ಮಧ್ಯಂತರ ಆದೇಶ ವಿದ್ಯಾರ್ಥಿಗಳಿಗೆ ಮಾತ್ರ ಅನ್ವಯ ಶಿಕ್ಷಕಿಯರಿಗಲ್ಲ: ಹೈಕೋರ್ಟ್ ಸ್ಪಷ್ಟನೆ
ಯಾವುದೇ ಧರ್ಮ ಅಥವಾ ನಂಬಿಕೆಗೆ ಸೇರಿದ ವಿದ್ಯಾರ್ಥಿಗಳು ಕೇಸರಿ ಶಾಲು, ಶಿರವಸ್ತ್ರ, ಹಿಜಾಬ್, ಧಾರ್ಮಿಕ ಬಾವುಟಗಳನ್ನು ಮುಂದಿನ ಆದೇಶದವರೆಗೆ ತರಗತಿಗೆ ಕೊಂಡೊಯ್ಯುವಂತಿಲ್ಲ..
Published: 24th February 2022 12:02 AM | Last Updated: 24th February 2022 01:29 PM | A+A A-

ಕರ್ನಾಟಕ ಹೈಕೋರ್ಟ್
ಬೆಂಗಳೂರು: 'ಯಾವುದೇ ಧರ್ಮ ಅಥವಾ ನಂಬಿಕೆಗೆ ಸೇರಿದ ವಿದ್ಯಾರ್ಥಿಗಳು ಕೇಸರಿ ಶಾಲು, ಶಿರವಸ್ತ್ರ, ಹಿಜಾಬ್, ಧಾರ್ಮಿಕ ಬಾವುಟಗಳನ್ನು ಮುಂದಿನ ಆದೇಶದವರೆಗೆ ತರಗತಿಗೆ ಕೊಂಡೊಯ್ಯುವಂತಿಲ್ಲ' ಎಂಬ ಫೆಬ್ರವರಿ 10ರ ನಮ್ಮ ಆದೇಶವು ವಿದ್ಯಾರ್ಥಿಗಳಿಗೆ ಮಾತ್ರ ಅನ್ವಯಿಸುತ್ತದೆ ಎಂದು ಕರ್ನಾಟಕ ಹೈಕೋರ್ಟ್ ಮೌಖಿಕವಾಗಿ ಸ್ಪಷ್ಟಪಡಿಸಿತು.
ಶಿಕ್ಷಕಿಯರು ತಲೆಗೆ ಹಾಕಿಕೊಂಡಿರುವ ಶಿರವಸ್ತ್ರವನ್ನು ಬಲವಂತವಾಗಿ ತೆಗೆಸಲಾಗುತ್ತಿದೆ ಎಂದು ವಿಚಾರಣೆಯ ಅಂತ್ಯದಲ್ಲಿ ವಕೀಲರೊಬ್ಬರು ಪೀಠದ ಗಮನಸೆಳೆದಾಗ 'ಆದೇಶವು ವಿದ್ಯಾರ್ಥಿಗಳಿಗೆ ಮಾತ್ರ ಅನ್ವಯಿಸುತ್ತದೆ' ಎಂದು ಸ್ಪಷ್ಟನೆ ನೀಡಿತು.
ಇದನ್ನೂ ಓದಿ: ಹಿಜಾಬ್ ವಿವಾದ: ಡಿಗ್ರಿ ಅಥವಾ ಪಿಜಿ ಆಗಿರಲಿ ವಿಷಯ ಇತ್ಯರ್ಥ ಆಗುವವರೆಗೂ ನಿಗದಿತ ಸಮವಸ್ತ್ರ ಪಾಲಿಸಬೇಕು- ಹೈಕೋರ್ಟ್ ಸ್ಪಷ್ಟನೆ
ಸಮವಸ್ತ್ರ ಸೂಚಿಸಿರುವ ಪದವಿ ಮತ್ತು ಪದವಿ ಪೂರ್ವ ಕಾಲೇಜುಗಳಿಗೂ ಮಧ್ಯಂತರ ಆದೇಶ ಅನ್ವಯಿಸುತ್ತದೆ. 'ಸಮವಸ್ತ್ರವನ್ನು ಸೂಚಿಸಲಾಗಿದ್ದರೆ ಅದು ಪದವಿ ಕಾಲೇಜು ಅಥವಾ ಸರ್ಕಾರಿ ಕಾಲೇಜು ಅಥವಾ ಪದವಿ ಪೂರ್ವ ಕಾಲೇಜಾಗಿದ್ದರೂ ಪೀಠದ ಆದೇಶ ಪಾಲಿಸಬೇಕು' ಎಂದಿತು.