬಗ್ಗೆ ಡಿಸಿ ನಿರ್ಧಾರ ಮಾಡ್ತಾರೆ ಇವತ್ತು ಗಂಭೀರ ಪರಿಸ್ಥಿತಿ ಇದ್ದ ಕಾರಣ ಇಂದಿನ ಮಟ್ಟಿಗೆ ರಜೆ ನೀಡಲಾಗಿದೆ ಎಂದು ಶಿಕ್ಷಣ ಸಚಿವ ನಾಗೇಶ್ ಅವರು ಹೇಳಿದ್ದಾರೆ.
ಶಿವಮೊಗ್ಗ ದಲ್ಲಿ ನಡೆದ ಭಜರಂಗದಳದ ಕಾರ್ಯಕರ್ತ ಹರ್ಷ ಕೊಲೆಯ ಘಟನೆಯಿಂದಾಗಿ ಶಿವಮೊಗ್ಗದಲ್ಲಿ ಸದ್ಯ ಬಿಗುವಿನ ವಾತಾವರಣವಿದೆ. 144 ಸೆಕ್ಷನ್ ಜಾರಿ ಮಾಡಲಾಗಿದೆ. ಶಾಲಾ ಕಾಲೇಜು ಆರಂಭಿಸುವ ಬಗ್ಗೆ ಜಿಲ್ಲಾಧಿಕಾರಿಗಳು ನಿರ್ಧಾರ ತೆಗೆದುಕೊಳ್ಳುತ್ತಾರೆ. ಇಂದು ಗಂಭೀರ ಪರಿಸ್ಥಿತಿ ಇದ್ದ ಕಾರಣ ಇವತ್ತಿನ ಮಟ್ಟಿಗೆ ಒಂದುದಿನದ ರಜೆ ನೀಡಲಾಗಿದೆ ನಾಳೆಯಿಂದ ಯಥಾಸ್ಥಿತಿ ಕಾಯ್ದುಕೊಂಡು ಶಾಲೆ ಆರಂಭವಾಗುತ್ತದೆ ಎಂದು ಸಚಿವ ನಾಗೇಶ್ ಹೇಳಿದರು.
ಇದನ್ನೂ ಓದಿ: ಬಜರಂಗದಳ ಕಾರ್ಯಕರ್ತ ಹರ್ಷ ಭೀಕರ ಹತ್ಯೆ ಪ್ರಕರಣ: ಮತ್ತಿಬ್ಬರ ಬಂಧನ
ನಂತರ ಮಾತನಾಡಿದ ಅವರು ಕಾಂಗ್ರೆಸ್ ಇಷ್ಟು ದಿನ ನೀಡಿರುವ ಹೇಳಿಕೆಗಳನ್ನು ರಾಜ್ಯದ ಜನ ಗಮನಿಸುತ್ತಲಿದ್ದಾರೆ. ಕಾಂಗ್ರೆಸ್ ಪಕ್ಷ ವಿನಾ ಕಾರಣ ರಾಷ್ಟ್ರಧ್ವಜ ದ ವಿವಾದದ ಮಾತನಾಡುತ್ತಿದ್ದಾರೆ. ಬೇರೆ ಯಾರಾದ್ರೂ ರಾಷ್ಟ್ರೀಯ ವಾದಿಗಳು ದೇಶಭಕ್ತಿ ಪಾಠ ಹೇಳಿಕೊಟ್ರೆ ನಾವು ಕಲಿಯಬಹುದು, ಆದರೆ ಕಾಂಗ್ರೆಸ್ ನವರಿಂದ ನಾವು ರಾಷ್ಟ್ರ ಭಕ್ತಿ ಕಲಿಯಬೇಕಿಲ್ಲ ಎಂದು ಕಾಂಗ್ರೆಸ್ ಆರೋಪಕ್ಕೆ ತಿರುಗೇಟು ನೀಡಿದರು.
ಸಿದ್ದರಾಮಯ್ಯ ಅಧಿಕಾರವಧಿಯಲ್ಲಿ ಲಿಸ್ಟ್ ತೆಗೆದು ನೋಡಿ ಇಂತಹ ಕೃತ್ಯ ಮಾಡಿದವರ ಮೇಲಿನ ಕೇಸ್ ಗಳನ್ನು ವಾಪಸ್ ಪಡೆದಿದ್ದಾರೆ. ಹಾಗೆ ಕೇಸ್ ಗಳನ್ನು ವಾಪಸ್ ಪಡೆಯದೇ ಇದ್ದಿದ್ದರೆ ಅವರಿಗೂ ಭಯ ಇರ್ತಾ ಇತ್ತು. ಹಿಜಾಬ್ ವಿಚಾರದಲ್ಲಿ ಹೈಕೋರ್ಟ್ ಆದೇಶ ಇದೆ ಅದನ್ನು ಕೆಲವು ಹೆಣ್ಣುಮಕ್ಕಳು ವಿರೊಧಿಸಿದ್ರೆ ಅವರ ಪರ ಕಾಂಗ್ರೆಸ್ ಮಾತಾಡ್ತಾರೆ ಇದಕ್ಕೆ ಏನು ಹೇಳಬೇಕು.? ಹಿಜಾಬ್ ಕಾರಣದಿಂದ ಪರೀಕ್ಷೆ ಗೈರಾದರೇ, ಅವರಿಗೆ ಬೇರೆ ಆಪ್ಷನ್ ಇಲ್ಲ ಪರೀಕ್ಷೆ ಬೇಕು ಅಂದ್ರೆ ಹಿಜಾಬ್ ತೆಗೆದು ಬರೆಯಲಿ ಇದು ಕೇವಲ ಅವರಿಗಷ್ಟೇ ಅಲ್ಲ, ಎಲ್ಲರಿಗೂ ಅನ್ವಯವಾಗುತ್ತದೆ, ಬೇರೆ ಯಾವುದೇ ಕಾರಣಕ್ಕೆ ಪರೀಕ್ಷೆ ತಪ್ಪಿಸಿಕೊಂಡ ಹಿಂದೂ ಮಕ್ಕಳಿಗೂ ಇದೇ ಅನವ್ಯಿಸುತ್ತದೆ ,ಬೇರೆ ಅವಕಾಶ ಇಲ್ಲ ಎಂದರು.