“ಬಿಯರ್ ಮಾರಾಟ ಮಾಡಲು ಅನುಮತಿ ಕೊಡಿ”: ಸಿಎಂಗೆ ವೈನ್ ಮಾರಾಟಗಾರರ ಮನವಿ
ವಿಧಾನಸೌಧದಲ್ಲಿ ಬಜೆಟ್ ಪೂರ್ವಭಾವಿ ಸಭೆ ನಡೆಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮದ್ಯ ಮಾರಾಟ ಸಂಸ್ಥೆಗಳ ಜೊತೆಯೂ ಚರ್ಚೆ ನಡೆಸಿದರು. ಬರೀ ವೈನ್ ಮಾರಾಟದಿಂದ ನಮಗೆ ಆದಾಯ ಇಲ್ಲದೇ ಲಾಸ್ ಆಗ್ತಿದೆ.
Published: 24th February 2022 03:50 PM | Last Updated: 24th February 2022 03:50 PM | A+A A-

ಸಿಎಂ ಬಸವರಾಜ ಬೊಮ್ಮಾಯಿ
ಬೆಂಗಳೂರು: ವಿಧಾನಸೌಧದಲ್ಲಿ ಬಜೆಟ್ ಪೂರ್ವಭಾವಿ ಸಭೆ ನಡೆಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮದ್ಯ ಮಾರಾಟ ಸಂಸ್ಥೆಗಳ ಜೊತೆಯೂ ಚರ್ಚೆ ನಡೆಸಿದರು. ಬರೀ ವೈನ್ ಮಾರಾಟದಿಂದ ನಮಗೆ ಆದಾಯ ಇಲ್ಲದೇ ಲಾಸ್ ಆಗ್ತಿದೆ. ಹೀಗಾಗಿ ವೈನ್ ಮಾರಾಟ ಮಾಡುವ ಲೈಸೆನ್ಸ್ ಇರುವವರಿಗೆ ಬಿಯರ್ ಮಾರಾಟ ಮಾಡಲು ಅನುಮತಿ ಕೊಡಿ ಎಂದು ಸಿಎಂ ಬಸವರಾಜ ಬೊಮ್ಮಯಿ ಗೆ ಅಬಕಾರಿ ಸಂಘಗಳ ಸದಸ್ಯರು ಮನವಿ ಮಾಡಿದರು.
ಪ್ರತಿವರ್ಷ ವೈನರಿಗಳ ಸಂಖ್ಯೆ ಕಡಿಮೆ ಆಗ್ತಿದೆ. ಸದ್ಯ ಸಾವಿರ ವೈನರಿಗಳ ಪೈಕಿ 300 ವೈನರಿಗಳು ಮಾತ್ರ ನಡೆಯುತ್ತಿವೆ. ಹೀಗಾಗಿ ನಮ್ಮ ಸಹಾಯಕ್ಕೆ ಬರುವಂತೆ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ ಮದ್ಯ ಮಾರಾಟ ಸಂಸ್ಥೆಗಳು, ವೈನರಿ ಮಾರುವ ಕಡೆ ಬಿಯರ್ ಮಾರಾಟ ಮಾಡಲು ಅನುಮತಿ ಕೊಡಬೇಕೆಂದು ಕೇಳಿಕೊಂಡರು.
ಇದನ್ನು ಓದಿ: ಬಿಜೆಪಿಯಲ್ಲಿ ನಮಗೆ ಯಾವುದೇ ಸಮಸ್ಯೆಯಿಲ್ಲ, ಕಾಂಗ್ರೆಸ್ ಬಾಗಿಲನ್ನ ಯಾರು ತಟ್ಟುತ್ತಾರೆ?: ಸಚಿವ ಕೆ.ಗೋಪಾಲಯ್ಯ ಪ್ರಶ್ನೆ
ಮದ್ಯ ಮಾರಾಟದ ಕಮಿಷನ್ ಹೆಚ್ಚಳ ವಿಚಾರ ಕುರಿತು ಸಭೆಯ ನಂತರ ಮಾತನಾಡಿದ ಅಬಕಾರಿ ಸಚಿವ ಗೋಪಾಲಯ್ಯ, ಮದ್ಯ ಮಾರಾಟ ಸಂಘಗಳು ಮುಖ್ಯಮಂತ್ರಿಯವರ ಗಮನಕ್ಕೆ ತಂದಿದ್ದಾರೆ. ಆರ್ಥಿಕ ಇಲಾಖೆ ಜತೆ ಸಿಎಂ ಚರ್ಚೆ ಮಾಡಿ ನಿರ್ಧಾರ ಮಾಡ್ತಾರೆ. 23,247 ಕೋಟಿ ನಾವು ತೆರಿಗೆ ಸಂಗ್ರಹ ಮಾಡಿದ್ದೇವೆ. 25 ಕೋಟಿ ಸಾವಿರ ನಾವು ರೀಚ್ ಆಗ್ತೀವಿ. ಕೋವಿಡ್ ಸಮಯದಲ್ಲೂ ನಮ್ಮ ಟಾರ್ಗೆಟ್ ರೀಚ್ ಆಗಿದ್ದೇವೆ. ಈ ವರ್ಷ ಟಾರ್ಗೆಟ್ ಮೀರಿ ತೆರಿಗೆ ಸಂಗ್ರಹವಾಗುತ್ತೆ ಎಂದರು.
ಬಜೆಟ್ ಪೂರ್ವಭಾವಿ ಸಭೆಯಲ್ಲಿ ಹಲವು ವಿಚಾರಗಳು ಚರ್ಚೆ ಆಗಿದೆ. ನಾಳೆ ಆರ್ಥಿಕ ಇಲಾಖೆಯ ಅಧಿಕಾರಿಗಳ ಜತೆ ನಮ್ಮ ಇಲಾಖೆ ಅಧಿಕಾರಿಗಳೊಂದಿಗೆ ಸಿಎಂ ಸಭೆ ಮಾಡ್ತಾರೆ. ಸಂಸ್ಥೆಗಳ ಸದಸ್ಯರು ಕೊಟ್ಟಂತಹ ಸಲಹೆ ಮತ್ತು ಮನವಿಗಳನ್ನ ಸಿಎಂ ಆಲಿಸಿದ್ದಾರೆ ಎಂದು ಕೆ.ಗೋಪಾಲಯ್ಯ ತಿಳಿಸಿದರು.