ಬ್ರಹ್ಮಗಿರಿ ಬೆಟ್ಟದ ಕಮರಿಗೆ ಬಿದ್ದ ಚಾರಣಿಗ: ಘಟನೆ ಬಳಿಕ ಗಿರಿಧಾಮಗಳ ಬಳಿ ಭದ್ರತೆ ಹೆಚ್ಚಿಸಿದ ಅಧಿಕಾರಿಗಳು
ಬ್ರಹ್ಮಗಿರಿ ಬೆಟ್ಟದ ಕಮರಿಗೆ ಬಿದ್ದು ದೆಹಲಿ ಮೂಲದ ಚಾರಣಿಗನೊಬ್ಬನ ಸಂಕಷ್ಟಕ್ಕೆ ಸಿಲುಕಿದ ಘಟನೆ ಬಳಿಕ ಚಿಕ್ಕಬಳ್ಳಾಪುರದ ಅಧಿಕಾರಿಗಳು ಕಣ್ಗಾವಲ ಹೆಚ್ಚಿಸಿದ್ದು, ಗಿರಿಧಾಮಗಳ ಬಳಿ ಸಿಬ್ಬಂದಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ನಿಯೋಜಿಸಿದ್ದಾರೆ.
Published: 23rd February 2022 11:58 AM | Last Updated: 23rd February 2022 01:14 PM | A+A A-

ಇರುಪ್ಪು ಜಲಪಾತ
ಬೆಂಗಳೂರು: ಬ್ರಹ್ಮಗಿರಿ ಬೆಟ್ಟದ ಕಮರಿಗೆ ಬಿದ್ದು ದೆಹಲಿ ಮೂಲದ ಚಾರಣಿಗನೊಬ್ಬನ ಸಂಕಷ್ಟಕ್ಕೆ ಸಿಲುಕಿದ ಘಟನೆ ಬಳಿಕ ಚಿಕ್ಕಬಳ್ಳಾಪುರದ ಅಧಿಕಾರಿಗಳು ಕಣ್ಗಾವಲ ಹೆಚ್ಚಿಸಿದ್ದು, ಗಿರಿಧಾಮಗಳ ಬಳಿ ಸಿಬ್ಬಂದಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ನಿಯೋಜಿಸಿದ್ದಾರೆ.
ಗಿರಿಧಾಮಗಳಿಗೆ ಬರುವ ಜನರ ಮೇಲೆ ನಿಗಾ ಇಡಲು ಸಿಬ್ಬಂದಿಗಳ ಕೊರತೆ ಇದೆ ಎಂಬ ಮಾತುಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಪರಿಸರ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿಯು ಹೆಚ್ಚಿನ ಸಿಬ್ಬಂದಿಗಳನ್ನು ನಿಯೋಜಿಸಿದೆ.
"ಸಿಬ್ಬಂದಿಗಳ ಸಂಖ್ಯೆಯನ್ನು ಹೆಚ್ಚಿಸುವುದರ ಜೊತೆಗೆ, ಕಾವಲುಗಾರರಾಗಿ ಕಾರ್ಯನಿರ್ವಹಿಸಲು ಸ್ಥಳೀಯರ ಸಹಾಯವನ್ನು ಕೂಡ ತೆಗೆದುಕೊಳ್ಳಲಾಗುತ್ತಿದೆ. ಕೆಲವರನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿದೆ, ಯಾವುದೇ ರೀತಿಯ ಘಟನೆಗಳು ಕಂಡು ಬಂದ ಕೂಡಲೇ ಮಾಹಿತಿ ನೀಡುವಂತೆ ಸೂಚಿಸಲಾಗಿದೆ. ಸಿಬ್ಬಂದಿಗಳಿಗಿಂತಲೂ ಸ್ಥಳೀಯರಿಗ ಸ್ಥಳಗಳ ಬಗ್ಗೆ ಸೂಕ್ತ ರೀತಿಯ ಮಾಹಿತಿಗಳಿರುತ್ತವೆ. ಹೀಗಾಗಿ ಸ್ಥಳೀಯರನ್ನು ನಿಯೋಜಿಸಲಾಗಿದೆ. ಬ್ರಹ್ಮಗಿರಿ ಮತ್ತು ಸ್ಕಂದಗಿರಿ ಬೆಟ್ಟಗಳ ಅರಣ್ಯ ಪ್ರದೇಶಗಳಲ್ಲಿ ಬೇಲಿ ಹಾಕುವ ಕಾರ್ಯ ಆರಂಭಿಸಲಾಗಿದೆ. ನಂದಿ ಬೆಟ್ಟದ ಸುತ್ತಮುತ್ತಲಿನ ಪ್ರದೇಶಗಳಿಗೂ ಬೇಲಿ ಹಾಕಲಾಗುತ್ತಿದೆ. ಸುರಕ್ಷಿತ ಮಾರ್ಗವನ್ನು ಮಾತ್ರ ಮುಕ್ತವಾಗಿರಿಸಲಾಗುತ್ತಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಇದನ್ನೂ ಓದಿ: ನಂದಿಬೆಟ್ಟದಲ್ಲಿ ಪ್ರಪಾತಕ್ಕೆ ಬಿದ್ದ ದೆಹಲಿ ಯುವಕ: ಹೆಲಿಕಾಪ್ಟರ್ ಮೂಲಕ ರಕ್ಷಿಸಿದ ವಾಯುಸೇನೆ, ವಿಡಿಯೋ!
ಇದೇ ವೇಳೆ ಬೆಂಗಳೂರಿನಿಂದ ಏಕಾಂಗಿಯಾಗಿ ಮತ್ತು ಗುಂಪುಗಳಲ್ಲಿ ಬರುವವರ ಮೇಲೆ ತೀವ್ರ ನಿಗಾ ಇಡಲಾಗುವುದು. ಅವರ ವಿವರಗಳನ್ನು ಪ್ರವೇಶ ಮತ್ತು ನಿರ್ಗಮನ, ಸಂಪರ್ಕ ವಿವರಗಳೊಂದಿಗೆ ಲಾಗ್ ಪುಸ್ತಕಗಳಲ್ಲಿ ನಮೂದಿಸಲಾಗುತ್ತದೆ. ಬ್ರಹ್ಮಗಿರಿ ಬೆಟ್ಟದ ಕಮರಿಗೆ ಬಿದ್ದು ಸಂಕಷ್ಟಕ್ಕೆ ಸಿಲುಕಿದ್ದ ಯುವಕ ನಂದಿಬೆಟ್ಟಕ್ಕೆ ಹೋಗುವುದಾಗಿ ಹೇಳಿ ಚೆಕ್ಪೋಸ್ಟ್ನಿಂದ ಸ್ವಲ್ಪ ದೂರದಲ್ಲಿ ತನ್ನ ದ್ವಿಚಕ್ರ ವಾಹನವನ್ನು ನಿಲ್ಲಿಸಿದ್ದ. ಅಧಿಕಾರಿಗಳ ಕಣ್ಣು ತಪ್ಪಿಸಿ ಬ್ರಹ್ಮಗಿರಿ ಬೆಟ್ಟಗಳಿಗೆ ಚಾರಣ ಮಾಡಿದ್ದರು. ಘಟನ ಬಳಿಕ ಈ ಕ್ರಮಗಳ ಅಗತ್ಯವಿದೆ. ಇದೀಗ ವಾರಾಂತ್ಯದಲ್ಲಷ್ಟೇ ಅಲ್ಲದೆ, ವಾರದ ದಿನಗಳಲ್ಲಿಯೂ ನಿಯೋಜಿಸಲಾಗುತ್ತದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.