'ನಾಗರಿಕ ಸ್ನೇಹಿ' ಪೊಲೀಸ್ ವೆಬ್ ಸೈಟ್ ಸಿದ್ಧಪಡಿಸಿ: ಡಿಜಿಪಿ ಪ್ರವೀಣ್ ಸೂದ್ ಆದೇಶ
ರಾಜ್ಯಾದ್ಯಂತ ಪೊಲೀಸ್ ಘಟಕ ಅಧಿಕಾರಿಗಳು ಇಲಾಖೆಯ ವೆಬ್ ಸೈಟ್ ಗಳನ್ನು ಮಾಹಿತಿ ಪೂರ್ಣವಾಗಿಸಿ ನಾಗರಿಕರನ್ನು ಸೆಳೆಯಬೇಕು ಎಂದು ಡಿಜಿ ಮತ್ತು ಐಜಿಪಿ ಪ್ರವೀಣ್ ಸೂದ್ ಕರೆ ನೀಡಿದ್ದಾರೆ.
Published: 24th February 2022 12:47 PM | Last Updated: 24th February 2022 01:38 PM | A+A A-

ಡಿಜಿ ಮತ್ತು ಐಜಿಪಿ ಪ್ರವೀಣ್ ಸೂದ್
ಬೆಂಗಳೂರು: ರಾಜ್ಯಾದ್ಯಂತ ಪೊಲೀಸ್ ಘಟಕ ಅಧಿಕಾರಿಗಳು ಇಲಾಖೆಯ ವೆಬ್ ಸೈಟ್ ಗಳನ್ನು ಮಾಹಿತಿ ಪೂರ್ಣವಾಗಿಸಿ ನಾಗರಿಕರನ್ನು ಸೆಳೆಯಬೇಕು ಎಂದು ಡಿಜಿ ಮತ್ತು ಐಜಿಪಿ ಪ್ರವೀಣ್ ಸೂದ್ ಕರೆ ನೀಡಿದ್ದಾರೆ. ಪೊಲೀಸ್ ಇಲಾಖೆಯ ವೆಬ್ ಸೈಟ್ ಗಳನ್ನು ಕನಿಷ್ಠ ತಿಂಗಳಿಗೊಮ್ಮೆ ಅಪ್ ಡೇಟ್ ಮಾಡಲು ನಿರ್ದಿಷ್ಟ ಸಿಬ್ಬಂದಿಯನ್ನು ನೇಮಿಸಿ ಅವರು ವೃತ್ತಿಪರರಾಗಿ ಕೆಲಸ ಮಾಡುವಂತೆ ನೋಡಿಕೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
ಈ ಸಂಬಂಧ ಅವರು ಎಲ್ಲಾ ಪೊಲೀಸ್ ಆಯುಕ್ತರು, ಐಜಿಪಿಗಳು, ಜಿಲ್ಲಾ ಪೊಲೀಸ್ ಸೂಪರಿಂಟೆಂಡೆಂಟ್, ರೈಲ್ವೆ ಮತ್ತು ಘಟಕಾಧಿಕಾರಿಗಳಿಗೆ ಆಂತರಿಕ ಸೂಚನೆ ನೀಡಿದ್ದಾರೆ. ಈ ಬಗ್ಗೆ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ಮಾಹಿತಿ ನೀಡಿದ ಡಿಜಿಪಿ ಪ್ರವೀಣ್ ಸೂದ್, ವೆಬ್‌ಸೈಟ್ ನಾಗರಿಕರು ಮತ್ತು ಸರ್ಕಾರದ ನಡುವಿನ ನಡುವೆ ಕೊಂಡಿಯಂತೆ ಪಾತ್ರವನ್ನು ವಹಿಸುತ್ತದೆ. ಇದು ಬಲವಾದ ಸಂವಾದಾತ್ಮಕ ಮಾಧ್ಯಮವೂ ಆಗಬಹುದು. ಪೊಲೀಸ್ ಇಲಾಖೆ ವೆಬ್ ಸೈಟ್ ನ್ನು ಅಪ್ ಡೇಟ್ ಮಾಡಲು ನಿರ್ದಿಷ್ಟ ತಂಡವನ್ನು ಸ್ಥಾಪಿಸಲು ಹೇಳಿದ್ದೇನೆ ಎನ್ನುತ್ತಾರೆ.
ಕರ್ನಾಟಕ ಪೊಲೀಸ್ ಇಲಾಖೆಗೆ ಸಂಬಂಧಪಟ್ಟ 45 ವೆಬ್ ಸೈಟ್ ಗಳಿವೆ. ಒಂದು ಪ್ರತಿ ಜಿಲ್ಲೆಗೆ ಮತ್ತು ಒಂದು ಆಯುಕ್ತರ ಮಟ್ಟದಲ್ಲಾಗಿರುತ್ತದೆ. ಅವುಗಳಲ್ಲಿ ಶೇಕಡಾ 99ರಷ್ಟು ವೈವಿಧ್ಯಮಯವಾಗಿದ್ದು, ಕೆಲವು ಕಳೆದ 10 ವರ್ಷಗಳಿಂದ ಅಪ್ ಡೇಟ್ ಮಾಡಿಲ್ಲ. ಕಾಲಕಾಲಕ್ಕೆ ಅಪ್ ಡೇಟ್ ಆಗಿರಬೇಕು ಎಂದು ಪ್ರವೀಣ್ ಸೂದ್ ಹೇಳುತ್ತಾರೆ.
ಕರ್ನಾಟಕ ರೈಲ್ವೇ, ವಿಧಿವಿಜ್ಞಾನ ಪ್ರಯೋಗಾಲಯ ನಿರ್ದೇಶನಾಲಯ, ಕರ್ನಾಟಕ ಪೊಲೀಸ್ ಅಕಾಡೆಮಿ, ಬೆಂಗಳೂರು ನಗರ ಪೊಲೀಸ್, ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳು, ಕರ್ನಾಟಕ ಗೃಹರಕ್ಷಕ ದಳ ಮತ್ತು ನಾಗರಿಕ ರಕ್ಷಣಾ ಇಲಾಖೆ ಮತ್ತು ಸಿಐಡಿ ಸೈಬರ್‌ಕ್ರೈಮ್ ಇಲಾಖೆಗಳು ತಮ್ಮ ಸೈಟ್‌ಗಳು ನಿಯಮಿತ ನವೀಕರಣಗಳೊಂದಿಗೆ ಅತ್ಯುತ್ತಮ ಸ್ಥಿತಿಯಲ್ಲಿವೆ ಎಂದು ಐಜಿ ಪ್ರವೀಣ್ ಸೂದ್ ಶ್ಲಾಘಿಸಿದ್ದಾರೆ. ಕರ್ನಾಟಕ ರಾಜ್ಯ ಪೊಲೀಸ್ ವೆಬ್‌ಸೈಟ್ ಅನ್ನು ಹೆಚ್ಚು ಆಕರ್ಷಕ ಮತ್ತು ನಾಗರಿಕ ಸ್ನೇಹಿಯನ್ನಾಗಿ ಮಾಡುವ ಕೆಲಸ ನಡೆಯುತ್ತಿದೆ ಎಂದು ಹೇಳಿದ್ದಾರೆ.