ಬೆಂಗಳೂರಿನಲ್ಲಿ ಅಪಘಾತ ಪ್ರಮಾಣ ಕಡಿಮೆ ಮಾಡಲು ಸಾರಿಗೆ ಇಲಾಖೆ ಹೊಸ ಕ್ರಮ
ರಸ್ತೆ ಅಪಘಾತ ಪ್ರಮಾಣವನ್ನು ತಗ್ಗಿಸುವ ನಿಟ್ಟಿನಲ್ಲಿ ವಿಶ್ವದ ಅತ್ಯುತ್ತಮ ರಸ್ತೆ ಸುರಕ್ಷತೆ ಕ್ರಮಗಳ ಜಾರಿಗೆ ರಾಜ್ಯ ಸರ್ಕಾರ ‘ಬ್ಲೂಮ್ಬರ್ಗ್ ಫಿಲಾಂತ್ರೊಫಿನ್ ಜಾಗತಿಕ ರಸ್ತೆ ಸುರಕ್ಷತಾ ಅಭಿಯಾನದ ಜತೆ ಒಪ್ಪಂದ ಮಾಡಿಕೊಂಡಿದೆ.
Published: 22nd February 2022 08:18 AM | Last Updated: 22nd February 2022 08:18 AM | A+A A-

ಶ್ರೀರಾಮುಲು
ಬೆಂಗಳೂರು: ರಾಜಧಾನಿಯಲ್ಲಿ ರಸ್ತೆ ಅಪಘಾತ ಪ್ರಮಾಣವನ್ನು ತಗ್ಗಿಸುವ ನಿಟ್ಟಿನಲ್ಲಿ ವಿಶ್ವದ ಅತ್ಯುತ್ತಮ ರಸ್ತೆ ಸುರಕ್ಷತೆ ಕ್ರಮಗಳ ಜಾರಿಗೆ ರಾಜ್ಯ ಸರ್ಕಾರ ‘ಬ್ಲೂಮ್ಬರ್ಗ್ ಫಿಲಾಂತ್ರೊಫಿನ್ ಜಾಗತಿಕ ರಸ್ತೆ ಸುರಕ್ಷತಾ ಅಭಿಯಾನದ ಜತೆ ಒಪ್ಪಂದ ಮಾಡಿಕೊಂಡಿದೆ.
ಸೋಮವಾರ ವಿಧಾನಸೌಧದಲ್ಲಿ ನಡೆದ ಸಭೆಯಲ್ಲಿ ಒಪ್ಪಂದಕ್ಕೆ ಸಹಿ ಹಾಕಿ ಮಾತನಾಡಿದ ಸಾರಿಗೆ ಸಚಿವ ಬಿ.ಶ್ರೀರಾಮುಲು ಬೆಂಗಳೂರನ್ನು ರಸ್ತೆ ಅಪಘಾತ ಮುಕ್ತ ನಗರವಾಗಿ ಮಾಡುವ ಗುರಿಯನ್ನು ರಾಜ್ಯ ಸರ್ಕಾರ ಹೊಂದಿದೆ. ಅಭಿಯಾನದ ಜತೆಗೂಡಿ ಜಾಗತಿಕ ಮಟ್ಟದ ಅತ್ಯುತ್ತಮ ರಸ್ತೆ ಸುರಕ್ಷತಾ ಕ್ರಮಗಳನ್ನು ಜಾರಿಗೊಳಿಸಲಾಗುವುದು. ಇದರಿಂದ ರಸ್ತೆ ಅಪಘಾತದ ಸಾವು ನೋವುಗಳು ತಗ್ಗಲಿವೆ ಎಂದು ತಿಳಿಸಿದರು.
2025ರ ವರೆಗೂ ಈ ಒಪ್ಪಂದ ಜಾರಿಯಲ್ಲಿ ಇರಲಿದೆ. ಈ ಅವಧಿಯಲ್ಲಿ ವೇಗದ ಚಾಲನೆ, ಮದ್ಯಪಾನ ರಹಿತ ಚಾಲನೆ, ಹೆಲ್ಮೆಟ್, ಸೀಟ್ ಬೆಲ್ಟ್ ಕುರಿತು ಕಾನೂನು ಕ್ರಮಗಳನ್ನು ಜಾರಿಗೊಳಿಸುವುದು. ಸುರಕ್ಷತಾ ರಸ್ತೆಗಳು, ಸಾರಿಗೆ ವ್ಯವಸ್ಥೆಗಳ ವಿನ್ಯಾಸ ಸೇರಿದಂತೆ ಪ್ರಮುಖ ತಂತ್ರಗಳನ್ನು ಬಿಐಜಿಆರ್ಎಸ್ ಬಳಸಿಕೊಂಡು ಬೆಂಗಳೂರಿನ ಅಪಘಾತವನ್ನು ಕಡಿಮೆ ಮಾಡಲಿದೆ ಎಂದು ಸಾರಿಗೆ ಅಧಿಕಾರಿಗಳು ಮಾಹಿತಿ ನೀಡಿದರು.
ಸಾರಿಗೆ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಟಾರಿಯಾ ಸೇರಿದಂತೆ ಅಧಿಕಾರಿಗಳು ಉಪಸ್ಥಿತರಿದ್ದರು. ರಸ್ತೆ ಅಪಘಾತಗಳು ಮತ್ತು ಸಾವುನೋವುಗಳನ್ನು ಕಡಿಮೆ ಮಾಡಲು ಸರ್ಕಾರ ಬದ್ಧವಾಗಿದೆ ಎಂದು ಸಾರಿಗೆ ಅಧಿಕಾರಿಗಳು ತಿಳಿಸಿದ್ದಾರೆ.