ಕೆಸಿ ಜನರಲ್ ಆಸ್ಪತ್ರೆಯಲ್ಲಿ 1 ಸಾವಿರ ಲೀಟರ್ ಸಾಮರ್ಥ್ಯದ ಆಕ್ಸಿಜನ್ ಘಟಕ ಲೋಕಾರ್ಪಣೆ
ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಅವರು ನಗರದ ಕೆಸಿ ಜನರಲ್ ಆಸ್ಪತ್ರೆಯಲ್ಲಿ ಪ್ರತಿ ನಿಮಿಷಕ್ಕೆ 1,000 ಲೀಟರ್ ಸಾಮರ್ಥ್ಯದ ಆಕ್ಸಿಜನ್ ಘಟಕವನ್ನು ಉದ್ಘಾಟಿಸಿದರು.
Published: 23rd February 2022 12:45 PM | Last Updated: 23rd February 2022 12:45 PM | A+A A-

ಸಂಗ್ರಹ ಚಿತ್ರ
ಬೆಂಗಳೂರು: ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಅವರು ನಗರದ ಕೆಸಿ ಜನರಲ್ ಆಸ್ಪತ್ರೆಯಲ್ಲಿ ಪ್ರತಿ ನಿಮಿಷಕ್ಕೆ 1,000 ಲೀಟರ್ ಸಾಮರ್ಥ್ಯದ ಆಕ್ಸಿಜನ್ ಘಟಕವನ್ನು ಉದ್ಘಾಟಿಸಿದರು.
ಈ ಆಮ್ಲಜನಕ ಘಟಕವನ್ನು ಕೆಸಿ ಜನರಲ್ ಆಸ್ಪತ್ರೆಗೆ HDFC ಬ್ಯಾಂಕ್ ಕೊಡುಗೆಯಾಗಿ ನೀಡಿದ್ದು, ಈ ಘಟಕವನ್ನು ಸಚಿವ ಸುಧಾಕರ್ ಅವರು ಮಂಗಳವಾರ ಲೋಕಾರ್ಪಣೆಗೊಳಿಸಿದರು.
ಬಳಿಕ ಮಾತನಾಡಿದ ಸುಧಾಕರ್ ಅವರು, ಆಸ್ಪತ್ರೆಯಲ್ಲಿ 50 ಹಾಸಿಗೆಗಳ ಪೀಡಿಯಾಟ್ರಿಕ್ ಐಸಿಯು ಸೌಲಭ್ಯ ಶೀಘ್ರದಲ್ಲಿಯೇ ಬರಲಿದೆ. ಹೊಸದಾಗಿ 200 ಹಾಸಿಗೆಗಳ ತಾಯಿ ಮಕ್ಕಳ ಆರೋಗ್ಯ (ಎಂಸಿಎಚ್) ವಿಭಾಗವನ್ನು ತೆರೆಯುವ ಪ್ರಸ್ತಾವನೆ ಇದೆ ಎಂದು ಹೇಳಿದ್ದಾರೆ.
ಕೆಸಿ ಜನರಲ್ ಆಸ್ಪತ್ರೆಯಲ್ಲಿ ಪ್ರಸ್ತುತ 2.6 ಲೀಟರ್ ಆಮ್ಲಜನಕ ಸಾಮರ್ಥ್ಯದ ಘಟಕವಿದೆ. ಪಿಎಂ ಕೇರ್ಸ್ ನಿಧಿಯಿಂದ ಇದನ್ನು ಸ್ಥಾಪಿಸಲಾಗಿದೆ. ನಮ್ಮಲ್ಲಿ 8 ಕಿಲೋ ಲೀಟರ್ ದ್ರವ ವೈದ್ಯಕೀಯ ಆಮ್ಲಜನಕ (LMO) ಪ್ಲಾಂಟ್ ಕೂಡ ಇದೆ. ಸಾಮಾನ್ಯವಾಗಿ ಪಿಎಸ್ಎ (ಪ್ರೆಶರ್ ಸ್ವಿಂಗ್ ಅಡ್ಸಾರ್ಪ್ಷನ್) ಸಾಮಾನ್ಯ ಹಾಸಿಗೆ ಹಾಗೂ ಹೆಚ್'ಡಿಯು ರೋಗಿಗಳಿಗೆ ಆಮ್ಲಜನಕವನ್ನು ಪೂರೈಸುತ್ತವೆ. ಐಸಿಯು ಮತ್ತು ವೆಂಟಿಲೇಟರ್ ರೋಗಿಗಳಿಗೆ ಎಲ್ಎಂಒ ಹೆಚ್ಚು ಉಪಯುಕ್ತವಾಗಿದೆ ಎಂಬುದು ನಮಗೆ ಈ ಕೊರೋನಾ ಸಾಂಕ್ರಾಮಿಕ ರೋಗದ ಅವಧಿಯಲ್ಲಿ ತಿಳಿದುಬಂದಿದೆ ಎಂದು ತಿಳಿಸಿದ್ದಾರೆ.