ಉಕ್ರೇನ್‌ನಲ್ಲಿ ಸಿಲುಕಿದ ಬೆಳಗಾವಿಯ ಇಬ್ಬರು ವೈದ್ಯಕೀಯ ವಿದ್ಯಾರ್ಥಿನಿಯರು
ಬೆಳಗಾವಿಯ ಇಬ್ಬರು ವೈದ್ಯಕೀಯ ವಿದ್ಯಾರ್ಥಿನಿಯರು ಯುದ್ಧ ಪೀಡಿತ ಉಕ್ರೇನ್‌ನಲ್ಲಿ ಸಿಲುಕಿಕೊಂಡಿದ್ದಾರೆ. ಉಕ್ರೇನ್‌ನಲ್ಲಿ ಸಿಲುಕಿರುವ ಭಾರತದ 100 ವಿದ್ಯಾರ್ಥಿಗಳಲ್ಲಿ ಪ್ರಿಯಾ ಭಗವಂತ ನಿಡಗುಂದಿ...
Published: 24th February 2022 07:03 PM | Last Updated: 24th February 2022 07:03 PM | A+A A-

ಉಕ್ರೇನ್ ಮೇಲೆ ರಷ್ಯಾ ವಾಯುದಾಳಿ
ಬೆಳಗಾವಿ: ಬೆಳಗಾವಿಯ ಇಬ್ಬರು ವೈದ್ಯಕೀಯ ವಿದ್ಯಾರ್ಥಿನಿಯರು ಯುದ್ಧ ಪೀಡಿತ ಉಕ್ರೇನ್‌ನಲ್ಲಿ ಸಿಲುಕಿಕೊಂಡಿದ್ದಾರೆ. ಉಕ್ರೇನ್‌ನಲ್ಲಿ ಸಿಲುಕಿರುವ ಭಾರತದ 100 ವಿದ್ಯಾರ್ಥಿಗಳಲ್ಲಿ ಪ್ರಿಯಾ ಭಗವಂತ ನಿಡಗುಂದಿ ಮತ್ತು ಅಮೋಘ ಚೌಗುಲ ಅವರು ಬೆಳಗಾವಿಯವರಾಗಿದ್ದಾರೆ.
ಪ್ರಿಯಾ ನಿಡಗುಂದಿ ರಾಯಬಾಗ ತಾಲೂಕಿನ ಕಂಕಣವಾಡಿ ಗ್ರಾಮದವರಾಗಿದ್ದು, ಅಮೋಘ ಚೌಗುಲ ಗೋಕಾಕ ತಾಲೂಕಿನ ಘಟಪ್ರಭಾದವರಾಗಿದ್ದಾರೆ. ಸದ್ಯ ಹಾಸ್ಟೆಲ್‌ನಲ್ಲಿ ವಾಸವಾಗಿದ್ದಾರೆ.
ಇದನ್ನು ಓದಿ: ಉಕ್ರೇನ್ ವಿಮಾನ ನಿಲ್ದಾಣದಲ್ಲಿ ಸಿಲುಕಿರುವ ರಾಜ್ಯದ ವಿದ್ಯಾರ್ಥಿಗಳು: ಸುರಕ್ಷತೆ ಭರವಸೆ ನೀಡಿದ ಸಿಎಂ ಬೊಮ್ಮಾಯಿ
ಮೂಲಗಳ ಪ್ರಕಾರ, ಈ ಇಬ್ಬರು ವಿದ್ಯಾರ್ಥಿನಿಯರು ಭಾರತಕ್ಕೆ ಮರಳಲು ಫೆಬ್ರವರಿ 26ರ ವಿಮಾನವನ್ನು ಕಾಯ್ದಿರಿಸಿದ್ದಾರೆ. ಆದಾಗ್ಯೂ, ಎಲ್ಲಾ ಅಂತರಾಷ್ಟ್ರೀಯ ವಿಮಾನಗಳು ಪೂರ್ಣವಾಗಿ ಚಾಲನೆಯಲ್ಲಿವೆ. ಆದರೂ ಅವರು ಭಾರತಕ್ಕೆ ಮರಳಲು ಸೀಟು ಪಡೆಯುವ ಬಗ್ಗೆ ಯಾವುದೇ ಖಚಿತತೆ ಇಲ್ಲ.
ಈ ಇಬ್ಬರು ಬಾಲಕಿಯರ ಪೋಷಕರನ್ನು ಸಂಪರ್ಕಿಸಲಾಗಿದೆ ಎಂದು ಬೆಳಗಾವಿ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಅವರು ತಿಳಿಸಿದ್ದಾರೆ.
'ಪೋಷಕರು ತಮ್ಮ ಹೆಣ್ಣು ಮಕ್ಕಳೊಂದಿಗೆ ಸಂಪರ್ಕದಲ್ಲಿದ್ದಾರೆ. ಇಬ್ಬರೂ ಸುರಕ್ಷಿತ ಸ್ಥಳದಲ್ಲಿದ್ದು, ಫೆಬ್ರವರಿ 26ರ ವಿಮಾನವನ್ನು ಕಾಯ್ದಿರಿಸಿದ್ದಾರೆ ಎಂದು ಅವರು ಹೇಳಿದ್ದಾರೆ. ವಿದ್ಯಾರ್ಥಿಗಳ ಸುರಕ್ಷಿತ ಮರಳುವಿಕೆಗಾಗಿ ಮತ್ತು ಅವರೊಂದಿಗೆ ಸಂಪರ್ಕವನ್ನು ಮುಂದುವರೆಸಲು ನಾನು ವಿದೇಶಾಂಗ ಸಚಿವಾಲಯಕ್ಕೆ ಮೇಲ್ ಮಾಡಿದ್ದೇನೆ' ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ್ ಕಾರಜೋಳ ಮಾತನಾಡಿ, 'ಉಕ್ರೇನ್‌ನಲ್ಲಿ ಪರಿಸ್ಥಿತಿ ಸರಿಯಿಲ್ಲದ ಕಾರಣ ಭಾರತಕ್ಕೆ ಹಿಂತಿರುಗುವಂತೆ ಭಾರತ ಸರ್ಕಾರ ನಾಲ್ಕು ದಿನಗಳ ಹಿಂದೆಯೇ ಉಕ್ರೇನ್‌ನಲ್ಲಿ ತಂಗಿರುವ ಭಾರತೀಯ ವಿದ್ಯಾರ್ಥಿಗಳಿಗೆ ಸೂಚನೆ ನೀಡಿತ್ತು. ಕೆಲವರು ಹಿಂತಿರುಗಿದ್ದಾರೆ. ಇನ್ನೂ ಕೆಲವು ಉಕ್ರೇನ್‌ನಲ್ಲಿ ಸಿಲುಕಿಕೊಂಡಿದ್ದು, ಅವರ ಪೋಷಕರ ನನಗೆ ಫೋನ್ ಮಾಡುತ್ತಿದ್ದಾರೆ. ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಮನೆಗೆ ಕರೆತರಲು ನಮ್ಮ ಸರ್ಕಾರ ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದೆ ಎಂದಿದ್ದಾರೆ.