‘ನನ್ನ ನಗರ ನನ್ನ ಬಜೆಟ್’ ಅಭಿಯಾನಕ್ಕೆ ಬಿಬಿಎಂಪಿ ಚಾಲನೆ
ನಗರದ ಬಜೆಟ್‍ನಲ್ಲಿ ಜನರು ಭಾಗವಹಿಸುವಂತೆ ಮಾಡುವ ಉದ್ದೇಶದಿಂದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮತ್ತು ಜನಾಗ್ರಹ ಪ್ರತಿಷ್ಠಾನವು ನನ್ನ ನಗರ ನನ್ನ ಬಜೆಟ್ ಅಭಿಯಾನಕ್ಕೆ ಬುಧವಾರ ಚಾಲನೆ ನೀಡಿದೆ.
Published: 24th February 2022 01:22 PM | Last Updated: 24th February 2022 01:38 PM | A+A A-

‘ನನ್ನ ನಗರ ನನ್ನ ಬಜೆಟ್’ ಅಭಿಯಾನದಲ್ಲಿ ಪಾಲ್ಗೊಂಡು ಅಭಿಪ್ರಾಯ ವ್ಯಕ್ತಪಡಿಸುತ್ತಿರುವ ಮಹಿಳೆ.
ಬೆಂಗಳೂರು: ನಗರದ ಬಜೆಟ್‍ನಲ್ಲಿ ಜನರು ಭಾಗವಹಿಸುವಂತೆ ಮಾಡುವ ಉದ್ದೇಶದಿಂದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮತ್ತು ಜನಾಗ್ರಹ ಪ್ರತಿಷ್ಠಾನವು ನನ್ನ ನಗರ ನನ್ನ ಬಜೆಟ್ ಅಭಿಯಾನಕ್ಕೆ ಬುಧವಾರ ಚಾಲನೆ ನೀಡಿದೆ.
2015 ರಿಂದಲೂ ಅಭಿಯಾನವನ್ನು ನಡೆಸಿಕೊಂಡು ಬರುತ್ತಿದ್ದು, ಬಿಬಿಎಂಪಿ ಬಜೆಟ್‌ನಲ್ಲಿ ನಾಗರಿಕರ ಭಾಗವಹಿಸುವಿಕೆಯನ್ನು ಸುಗಮಗೊಳಿಸುವುದು ಇದರ ಉದ್ದೇಶವಾಗಿದೆ.
ಈ ವರ್ಷ, MyCityMyBudget ಅಭಿಯಾನವು ಉದ್ಯಾನವನಗಳು, ಫುಟ್‌ಪಾತ್‌ಗಳು ಮತ್ತು ಸಾರ್ವಜನಿಕ ಶೌಚಾಲಯಗಳ ಮೇಲೆ ವಿಶೇಷ ಗಮನ ಹರಿಸುವುದರೊಂದಿಗೆ ನಾಗರಿಕರಿಂದ ಅಭಿಪ್ರಾಯ ಸಂಗ್ರಹಿಸುವುದರ ಮೇಲೆ ಕೇಂದ್ರೀಕರಿಸುತ್ತದೆ. ‘ಬಜೆಟ್ ಬಸ್’ ಮಾರ್ಚ್ 15 ರವರೆಗೆ ನಗರದಾದ್ಯಂತ ಸಂಚರಿಸುತ್ತದೆ ಮತ್ತು ಬೆಂಗಳೂರಿನ ವಿವಿಧ ನೆರೆಹೊರೆಗಳ ಜನರಿಂದ ಅಭಿಪ್ರಾಯಗಳನ್ನು ಸಂಗ್ರಹಿಸುತ್ತದೆ. ನಾಗರಿಕರು http://mycitymybudget.in ಗೆ ಲಾಗ್ ಇನ್ ಮಾಡಬಹುದು ಮತ್ತು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಬಹುದಾಗಿದೆ.
ಜನರಿಂದ ಸಂಗ್ರಹಿಸಲಾದ ಎಲ್ಲಾ ಅಭಿಪ್ರಾಯಗಳನ್ನು ಜನಾಗ್ರಹ ಪ್ರತಿಷ್ಟಾನವು ಒಟ್ಟುಗೂಡಿಸಿ, ವಿಶ್ಲೇಷಿಸಿ ಬಿಬಿಎಂಪಿಗೆ ವರದಿ ಸಲ್ಲಿಸುತ್ತದೆ.
ಕಳೆದ ಬಾರಿ ಪಾದಚಾರಿ ಮಾರ್ಗ ಮತ್ತು ಯೆಲ್ಲೋ ಸ್ಪಾಟ್(ತೆರೆದ ಸ್ಥಳಗಳಲ್ಲಿ ಮೂತ್ರ ವಿಸರ್ಜನೆ) ಬಗ್ಗೆ ಗಮನ ಹರಿಸಲಾಗಿತ್ತು. ಈ ಬಾರಿ ಉದ್ಯಾನವನ, ಪಾದಚಾರಿ ಮಾರ್ಗ ಹಾಗೂ ಸಾರ್ವಜನಿಕ ಶೌಚಾಲಯಗಳ ಬಗ್ಗೆ ನಾಗರಿಕರ ಸಲಹೆಯನ್ನು ನಿರೀಕ್ಷಿಸಲಾಗುತ್ತಿದೆ. ಬಿಬಿಎಂಪಿಯ ಈ ಉಪಕ್ರಮವು ವಾರ್ಡ್ ಸಮಿತಿಗಳಿಗೆ ಹಂಚಿಕೆ ಹೆಚ್ಚಳದ ಬಗ್ಗೆ ಜನರಲ್ಲಿನ ನಿರೀಕ್ಷೆಗಳನ್ನು ಹೆಚ್ಚಿಸಿದೆ. 2021–22ನೇ ಸಾಲಿನ ಬಜೆಟ್‌ನಲ್ಲಿ ಬಿಬಿಎಂಪಿಯು ಪ್ರತಿ ವಾರ್ಡ್‌ಗೆ ತಲಾ ರೂ.60 ಲಕ್ಷ ಅನುದಾನವನ್ನು ಕಾಯ್ದಿರಿಸಿತ್ತು
ಜನಾಗ್ರಹ ಪ್ರತಿಷ್ಠಾನದ ಮುಖ್ಯಸ್ಥ ಶ್ರೀನಿವಾಸ್ ಅಲವಿಲ್ಲಿ ಅವರು ಮಾತನಾಡಿ, ನಗರದ ಬಜೆಟ್ ಸಿದ್ಧಪಡಿಸಲು ಬಿಬಿಎಂಪಿಯು ಸಿದ್ಧತೆ ನಡೆಸುತ್ತಿದ್ದು, ಜನರಗ ಅಭಿಪ್ರಾಯಕ್ಕೆ ಆಹ್ವಾನ ನೀಡಿದೆ. ದೇಶದ ಕೆಲವ ನಗರಗಳು ಇಂತಹ ಅವಕಾಶಗಳನ್ನು ನೀಡಿದೆ.
ಪಾಲಿಕೆ ಮುಖ್ಯ ಆಯುಕ್ತ ಗೌರವ್ ಗುಪ್ತಾ ಅವರು ಮಾತನಾಡಿ, ‘ಈ ಅಭಿಯಾನದಲ್ಲಿ ಸಾರ್ವಜನಿಕರು ಸಕ್ರಿಯವಾಗಿ ಭಾಗವಹಿಸಬೇಕು. ಆಡಳಿತ ಪ್ರಕ್ರಿಯೆಯಲ್ಲಿ ಸಾರ್ವಜನಿಕರ ಪಾಲ್ಗೊಳ್ಳುವಿಕೆ ವಿಚಾರದಲ್ಲಿ ದೇಶದ ಇತರ ಮಹಾನಗರಗಳಿಗೆ ಹೋಲಿಸಿದಾಗ ಬೆಂಗಳೂರು ಸಾಕಷ್ಟು ಮುಂದಿದೆ. ನಗರದಲ್ಲಿ ವಾರ್ಡ್ ಸಮಿತಿಗಳು ಕೂಡ ಸಕ್ರಿಯವಾಗಿ ಕಾರ್ಯ ನಿರ್ವಹಿಸುತ್ತಿವೆ ಎಂದು ಹೇಳಿದ್ದಾರೆ.