
ಸಾಂದರ್ಭಿಕ ಚಿತ್ರ
ಬೆಂಗಳೂರು: ಕೋವಿಡ್ ಸೋಂಕಿನಿಂದ ಬಳಲುತ್ತಿದ್ದ ಗರ್ಭಿಣಿಯೊಬ್ಬರು ಅಪಾಯದ ಅಂಚಿನಲ್ಲಿದ್ದರು, ಹೀಗಾಗಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಗರ್ಭ ಧರಿಸಿದ 24 ವಾರಗಳಲ್ಲಿ ಸಿಸೇರಿಯನ್ ಮಾಡಿ ಮಗು ಹೊರ ತೆಗೆಯಲಾಗಿದೆ, ಅವಧಿ ಪೂರ್ವ ಜನಿಸಿದ ಮಗುವಿನ ತೂಕ ಕೇವಲ 500 ಗ್ರಾಂ ಇತ್ತು.
ಮಗುವಿಗಾಗಿ 10 ವರ್ಷಗಳು ಹೋರಾಡಿದ ನಂತರ, ಹಲವು ಸಲ ಗರ್ಭಪಾತ ನಡೆದು 10 ಬಾರಿ ಐವಿಎಫ್ ಚಿಕಿತ್ಸೆ ಪಡೆದ ರೇಖಾ ರಮೇಶ್ ಅಂತಿಮವಾಗಿ ಗರ್ಭ ಧರಿಸಿದ್ದರು. ಆದರೆ ಅವರಿಗೆ ಕೋವಿಡ್ ಸೋಂಕು ತಗುಲಿತ್ತು, ಸೋಂಕು ತಗುಲಿದ ನಂತರ ಆಕೆಯ ಆರೋಗ್ಯ ತೀರಾ ಹದಗೆಟ್ಟಿತ್ತು. ಕೂಡಲೇ ಅವರನ್ನು ಐಸಿಯು ಗೆ ದಾಖಲಿಸಲಾಯಿತು.
ಸೋಂಕಿನ ಪರಿಣಾಮ ಆಕೆಯ ಶ್ವಾಸಕೋಶ ಹಾನಿಗೊಳಗಾಗಿತ್ತು. ಹೀಗಾಗಿ ಕೂಡಲೇ ಆಕೆಗೆ ಸಿಸೇರಿಯನ್ ಮಾಡಲಾಯಿತು. ಆಕೆಗೆ ಸುದೀರ್ಘ ಸಮಯದದ ಕಾಲ ಅನಸ್ತೇಶಿಯಾ ನೀಡಲು ಸಾಧ್ಯವಾಗದ ಕಾರಣ ಶೀಘ್ರವಾಗಿ ಶಸ್ತ್ರಚಿಕಿತ್ಸೆ ನಡೆಸಲಾಯಿತು. ಆಕೆಯನ್ನು ಮಲಗಿಸಿ ಆಪರೇಷನ್ ಮಾಡಲಾಗಲಿಲ್ಲ, ಬದಲಿಗೆ ಒರಗಿಸಿ ಕುಳಿತುಕೊಳ್ಳುವ ಭಂಗಿಯಲ್ಲಿ ಶಸ್ತ್ರ ಚಿಕಿತ್ಸೆ ಮಾಡಲಾಯಿತು ಎಂದು ಸಿಎಂಐ ಆಸ್ಪತ್ರೆ ಸ್ತ್ರೀರೋಗ ತಜ್ಞೆ ಡಾ. ಚೇತನ್ ಹೇಳಿದ್ದಾರೆ.
ತೀವ್ರವಾದ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದು ಮಗುವನ್ನು ವೆಂಟಿಲೇಟರ್ ನಲ್ಲಿಡಲಾಗಿದೆ. ಮಗುವಿಗೆ ಕೋವಿಡ್ ನಂತರದ ತೊಡಕುಗಳು (MIS-N) ಕಾಣಿಸಿಕೊಂಡಿವೆ. ಪ್ರಿಮೆಚ್ಯೂರಿಟಿಯ ಕಾರಣ ಎರಡೂ ಕಣ್ಣುಗಳು ರೆಟಿನೋಪತಿಯಿಂದ ಪ್ರಭಾವಿತವಾಗಿದ್ದು ಲೇಸರ್ ಚಿಕಿತ್ಸೆಯನ್ನು ನಡೆಸಲಾಯಿತು, ”ಎಂದು ಆಸ್ಟರ್ ಸಿಎಂಐ ಆಸ್ಪತ್ರೆಯ ನಿಯೋನಾಟಾಲಜಿ ಮತ್ತು ಪೀಡಿಯಾಟ್ರಿಕ್ಸ್ ವೈದ್ಯ ಡಾ ಸುಧೀರ್ ಕೆ ಎ ಹೇಳಿದರು.
100 ದಿನಗಳ ನಿರಂತರ ಮೇಲ್ವಿಚಾರಣೆಯ ನಂತರ, ಮಗುವಿನ ಸ್ಥಿತಿ ಸುಧಾರಿಸಿತು ಮತ್ತು ತಾಯಿಯ ಎದೆ ಹಾಲು ನೀಡಲಾಯಿತು. ಹಾಗಾಗಿ ಮಗುವಿನ ತೂಕ ಸಾಕಷ್ಟು ಹೆಚ್ಚಿತು, ನಂತರ ಅವರನ್ನು ಬಿಡುಗಡೆಯಾಯಿತು. ಏತನ್ಮಧ್ಯೆ, ರೇಖಾ ಕೂಡ ಹೆರಿಗೆಯ ನಂತರ ಕೆಲವು ವಾರಗಳವರೆಗೆ ಐಸಿಯುನಲ್ಲಿಯೇ ಇದ್ದರು ಮತ್ತು ಕ್ರಮೇಣ ಸುಧಾರಿಸಿದರು. ಹೆರಿಗೆಯ ನಂತರ, ಆಕೆಗೆ ಆಂಟಿ-ಇನ್ಫೆಕ್ಷನ್, ಆಕ್ಸಿಟೋಸಿನ್ ಮತ್ತು ಫ್ಲೂಯಿಡ್ ರೀಹೈಡ್ರೇಶನ್ ಥೆರಪಿ ನೀಡಲಾಯಿತು.
ನನಗೆ ತಾಯಿಯಾಗಲು ಅವಕಾಶ ಒದಗಿ ಬಂದಾಗ ನನಗೆ ಕೋವಿಡ್-19 ಸೋಂಕು ತಗುಲಿತ್ತು. ಸೋಂಕು ನನ್ನ ಗರ್ಭಾವಸ್ಥೆಯ ಮೇಲೆ ಪರಿಣಾಮ ಬೀರಿತು, ಹೀಗಾಗಿ ಅತ್ಯಂತ ಅವಧಿಪೂರ್ವ ಮಗುವಿಗೆ ಜನ್ಮ ನೀಡಲು ಕಾರಣವಾಯಿತು. ನನ್ನ ಮಗುವಿನ ತೂಕ ಅವಳು ಹುಟ್ಟಿದಾಗ 500 ಗ್ರಾಂ ಆಗಿತ್ತು, 3.5 ತಿಂಗಳ ನಂತರ ಅವಳು ಸುಮಾರು 1 ಕೆಜಿ ತೂಕವಿದ್ದಳು ಎಂದು ತಾಯಿ ರೇಖಾ ಹೇಳಿ ತಿಳಿಸಿದ್ದಾರೆ. ಮೂರು ತಿಂಗಳ ನಂತರ, ತಾಯಿ ಮತ್ತು ಮಗು ಇಬ್ಬರೂ ಆರೋಗ್ಯವಾಗಿದ್ದಾರೆ.